ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ವಕ್ಕೋಡಿ ಕ್ರಾಸ್ ಬಳಿಯಲ್ಲಿ, ಪ್ರವಾಸಕ್ಕೆ ಅಂತಾ ಮಕ್ಕಳನ್ನು ಕರೆತಂದಿದ್ದ ಬಸ್​ ಪಲ್ಟಿಯಾಗಿ ಬಿದ್ದಿತ್ತು. ಪರಿಣಾಮ ಹಲವು ಮಕ್ಕಳಿಗೆ ಗಾಯವಾಗಿತ್ತು, ಶಿಕ್ಷಕರಿಗೆ ಪೆಟ್ಟಾಗಿತ್ತು.

ಜನ ಸ್ವಯಂಸೇವಕರಾದ್ರು/  ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಮಲೆನಾಡು ಆತಿಥ್ಯಕ್ಕೆ ಹೆಸರುವಾಸಿ, ಅಷ್ಟೆ ಸ್ಪಂದನೆ ಸಂಕಷ್ಟದ ಸಮಯದಲ್ಲಿಯು ಇಲ್ಲಿ ದೊರಕುತ್ತದೆ. ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಒಂದು ಆಕ್ಸಿಡೆಂಟ್​ನ ಘಟನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ವಕ್ಕೋಡಿ ಕ್ರಾಸ್ ಬಳಿಯಲ್ಲಿ, ಪ್ರವಾಸಕ್ಕೆ ಅಂತಾ ಮಕ್ಕಳನ್ನು ಕರೆತಂದಿದ್ದ ಬಸ್​ ಪಲ್ಟಿಯಾಗಿ ಬಿದ್ದಿತ್ತು. ಪರಿಣಾಮ ಹಲವು ಮಕ್ಕಳಿಗೆ ಗಾಯವಾಗಿತ್ತು, ಶಿಕ್ಷಕರಿಗೆ ಪೆಟ್ಟಾಗಿತ್ತು. ಆಕ್ಸಿಡೆಂಟ್ ಆದ ಸ್ಥಳಕ್ಕೆ ತಕ್ಷಣ ಬಂದು ನೆರವಾದ ಸ್ಥಳೀಯರು

ನಡೆದ ಘಟನೆಯ ಬಗ್ಗೆ ಮಲೆನಾಡು ಟುಡೆ ನೀಡಿದ ಮೊದಲ ವರದಿ ಇಲ್ಲಿದೆ ಓದಿ : BREAKING NEWS / ವಕ್ಕೋಡಿ ಕ್ರಾಸ್​ನಲ್ಲಿ ಶಾಲೆ ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಬಸ್​ ಅಪಘಾತ/

ಊರೀಗೆ ಊರೇ ಒಂದಾಗಿ ನೆರವಿಗೆ ನಿಂತಿತು

ಬಸ್ ಪಲ್ಟಿಯಾಯ್ತು ಕಣ್ರಿ ಅಂತಾ ವಿಷಯ ಕೇಳುತ್ತಲೇ ತುಮರಿ ದ್ವೀಪದ ಜನರೆಲ್ಲಾ ಒಟ್ಟಾಗಿದ್ದಾರೆ. ಯಾರು ಯಾರನ್ನು ಕೇಳದೇ ಒಬ್ಬೊಬ್ಬರು ಒಂದು ಜವಾಬ್ದಾರಿ ವಹಿಸಿದ್ದಾರೆ. ಮೊದಲು ಮಕ್ಕಳ ಜೀವ ಉಳಿಸಬೇಕು ಎಂದುಕೊಂಡವರೆ, ವಾಹನಗಳ ವ್ಯವಸ್ಥೆ ಮಾಡಿದ್ರು, ಲಾಂಚ್ ರೆಡಿ ಇಡಾ ಅಂತಾ ಅದರ ಸಿಬ್ಬಂದಿಗೆ ಫೋನ್ ಮಾಡಿದ್ರು, ಪ್ರಥಮ ಚಿಕಿತ್ಸೆ ಕೊಟ್ಟು, ಮೊದಲು ಸಾಗರಕ್ಕೆ ಕರ್ಕೊಂಡು ಹೋಗಬೇಕು ಎಂದು ಹೇಳಿ ಸಾಗರ ಆಸ್ಪತ್ರೆಗೂ ಫೋನ್​ ಮಾಡಿ ಹಿಂಗಾಗದೆ, ಚೂರು ರೆಡಿಮಾಡ್ಕಳಿ ಅಂತಾ ವಿಷಯ ಮುಟ್ಟಿಸಿದ್ರು. 

