ರಾಗಿಗುಡ್ಡ ಕೇಸ್/ ಗಾಯಾಳು, ಸಂತ್ರಸ್ತ, ಆರೋಪಿ ರೋಹನ್​ ರಾವ್​ಗೆ ನ್ಯಾಯಾಂಗ ಬಂಧನ! ಕಲಬುರ್ಗಿ ಜೈಲಿಗೆ ಶಿಫ್ಟ್

Accused Rohan Rao judicial arrest! Shift to Kalaburgi Jailಆರೋಪಿ ರೋಹನ್​ ರಾವ್​ಗೆ ನ್ಯಾಯಾಂಗ ಬಂಧನ! ಕಲಬುರ್ಗಿ ಜೈಲಿಗೆ ಶಿಫ್ಟ್

ರಾಗಿಗುಡ್ಡ ಕೇಸ್/ ಗಾಯಾಳು, ಸಂತ್ರಸ್ತ, ಆರೋಪಿ ರೋಹನ್​ ರಾವ್​ಗೆ ನ್ಯಾಯಾಂಗ ಬಂಧನ! ಕಲಬುರ್ಗಿ ಜೈಲಿಗೆ ಶಿಫ್ಟ್

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS

ರಾಗಿಗುಡ್ಡದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ  ಹಲವು ಆಯಾಮಗಳಲ್ಲಿ ಕೇಂದ್ರ ಬಿಂದು ಎನಿಸುವ ರೋಹನ್​ ರಾವ್ ನನ್ನ ನಿನ್ನೆ ಕಲಬುರ್ಗಿ ಜೈಲ್​​ಗೆ ಶಿಫ್ಟ್ ಮಾಡಲಾಗಿದೆ. 

ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆಯುವುದಕ್ಕೆ ಈತ ಕಾರಣ ಎಂದು ಆರೋಪಿಸಲಾಗ್ತಿದೆ. ಈತ ಮತ್ತೀತನ ಹುಡುಗರು ಬ್ಯಾರಿಕೇಡ್​ಗೆ ಬಳಸಿದ್ದ ದಬ್ಬೆಗಳನ್ನು ಹಿಡಿದು ಹೊಡೆಯಲು ಬರುವ ವಿಡಿಯೋ ಕೂಡ ಪೊಲೀಸರ ಬಳಿಯಲ್ಲಿದೆ.

ಇನ್ನೊಂದು ಕಡೆಯಲ್ಲಿ ಈತನ ಮನೆಯನ್ನೆ ದುಷ್ಕರ್ಮಿಗಳು ಟಾರ್ಗೆಟ್ ಮಾಡಿ ದಾಳಿ ಮಾಡಿರುತ್ತಾರೆ. ರೋಹನ್​ನ ತಲೆಗೆ ಪೆಟ್ಟು ಬಿದ್ದು 6 ಹೊಲಿಗೆ ಹಾಕಲಾಗಿರುತ್ತದೆ. 

ಈತ ಗಾಯಾಳು, ಈತ ಆರೋಪಿ, ಈತ ಸಂತ್ರಸ್ತ, ಈತನ ಕುಟುಂಬವು ನೊಂದ ಕುಟುಂಬವಾಗಿದ್ದು, ಇಡೀ ಪ್ರಕರಣದಲ್ಲಿ ಈತ ಟಾರ್ಗೆಟ್​ ಕೂಡ ಆಗಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಹನ್ ವಿರುದ್ಧ ಎಫ್ಐಆರ್​ ಸಹ ದಾಖಲಾಗಿದೆ. 

ಬಿಜೆಪಿ ಮುಖಂಡರು, ಸ್ಥಳೀಯ ಪ್ರತಿನಿಧಿಗಳು ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಈತನ ಆರೋಗ್ಯ ವಿಚಾರಿಸಿದ್ದರು. ಈತನ ತಾಯಿ ತಮ್ಮ ಮಗನನ್ನು ಬಿಟ್ಟು ಬಿಡಿ ಬೇರೆಲ್ಲೋ ಹೋಗಿ ಬದುಕುತ್ತೇವೆ. ವಿನಾಕಾರಣ ಕೇಸ್ ಹಾಕಿಸಿದ್ದಾರೆ. ಇಲ್ಲಿ ಬದುಕಲು ಆಗಲ್ಲ ಎಂದು ಅಳಲು ತೋಡಿಕೊಂಡಿದ್ದರು. 

ಇವೆಲ್ಲದರ ನಡುವೆ ಇದೀಗ ರೋಹನ್​ನನ್ನ ಕಲಬುರ್ಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪ್ರಕರಣದ ಆರೋಪಿಗಳ ಪೈಕಿ ಕೆಲವರನ್ನು ಚಿತ್ರದುರ್ಗದ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಮತ್ತೆ ಕೆಲವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ರೋಹನ್ ನ್ಯಾಯಾಂಗ ಬಂಧನದಲ್ಲಿದ್ಧಾನೆ. 


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