ಹೊಸಮನೆ ಹಾವಳಿ | ಸಿಟ್ಟಿಗೆದ್ದ MLA | ಅಧಿಕಾರಿಗಳ ಫೋನ್‌ ಕಾಲ್‌ಗೆ ಎಚ್ಚರಿಕೆ | ಕಾನೂನು ಸುವ್ಯವಸ್ಥೆ ವೈಫಲ್ಯ?

MLA S.N. Channabasappa has expressed outrage over an incident in Shivamogga's Hosamane Third Cross, blaming increased drug use and a deteriorating law and order situation for the incident. He questioned the Home Minister's claims of a good law and order situation and challenged him to visit Shivamogga and speak to the people

ಹೊಸಮನೆ  ಹಾವಳಿ | ಸಿಟ್ಟಿಗೆದ್ದ MLA | ಅಧಿಕಾರಿಗಳ ಫೋನ್‌ ಕಾಲ್‌ಗೆ ಎಚ್ಚರಿಕೆ | ಕಾನೂನು ಸುವ್ಯವಸ್ಥೆ ವೈಫಲ್ಯ?
mla sn channabasappa , Shivamogga Hosamane

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ 

ಶಿವಮೊಗ್ಗದ ಹೊಸಮನೆ ಮೂರನೇ ಕ್ರಾಸ್‌ ನಲ್ಲಿ ಭಯಭೀತಿ ಉಂಟುಮಾಡಿರುವ ಘಟನೆಯ ಬಗ್ಗೆ ಶಿವಮೊಗ್ಗ ನಗರ ಶಾಸಕ ಎಸ್‌ಎನ್‌ ಚನ್ನಬಸಪ್ಪ ಆಕ್ರೋಶ ಹೊರಹಾಕಿದ್ದಾರೆ. ಮಾದಕ ವಸ್ತುಗಳ ಸೇವನೆ ಶಿವಮೊಗ್ಗದಲ್ಲಿ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಎಲ್‌&ಒ ಸರಿ ಇದೆ ಎಂದು ಗೃಹಸಚಿವರು ಹೇಳುತ್ತಾರೆ. ಆದರೆ ಅವರು ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಬಂದು ಜನರ ಬಳಿ ಮಾತನಾಡಲಿ ಎಂದರು. 

ಜನರೇ ಗೂಂಡಾಗಳನ್ನಾಗುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸ್ತಿದೆ. ಏಕೆಂದರೆ ರೌಡಿಗಳ ಹಾವಳಿ ಮಿತೀಮೀರಿದ್ದು, ಅವರಿಂದ ಆತ್ಮರಕ್ಷಣೆಗೆ  ಜನರೇ ಗೂಂಡಾಗಳಾಗಬೇಕಾದ ಸನ್ನಿವೇಶವಿದೆ. ಸಿಟಿಯಲ್ಲಿ ಗಾಂಜಾ ಹಾವಳಿ ಹೆಚ್ಚಿರುವುದಕ್ಕೆ ಗೃಹಸಚಿವ ಇಲಾಖೆಯ ಜವಾಬ್ದಾರಿ ಹೊರಬೇಕಿದೆ. ನಾಗರಿಕರ ಸಮಾಜ ಸಹಜ ಜೀವನ ನಡೆಸಬೇಕಿದ್ದರೇ ಈ ರೀತಿಯ ಗೂಂಡಾಗಿರಿಗೆ ಕಂಟ್ರೋಲ್‌ ಮಾಡಬೇಕಿದೆ. ಆ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಎರಡು ರೌಡಿ ಗ್ಯಾಂಗ್‌ ವಾರ್‌ ಆದಾಗ ಕೌಂಟರ್‌ ಕೇಸ್‌ಗಳನ್ನು ಹಾಕಲು ಯೋಚಿಸುತ್ತೀರಾ ಎಂದು ರಕ್ಷಣಾ ಇಲಾಖೆಯನ್ನ ಪ್ರಶ್ನಿಸಿದ ಶಾಸಕರು ಶಿವಮೊಗ್ಗದ ರಕ್ಷಣಾ ವ್ಯವಸ್ಥೆ ಪೂರ್ಣವಾಗಿ ಕುಸಿದು ಹೋಗಿದೆ.

ಶಿವಮೊಗ್ಗದ ಉಸ್ತುವಾರಿ ಸಚಿವರು ಬದುಕಿದ್ದಾರಾ ಎಂದು ಪ್ರಶ್ನಿಸಿದ ಶಾಸಕರು, ತಲವಾರ್‌ಗಳನ್ನು ಹಿಡಿದು ಕೊಲೆ ಮಾಡಿದ ಘಟನೆ ಬೆನ್ನಲ್ಲೆ ಸಾಲು ಸಾಲು ಘಟನೆಗಳು ನಡೆದಿವೆ. ಇದೀಗ ಹೊಸಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇದು ಇಂತಹ ಕೃತ್ಯ ಮತ್ತೆ ಮತ್ತೆ ಮಾಡಲು ತಯಾರಿದ್ದೇವೆ ಎಂದು ತೋರಿಸಿದ ಹಾಗಿದೆ ಈ ಘಟನೆ. ಗಾಂಜಾವನ್ನು ಮಟ್ಕಾ ಹಾಕಿದ್ದೇವೆ ಎನ್ನುತ್ತಾರಾದರೂ, ಹೊಸಮನೆಯಲ್ಲಿ ಹೇಗೆ ಸಿಗುತ್ತಿದೆ ಮಾದಕ ವಸ್ತುಗಳು ಎಂದು ಪ್ರಶ್ನಿಸಿದ ಶಾಸಕರು ರಕ್ಷಣಾಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ. 

