ಅಡಿಕೆ ಗೋಡೌನ್‌ಗಳ ಮೇಲೆ 40 ಕ್ಕೂ ಹೆಚ್ಚು ಅಧಿಕಾರಿಗಳ ರೇಡ್‌ ! ಶಿವಮೊಗ್ಗದ ಅತಿದೊಡ್ಡ ಕಾರ್ಯಾಚರಣೆಗೆ ಕಾರಣ?

Shivamogga Divisional Enforcement and Awareness Wing and the Divisional Goods and Services Tax Department conducted a sudden raid on all the areca nut traders' warehouses in the Malenadu division

ಅಡಿಕೆ ಗೋಡೌನ್‌ಗಳ ಮೇಲೆ 40 ಕ್ಕೂ ಹೆಚ್ಚು ಅಧಿಕಾರಿಗಳ ರೇಡ್‌ ! ಶಿವಮೊಗ್ಗದ ಅತಿದೊಡ್ಡ  ಕಾರ್ಯಾಚರಣೆಗೆ ಕಾರಣ?
Shivamogga Divisional Enforcement and Awareness Wing, Divisional Goods and Services Tax Department, Malenadu division

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಅಡಿಕೆ ದಾಸ್ತಾನು ಮಳಿಗೆಗೆ ತೆರಿಗೆ ಅಧಿಕಾರಿಗಳಿಂದ ದಿಢೀರ್‌ ದಾಳಿ ನಡೆಸಿ ತೆರಿಗೆ ವಂಚಿಸಿ ಸ್ಟಾಕ್‌ ಇಟ್ಟಿದ್ದ ಅಡಿಕೆ ಮಾಲೀಕರಿಗೆ ಶಾಕ್‌ ಕೊಟ್ಟಿದ್ಧಾರೆ. 

ಶಿವಮೊಗ್ಗ ವಿಭಾಗೀಯ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ ಹಾಗೂ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸುಮಾರು 40 ಅಧಿಕಾರಿಗಳ ತಂಡ ಮಲೆನಾಡು ವಿಭಾಗ ವ್ಯಾಪ್ತಿಯ ಎಲ್ಲಾ ಅಡಿಕೆ ವರ್ತಕರ ವ್ಯಾಪಾರ ಗೋದಾಮು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಲಕ್ಷಾಂತರ ಮೊತ್ತದ ಅಕ್ರಮ ಅಡಿಕೆ ವಹಿವಾಟು ದಾಸ್ತಾನು ಪತ್ತೆ ಹಚ್ಚಿ ದಂಡ ವಿಧಿಸಿರುತ್ತಾರೆ..

ಈ ವಿಶೇಷ ಕಾರ್ಯಾಚರಣೆಯ ನೇತೃತ್ವವನ್ನು ಶಿವಮೊಗ್ಗದ ಮಲೆನಾಡು  ವಿಭಾಗೀಯ ತೆರಿಗೆ  ಜಾಗೃತಿ ದಳ ಹಾಗೂ ಸರಕು ಮತ್ತು ಸೇವಾ ತೆರಿಗೆಗಳ ಜಂಟಿ ಆಯುಕ್ತರುಗಳು ಹಾಗೂ ಉಪ ಆಯುಕ್ತರುಗಳ ನೇತೃತ್ವದಲ್ಲಿ ನಡೆಸಿದ್ದು ಅಕ್ರಮವಾಗಿ ಅಡಿಕೆ ಸಂಗ್ರಹಿಸಿದ ವ್ಯಾಪಾರಿಗಳ ಮೇಲೆ  ಜಿ.ಎಸ್ ಟಿ ಕಾಯ್ದೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದೆ. 

Shivamogga, May 29, (Karnataka News): The Shivamogga Divisional Enforcement and Awareness Wing and the Divisional Goods and Services Tax Department conducted a sudden raid on all the areca nut traders' warehouses in the Malenadu division. The team of about 40 officers found lakhs of rupees worth of illegal areca nut stock and imposed fines.