ಸೂಳೇಬೈಲ್ ಪುಟ್ಟಪ್ಪನ ಕ್ಯಾಂಪ್ ಬಳಿ ಸಿಕ್ಕಿಬಿದ್ದ ಸದ್ದಾಂ ಹುಸೇನ್! ಏನಿದು ಕೇಸ್!?

Shivamogga police raided the accused who was selling ganja and arrested him. ಶಿವಮೊಗ್ಗ ಪೊಲೀಸರು ಗಾಂಜಾ ಮಾರುತ್ತಿದ್ದ ಆರೋಪಿ ಮೇಲೆ ದಾಳಿ ನಡೆಸಿ ಆತನನ್ನ ಬಂಧಿಸಿದ್ದಾರೆ.

ಸೂಳೇಬೈಲ್ ಪುಟ್ಟಪ್ಪನ ಕ್ಯಾಂಪ್ ಬಳಿ ಸಿಕ್ಕಿಬಿದ್ದ ಸದ್ದಾಂ ಹುಸೇನ್! ಏನಿದು ಕೇಸ್!?

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS  

ದಿನಾಂಕಃ 17-08-2023  ರಂದು ಶಿವಮೊಗ್ಗ ನಗರದ ಸೂಳೆಬೈಲಿನ ಪುಟ್ಟಪ್ಪ ಕ್ಯಾಂಪ್ ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರುತ್ತಿದ್ದುದ್ದು ಕಂಡುಬಂದಿದ್ದು, ಆತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾಋಎ.  ಡಿಸಿಆರ್.ಬಿ ವಿಭಾಗ ಪೊಲೀಸ್ ಉಪಾಧೀಕ್ಷಕರು ಪ್ರಭು ಡಿ.ಟಿ  ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸದ್ದಾಂ ಹುಸೇನ್ @ ಸಾಂಬಾ, 30 ವರ್ಷ, ಹೊಳಲೂರು ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿದ್ದಾರೆ. ಅಲ್ಲದೆ ಆರೋಪಿತನಿಂದ ಅಂದಾಜು  ಮೌಲ್ಯ 20,000/-  ರೂ ಗಳ 338 ಗ್ರಾಂ ತೂಕದ  ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುಧ್ದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0086/23 ಕಲಂ 20(b) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಶಿವಮೊಗ್ಗ-ಭದ್ರಾವತಿ ಪೊಲೀಸರ ದಿಢೀರ್ ನೈಟ್ ಆಪರೇಷನ್! ಕೆಲವೇ ಗಂಟೆಗಳಲ್ಲಿ 105 ಮಂದಿ ವಿರುದ್ಧ ಕೇಸ್

ಶಿವಮೊಗ್ಗ ಮತ್ತು ಭದ್ರಾವತಿ ಪೊಲೀಸರು ತಮ್ಮ ಎರಿಯಾಗಳ ವ್ಯಾಪ್ತಿಯಲ್ಲಿArea Domination ನಡೆಸಿದ್ದಾರೆ. ಮುಂಬರುವ ಹಬ್ಬಗಳ ಹಿನ್ನೆಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನ್ಯೂಸೆನ್ಸ್​ ಕ್ರಿಯೆಟ್ ಮಾಡುವುದನ್ನ ತಪ್ಪಿಸುವ ಸಲುವಾಗಿ ನಿನ್ನೆ ರಾತ್ರಿ ದಿಢೀರ್ ಆಪರೇಷನ್ ಕೈಗೊಂಡಿದ್ದಾರೆ. ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ  ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಲಾಗಿದೆ. ಈ ವೇಳೆ  Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 105 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ 05 ಜನರ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಒಟ್ಟು 05  ಪ್ರಕರಣಗಳನ್ನು ದಾಖಲಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್​ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು