ಬೆಂಗಳೂರು ಕಡೆ ಬಸ್​ ಇಲ್ಲದೆ KSRTC ಬಸ್​ಸ್ಟ್ಯಾಂಡ್​ನಲ್ಲಿ ಪರದಾಟ/ ಹುಡುಗನ ಮನೆ ಎದುರು ಲವ್ ಮ್ಯಾಟರ್​ ಕಿರಿಕ್/ ಪ್ರವಾಸಿಗರಿಗೆ ಪೊಲೀಸರ ಪಾಠ / ಟೆನ್ಶನ್​ ಕಡಿಮೆಗೆ ಸಹಾಯವಾಣಿ! TODAY@NEWS

Malenadu Today

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS 

ಬೆಂಗಳೂರು ಕಡೆಗೆ ಬಸ್ ಇಲ್ಲದೆ ಪರದಾಟ

ಶಿವಮೊಗ್ಗ ನಗರದ  KSRTC ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಪ್ರಯಾಣಿಕರು ಬೆಂಗಳೂರಿಗೆ ಸಮರ್ಪಕ ಬಸ್​ ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಪ್ರಯಾಣಿಕರು ಡಿಪೊಮ್ಯಾನಜರ್​ರನ್ನ ತರಾಟೆ ತೆಗೆದುಕೊಂಡರು. ಬೆಂಗಳೂರು ರೂಟ್​ನಲ್ಲಿ ಬಸ್​ ಸಂಚರಿಸದೇ ಇರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಇನ್ನೂ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಹೇಳಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. 

Malenadu Today

ಪ್ರೀತಿ ವಿಚಾರ, ಎರಡು ಕಡೆಯವರ ಜಗಳ

ಪ್ರೀತಿ ಪ್ರೇಮದ ವಿಚಾರವಾಗಿ ಹುಡುಗ ಹುಡುಗಿ ಮನೆಯವರ ನಡುವೆ ಗಲಾಟೆಯಾದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪ್ರೀತಿಸಿದ ಹುಡುಗಿಯ ಮನೆಯವರು ಹುಡುಗನ ಮನೆಯ ಬಳಿ ಗಲಾಟೆ ಮಾಡಿದ್ದಾರೆಂದು ಹುಡುಗನ ಕಡೆಯವರು ಆರೋಪಿಸಿದ್ಧಾರೆ. ಈ ಬಗ್ಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಎರಡುಕಡೆಯವರಿಗೂ ಸಮಾಧಾನ ಹೇಳಿದ್ಧಾರೆ. ಸ್ಟೇಷನ್​ಗೆ ಬಂದು ದೂರು ಸಲ್ಲಿಸುವಂತೆ ತಿಳಿಸಿದ್ಧಾರೆ. 

ಇಕ್ಕೇರಿಯಲ್ಲಿ ಪ್ರವಾಸಿಗರ ಕಿರಿಕ್

ಇನ್ನೂ  ಸಾಗರ ತಾಲ್ಲೂಕಿನ ಇಕ್ಕೇರಿ ದೇವಸ್ಥಾನದ ಬಳಿ ಪ್ರವಾಸಿಗರು ತಮ್ಮ ತಮ್ಮಲ್ಲಿಯೇ ಕಿರಿಕ್ ಮಾಡಿಕೊಂಡು ಗಲಾಟೆ ಮಾಡಿಕೊಂಡ ಬಗ್ಗೆ ಟೌನ್ ಪೊಲೀಸರಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು. ಪ್ರವಾಸಿಗರಿಗೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. 

 Malenadu Today

ಭುಗಿಲೆದ್ದ ಭೂಮಿಗಾಗಿ ಬಡಿದಾಟ

ಮಲೆನಾಡಲ್ಲಿ ಮಳೆ ಆರಂಭವಾಗುವ ಹೊತ್ತಿಗೆ ಭೂಮಿ ವಿಚಾರಕ್ಕೆ ಹೊಡೆದಾಟಗಳು ಸಹ ಜೋರಾಗಿ ನಡೆಯುತ್ತವೆ. ಇದಕ್ಕೆ ಈ ವರ್ಷವೂ ಹೊಸದೇನಲ್ಲ , ಹೊಲ, ಬೇಲಿ, ಮರ, ಸರ್ಕಾರಿ ಆಸ್ತಿಗಳಿಗಾಗಿಯು ಹೊಡೆದಾಟ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಾರಕ್ಕೆ ಕನಿಷ್ಟ ಹತ್ತು ಪ್ರಕರಣಗಳು ಹೊಡೆದಾಟದ ಪ್ರಕರಣಗಳು ದಾಖಲಾಗುತ್ತಿದೆ. ಪೂರಕವೆಂಬಂತೆ ಶಿವಮೊಗ್ಗದ  ತುಂಗಾನಗರ ಸ್ಠೇಷನ್​ನಲ್ಲಿ ಅಣ್ಣತಮ್ಮ ಹೊಡೆದಾಡಿದ ಬಗ್ಗೆ ದೂರು ದಾಖಲಾಗಿದೆ. ಅತ್ತ ತೀರ್ಥಹಳ್ಳಿಯಲ್ಲಿ ಪ್ಲಾಂಟೇಷನ್ ಮರ ಕಡಿಯುವ ವಿಚಾರಕ್ಕೆ ಅಕ್ಕಪಕ್ಕದವರು ಕಿತ್ತಾಡಿದ್ಧಾರೆ. 

Malenadu Today

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯವಾಣಿ

ವ್ಯಥೆಗೆ ಒಳಪಟ್ಟವರು, ಪರೀಕ್ಷೆ ಒತ್ತಡ, ಕೌಟುಂಬಿಕ ಸಮಸ್ಯೆ ಅನುಭವಿಸುತ್ತಿರುವವರು, ಆತ್ಮಹತ್ಯೆ ಆಲೋಚನೆ, ಮಾದಕ ವಸ್ತು ವ್ಯಸನಕ್ಕೆ ಒಳಗಾದವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಸಹಾಯವಾಣಿ 14416ಗೆ ಕರೆ ಮಾಡಲು ಪ್ರಕಟಣೆ ತಿಳಿಸಲಾಗಿದೆ. 

 

 

Share This Article