ಹೊಸಮನೆಯಲ್ಲಿ ಮಚ್ಚು, ಲಾಂಗ್‌ಗಳ ಕಿರಿಕ್‌ | ಕಾರು, ಆಟೋ, ಬೈಕ್‌ಗಳು ಧ್ವಂಸ | ಗೃಹಸಚಿವರ ಆಗಮನಕ್ಕೆ ವೆಲಕಮ್‌ ಹೇಳಿತಾ ಕ್ರೈಂ

gang of intoxicated individuals vandalized cars and autos in Shivamogga, causing damage to several vehicles. The incident, captured on CCTV, is under police investigation. rise in crime has raised concerns about law and order, especially with Home Minister Dr. G Parameshwara's visit to the city today.

ಹೊಸಮನೆಯಲ್ಲಿ  ಮಚ್ಚು, ಲಾಂಗ್‌ಗಳ ಕಿರಿಕ್‌ |  ಕಾರು, ಆಟೋ, ಬೈಕ್‌ಗಳು ಧ್ವಂಸ | ಗೃಹಸಚಿವರ ಆಗಮನಕ್ಕೆ ವೆಲಕಮ್‌ ಹೇಳಿತಾ ಕ್ರೈಂ
vandalized cars and autos, Shivamogga, causing damage

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ 

ಶಿವಮೊಗ್ಗ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸಿಟಿಯಲ್ಲಿ ಮಾದಕ ದುಷ್ಕರ್ಮಿಗಳ ಹಾವಳಿಯ ಮತ್ತೊಂದು ಘಟನೆ ನಡೆದಿದೆ. ಇತ್ತೀಚೆಗೆ ರೌಡಿಗಳ ಗ್ಯಾಂಗ್‌ ವಾರ್‌ ನಡೆದಿತ್ತು. ಅದರ ಬೆನ್ನಲ್ಲೆ ಎಟಿಎಂಗೆ ಬಂದವರ ಮೇಲೆ ಹಲ್ಲೆ ಮೊನ್ನೆಯಷ್ಟೆ ನಡೆದಿತ್ತು, ಇನ್ನೊಂದೆಡೆ ಹುಟ್ಟುಹಬ್ಬದ ವಿಚಾರದಲ್ಲಿ ಮಾರಾಮಾರಿ ನಡೆದಿತ್ತು. ಅದರ ನಡುವೆ ರೌಡಿಯೊಬ್ಬ ತನ್ನ ಗ್ಯಾಂಗ್‌ ಕಟ್ಟಿಕೊಂಡು ಡ್ರೈವರ್‌ನ್ನ ಆತನ ಕಾರಿನಲ್ಲಿಯೇ ಕಿಡ್ನ್ಯಾಪ್‌ ಮಾಡಿ ಸತಾಯಿಸಿದ್ದ.  ಈ ರೀತಿ  ಕ್ರೈಂ ಹೆಚ್ಚುತ್ತಿರುವ ನಡುವೆ ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಮತ್ತೊಂದು ಘಟನೆ ನಡೆದಿದೆ. 

https://malenadutoday.com/

ಶಿವಮೊಗ್ಗದ ಹೊಸಮನೆ ಮೂರನೇ ಕ್ರಾಸ್‌ನಲ್ಲಿ ನಿನ್ನೆ ಮತ್ತಿನಲ್ಲಿದ್ದ ಗ್ಯಾಂಗ್‌ವೊಂದರು ಸ್ಥಳೀಯರ ಕಾರು, ಆಟೋಗಳನ್ನ ಮಚ್ಚಿನಿಂದ ಹೊಡೆದು ಧ್ವಂಸ ಮಾಡಿದ್ದಾರೆ. ಇದರ ಸಿಸಿ ಕ್ಯಾಮರಾದ ದೃಶ್ಯಗಳು ಇವೆ ಎನ್ನಲಾಗಿದ್ದು ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. 

