2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್!

In the 2023 elections, four times more cash and materials were seized at the checkposts than in the 2018 elections. SP issues warning to rowdy sheeters!

2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್!
2018 ಚುನಾವಣೆಗಿಂತಲೂ 2023 ರ ಎಲೆಕ್ಷನ್​ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಯ್ತು ಜಪ್ತು ಮಾಲು! ರೌಡಿ ಶೀಟರ್​ಗಳಿಗೆ ಎಸ್​ಪಿ ನೀಡಿದ್ರು ವಾರ್ನಿಂಗ್!

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಶಿವಮೊಗ್ಗ ಜಿಲ್ಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕವಾಗಿ ಮತದಾನ ನಡೆಯಲು ಸಿದ್ಧತೆ ಕೈಗೊಳ್ಳಲಾಗಿದೆ. ಒಂದು ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದ ಡಾ‌. ಸೆಲ್ವಮಣಿ ತಿಳಿಸಿದರು.

ಟ್ರಸ್ಟ್​ ನಲ್ಲಿ ಸಂವಾದ

ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರ್ತಾ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್​ಪಿ ಮಿಥುನ್​ ಕುಮಾರ್, ಹಾಗೂ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಸಿಇಒ ಸ್ನೇಹಲ್​ ಲೋಖಂಡೆ ಯವರು ವಿವಿಧ ರೀತಿಯ ಮಾಹಿತಿಗಳನ್ನು ಒದಗಿಸಿದರು. 

ನೀತಿ ಸಂಹಿತೆ ಉಲ್ಲಂಘಿಸಿದರೇ ಕ್ರಮ 

ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಮಿತಿ ಉಲ್ಲಂಘನೆ ಕಂಡು ಬಂದಲ್ಲಿ ಕಟ್ಟುನಿಟಿನ ಕ್ರಮ ಜರುಗಿಸಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಿದೆ. ಮಾದರಿ ನೀತಿ ಸಮಿತಿ ಪ್ರತಿಯೊಬ್ಬರಿಗೂ ಅನ್ವಯ ಆಗಲಿದ್ದು, ಯಾರು ಕೂಡ ಉಲ್ಲಂಘನೆ ಮಾಡಬಾರದು ಎಂದರು.

ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಬಹುದು!

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 40 ಲಕ್ಷ ರೂ. ವರೆಗೂ ಖರ್ಚು ಮಾಡುವುದಕ್ಕೆ ಅವಕಾಶವಿದೆ. ಖರ್ಚು, ವೆಚ್ಚದ ಸಂಪೂರ್ಣ ಮಾಹಿತಿ ನೀಡಬೇಕು. ಇದಕ್ಕಾಗಿ ಅಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡುವುದು ಕಂಡು ಬಂದರೆ ಚುನಾವಣಾ ಆಯೋಗದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

ಧಾರ್ಮಿಕ ಸ್ಥಳಗಳಲ್ಲಿ ರಾಜಕಾರಣ ಸರಿಯಲ್ಲ

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.  ಸಮರ್ಪಕ ದಾಖಲಾತಿ ಇಲ್ಲದ ನಗದು ಹಾಗೂ ವಿವಿಧ ವಸ್ತುಗಳು, ಮಧ್ಯ ವಶಕ್ಕೆ ಪಡೆಯಲಾಗಿದೆ. ಅಭ್ಯರ್ಥಿಗಳು ಮತದಾರರನ್ನು ಒಲಿಸಲು ಯಾವುದೇ ರೀತಿಯಲ್ಲಿ ಆಮಿಷ ಒಡ್ಡಬಾರದು. ಧಾರ್ಮಿಕ ಸ್ಥಳಗಳಲ್ಲೂ ರಾಜಕೀಯ ಚಟುವಟಿಕೆ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

ರೌಡಿಶೀಟರ್​ಗಳಿಗೆ ನ್ಯಾಯಾಂಗ ಬಂಧನ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್ ಮಾತನಾಡಿ, ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೂ ಸುಮಾರು 1300ಕ್ಕೂ ಹೆಚ್ಚು ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿನ  ರೌಡಿ ಶೀಟರ್​ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಒಟ್ಟು 61 ಮಂದಿಯನ್ನು ಗಡಿಪಾರು ಮಾಡುವಂತೆ ಶಿಫಾರಸು ಮಾಡಲಾಗಿದ್ದು, ಅದರಲ್ಲಿ 51 ಮಂದಿ ಗಡಿಪಾರು ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಗಡಿಪಾರು ಮಾಡಲಾದಂತಹ ಜಿಲ್ಲೆಗಳಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಅಲ್ಲದೆ, ಆರು ಜನರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ ಎಂದರು.

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

ನಾಲ್ಕು ಪುಟ್ಟ ಹೆಚ್ಚಾಯ್ತಾ ಚುನಾವಣಾ ಅಕ್ರಮ

ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ವಿವಿಧಡೆ 36 ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ನಗದು, ಮಧ್ಯ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸುಮಾರು 4.69 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಇಲ್ಲಿವರೆಗೂ ಅಂದಾಜು 17 ಕೋಟಿ ಮೌಲ್ಯದ ನಗದು, ವಸ್ತು, ಆಭರಣಗಳನ್ನು ಸೀಜ್ ಮಾಡಲಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ, ಇದು ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. 

 Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಎಸ್. ಲೋಖಂಡೆ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ನೂರರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಶೇಕಡವಾರು ಮತದಾನ ಇನ್ನಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.  ಸಮೋದ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್‌  ಅಧ್ಯಕ್ಷ ಎನ್. ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರ್ತಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್ ಯಡಗೆರೆ, ಸಂತೋಷ ಕಾಚಿನಕಟ್ಟೆ, ನಾಗರಾಜ್ ನೇರಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನು ಸಹ ಓದಿ

Read /Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!? 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವ ರೂ! ನಿಜನಾ

Read / ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರೂಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ? 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರೂಹೇಳಿದ್ದೇನು?

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ  ಸ್ವಾರಸ್ಯ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda