ರಂಗಸ್ಥಳದ ಮೇಲೆ ಕುಣಿಯುತ್ತಿದ್ದಾಗಲೇ ಕಲಾವಿದನಿಗೆ ಹೃದಯಾಘಾತ/ ಮರಣ ಪ್ರಸಂಗ

ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಈ ಘಟನೆ ಸಂಭವಿಸದೆ. ಕಟೀಲು ಮೇಳದ ಪ್ರಸಿದ್ಧ ಕಿರೀಟ ವೇಷಧಾರಿ, ಪ್ರಸಂಗಕರ್ತರು ಆಗಿದ್ದ ಗುರುವಪ್ಪ ಬಾಯರು ಮೃತ ಕಲಾವಿದರು.

ರಂಗಸ್ಥಳದ ಮೇಲೆ ಕುಣಿಯುತ್ತಿದ್ದಾಗಲೇ ಕಲಾವಿದನಿಗೆ ಹೃದಯಾಘಾತ/ ಮರಣ ಪ್ರಸಂಗ

ರಂಗಸ್ಥಳದ ಮೇಲೆ ಪ್ರಸಂಗ ನಡೆಯುತ್ತಿರುವಾಗಲೇ ಯಕ್ಷಗಾನ ವೇಷಧಾರಿ ಸಾವನ್ನಪ್ಪಿದ ಘಟನೆ ಕರಾವಳಿಯಲ್ಲಿ ಸಂಭವಿಸಿದೆ.  ಕಟೀಲು ಮೇಳದ ರಂಗಸ್ಥಳದಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಈ ಘಟನೆ ಸಂಭವಿಸದೆ. ಕಟೀಲು ಮೇಳದ ಪ್ರಸಿದ್ಧ ಕಿರೀಟ ವೇಷಧಾರಿ, ಪ್ರಸಂಗಕರ್ತರು ಆಗಿದ್ದ ಗುರುವಪ್ಪ ಬಾಯರು ಮೃತ ಕಲಾವಿದರು.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಮೇಳ ನಡೆಯುತ್ತಿರುವಾಗಲೇ ರಂಗಸ್ಥಳದಿಂದ ಕುಸಿದು ಬಿದ್ದ ಗುರುವಪ್ಪರವರನ್ನು  ಕೂಡಲೇ ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ಸೇರಿಸಲಾಯಿತು. ಆದರೆ  ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ..

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಕಳೆದ ರಾತ್ರಿ ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆದ ನಾಲ್ಕನೇ ಮೇಳದ ತ್ರಿಜನ್ಮ ಮೋಕ್ಷ ಪ್ರಸಂಗ ನಡೆಯುತ್ತಿತ್ತು. ಈ ವೇಳೆ ಶಿಶುಪಾಲನಾಗಿ ರಂಗದಲ್ಲಿ ಮೆರೆಯುತ್ತಿದ್ದಾಗಲೇ  ಬಾಯರವರಿಗೆ ಹೃದಯಾಘಾತವಾಗಿದೆ. 58 ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯರು ನಿಧನಕ್ಕೆ ಕಲಾರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

 ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್