https://malenadutoday.com/

ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನ ನಶೆ ಆಸಾಮಿಗಳು ಹಾಳು ಮಾಡಿದ್ದಾರೆ. ಜಗದೀಶ್ ಅವರಿಗೆ ಸೇರಿದ ಅಂಗಡಿಗೆ ಹಾನಿ ಮಾಡಲಾಗಿದ್ದು,  ಸಂದೇಶ್ ಅವರಿಗೆ ಸೇರಿದ ಹುಂಡೈ , ಸ್ಯಾಂಟ್ರೋ ಕಾರ್ ಜಖಂ ಮಾಡಲಾಗಿದೆ. ಇನ್ನೂ ಮಂಜು, ಲಿಂಗರಾಜು ಅವರಿಗೆ ಸೇರಿದ ಎರಡು ಆಟೋಗಳ ಗಾಜುಗಳನ್ನು ಪುಡಿ ಮಾಡಲಾಗಿದೆ.  ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಸೇರಿದಂತೆ ನಾಲ್ವರ ಬೈಕ್ ಜಖಂಗೊಳಿಸಲಾಗಿದೆ. 

https://malenadutoday.com/

ಮಾರಿಕಾಂಬ ದೇವಸ್ಥಾನ ಸಮೀಪ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಸುತ್ತಮುತ್ತಲಿನ ಮನೆಗಳ  ಮುಂದೆ ನಿಲ್ಲಿಸಿರುವ ವಾಹನಗಳನ್ನು ಧ್ವಂಸ ಮಾಡಲಾಗಿದ್ದು, ಸ್ಥಳೀಯರು ಹೇಳುವ ಪ್ರಕಾರ, ಲಾಂಗ್‌ಗಳಿಂದ ಈ ಕೃತ್ಯವಸೆಗಲಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ, ಹೊಸಮನೆ ಎರಡನೇ ತಿರುವಿನಲ್ಲಿ ಮಚ್ಚು ಹಿಡಿದು ಓಡಾಡಿದ್ದ ದುಷ್ಕರ್ಮಿಗಳು ಓಮ್ನಿ ಮತ್ತು ಆಕ್ಟಿವಾ ಕಾರನ್ನ ಧ್ವಂಸ ಮಾಡಿದ್ದರು. ಇದೀಗ ಅದೇ ಮಾದರಿ ಘಟನೆ ಮತ್ತೆ ಮರುಕಳಿಸಿದೆ. 

ವಿಶೇಷ ಅಂದರೆ ಇವತ್ತು ಶಿವಮೊಗ್ಗ ಗೃಹಸಚಿವ ಡಾ.ಜಿ ಪರಮೇಶ್ವರ್‌ ಬರುವ ಸಾಧ್ಯತೆ ಇದೆ, ಆತ್ಮಹತ್ಯೆ ಮಾಡಿಕೊಂಡಿರುವ ಆಧಿಕಾರಿಯವರ ಮನೆಗೆ ಭೇಟಿಕೊಟ್ಟು ಅವರು ಸಾಂತ್ವನ ಹೇಳಿ ನ್ಯಾಯಯುತ ತನಿಖೆ ಪ್ರಕರಣದಲ್ಲಿ ನಡೆಸುವ ವಿ‍ಶ್ವಾಸ ನೀಡುವ ನಿರೀಕ್ಷೆಯಿದೆ. ಈ ನಡುವೆ ಅವರ ಆಗಮನಕ್ಕೂ ಮೊದಲೇ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆಯನ್ನ ಹಾಳು ಮಾಡಿದ ಮಾದಕ ದುಷ್ಕರ್ಮಿಗಳು ತಮ್ಮದೇ ಸ್ಟೈಲ್‌ನಲ್ಲಿ ಗೃಹಸಚಿವರಿಗೆ ಸ್ವಾಗತ ಕೋರಿದಂತಿದೆ ಈ ಘಟನೆ 

https://malenadutoday.com/

A gang of intoxicated individuals vandalized cars and autos in Shivamogga, causing damage to several vehicles. The incident, captured on CCTV, is under police investigation. rise in crime has raised concerns about law and order, especially with Home Minister Dr. G Parameshwara's visit to the city today.

https://malenadutoday.com/