ನಿಮ್ಮ ಉದ್ದೇಶ ಏನಿದೆ, ಶಿವಮೊಗ್ಗ ಶಾಂತಿಯಿಂದ ಇರಬೇಕಾ ಬೇಡವಾ ಎಂದು ಗೃಹ ಇಲಾಖೆಯನ್ನು ಪ್ರಶ್ನಿಸಿದ ಶಾಸಕರು, ಸ್ಥಳೀಯವಾಗಿ ಹೆಣ್ಣುಮಕ್ಕಳು ಓಡಾಡಲಾಗದ ಸ್ಥಿತಿಯಿದೆ ಎಂದು ಇಲ್ಲಿನ ಮಹಿಳೆಯರು ಹೇಳುತ್ತಿದ್ದಾರೆ. ರಾತ್ರಿ ಎರಡು ಗಂಟೆ ಇಂತಹ ಕೃತ್ಯ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ವಿವಿಧ ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರ ವಾಹನಗಳನ್ನು ಒಡೆದಿದ್ದಾರೆ 

ಜನರ ಸಮಸ್ಯೆಗಳನ್ನು ಹೇಳಿದರೆ ಪೊಲೀಸ್‌ ಇಲಾಖೆಯ ಅಧಿಕಾರಿಗಳು ವಾಪಸ್‌ ಫೋನ್‌ ಮಾಡಿ ಮಾತನಾಡುತ್ತಾರೆ. ಪ್ರೆಸ್‌ ಬಳಿ ಹೇಳಿದರೆ, ನಮಗೆ ಫೋನ್‌ ಕಾಲ್‌ ಮಾಡುವ ಅಧಿಕಾರಿಗಳು ನಾಗರಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆ ನಿಮ್ಮದಲ್ಲವೆ ಎಂದ ಶಾಸಕ ಎಸ್‌ಎನ್‌ ಚನ್ನಬಸಪ್ಪರವರು, ಗೃಹಮಂತ್ರಿ ಪರಮೇಶ್ವರ್‌ರವರು ಶಿವಮೊಗ್ಗಕ್ಕೆ ಬಂದರೆ ತೋರಿಸುತ್ತೇನೆ ಎಲ್ಲೆಲ್ಲಿ ಏನೇನು ಸಿಗುತ್ತೆ ಅನ್ನೋದನ್ನ ನಾನು ತೋರಿಸುತ್ತೇವೆ. ಸ್ಥಳೀಯರು ಪೊಲೀಸರೇ ಕಿಡಿಗೇಡಿಗಳ ಜೊತೆ ಎ‍ಣ್ಣೆ ಹೊಡೆಯುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಇದಕ್ಕೆ ಸಾಕ್ಷಿ ಕೊಡಿ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಕೇಳುತ್ತಾರೆ. ಆದರೆ ಇಂತಹ ಆರೋಪ ಇಲಾಖೆಗೆ ಬೇಕಿದೆಯಾ ಎಂದು ಪ್ರಶ್ನಿಸಿದ್ರು. 

ಶಿವಮೊಗ್ಗ ನಗರದ ನಾಗರಿಕರು ಭಯಭೀತರಾಗಿದ್ದು, ಇದಕ್ಕೆ ಯಾರ ಕುಮ್ಮಕ್ಕಿದೆ ಎಂಬಂತಹ ಚರ್ಚೆಗಳು ನಡೆಯುತ್ತಿವೆ. ಗಾಂಜಾ, ಅಫೀಮು ವಿಚಾರದಲ್ಲಿ ರಕ್ಷಣಾ ಇಲಾಖೆಯು ಸರಿಯಾದ ಗಮನಕೊಟ್ಟಿಲ್ಲ ಎಂದು ಆರೋಪಿಸಿದ ಎಂಎಲ್‌ಎ ಚನ್ನಬಸಪ್ಪರವರು ಸಿಟಿಯಲ್ಲಿ ನಡೆಯುತ್ತಿರುವ ಘಟನೆಗಳಿಗೆ ರಕ್ಷಣಾಇಲಾಖೆಯೇ ನೇರೆ ಹೊಣೆಯೆಂದು ಆರೋಪಿಸಿದ್ದಾರೆ. 



MLA S.N. Channabasappa has expressed outrage over an incident in Shivamogga's Hosamane Third Cross, blaming increased drug use and a deteriorating law and order situation for the incident. He questioned the Home Minister's claims of a good law and order situation and challenged him to visit Shivamogga and speak to the people