ಘಟನೆಯಲ್ಲಿ ಪಲ್ಟಿಯಾದ ಬಸ್​

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಜನರೇ ಸ್ವಯಂಸೇವಕರಾದರು

ಶರಾವತಿ ಹಿನ್ನೀರಿನ ಊರಿನ ಜನರು ಸ್ವಯಂಸೇವಕರಾಗಿ ಒಬ್ಬೊಬ್ಬ ಮಕ್ಕಳನ್ನೆ ವಿಚಾರಿಸ್ತಾ, ಅವರ ಯೋಗಕ್ಷಮೆ ವಿಚಾರಿಸಿದರೆ, ಅತ್ತ, ಶಂಕರ ಟ್ರಸ್ಟ್, ಸಿಗಂದೂರು ಟ್ರಸ್ಟ್ ಮತ್ತು ಸರ್ಕಾರಿ ಆಂಬುಲೆನ್ಸ್​ಗಳು ಮಕ್ಕಳನ್ನು ಸಾಗರಕ್ಕೆ ಸಾಗಿಸಲು ಅನುವಾದವು. ಇನ್ನೂ ಹಿನ್ನೀರಿನ ಲಾಂಚ್​ಗಳ ಪೈಕಿ ಒಂದು ಲಾಂಚ್​ನ್ನು ಸಿಬ್ಬಂದಿ ಗಾಯಗೊಂಡ ಮಕ್ಕಳನ್ನು,  ಶಿಕ್ಷಕರನ್ನು ಹೊಳೆದಾಟಿಸಲು ಮೀಸಲಿಡಲಾಯ್ತು. ತಕ್ಷಣಕ್ಕೆ ಅಂದುಕೊಂಡಂತೆ ಕೆಲಸಗಳು ಆದವು. 

 ಜೀವ ಉಳಿಸುವ ಕೆಲಸದಲ್ಲಿ ದ್ವೀಪದ ಮಂದಿ

ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್​ ಕಾರು ಡಿಕ್ಕಿ/ ಸವಾರನ ಕಾಲು ಕಟ್

ಊರಲ್ಲೇ ಮಕ್ಕಳಿಗೆ ವಾಸ್ತವ್ಯ

ಇನ್ನೂ ಘಟನೆಯಲ್ಲಿ ಬಚಾವ್ ಆದ ಮಕ್ಕಳಿಗೆ ತಾತ್ಕಾಲಿಕ ಅನುಕೂಲ ಮಾಡಿಕೊಡಬೇಕಿತ್ತು. ಅದಕ್ಕಾಗಿ ಊರಿನವರೆ ಮಾತನಾಡಿ ಬ್ಯಾಕೋಡಿನಲ್ಲಿರುವ ಬಾಲಕರ ಹಾಸ್ಟೆಲ್​ನಲ್ಲಿ ಉಳಿಯಲು ಅನುವು ಮಾಡಿಕೊಡಲಾಯ್ತು. ಅಲ್ಲಿದ್ದ ಡಾಕ್ಟರ್​ ಅನನ್ಯಾ, ಆ ಮಕ್ಕಳ ಆರೋಗ್ಯವನ್ನು ವಿಚಾರಿಸಿಕೊಂಡು, ಕ್ಷಣಕ್ಷಣಕ್ಕೂ ನಿಗಾ ವಹಿಸಿದರು. 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನಾನಿದ್ದೇನೆ ಏನೂ ಆಗಲ್ಲ ಎಂದು ಸಾವರಿಸಿದ ಸಾಗರ ಆಸ್ಪತ್ರೆ

ಇತ್ತ ಸಾಗರ ಆಸ್ಪತ್ರೆಯ ವೈದ್ಯ ಡಾ.ಪರಪ್ಪ, ವಿಷಯ ತಿಳಿಯುತ್ತಲೇ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಬಾರದು ಎಂದು ಎರ್ಮಜೆನ್ಸಿ ವ್ಯವಸ್ಥೆ  ಮಾಡಿಕೊಂಡರು. ಅಲ್ಲದೆ ಸಿಬ್ಬಂದಿ ಸಿದ್ದವಾಗಿರುವಂತೆ, ಅವರನ್ನು ನಿಯೋಜಿಸಿಕೊಂಡಿದ್ದರು. ಆಂಬುಲೆನ್ಸ್​ಗಳ ಹಾದಿ ಸಹ ಕ್ಲೀಯರ್ ಆಗಿತ್ತು. ಉಪವಿಭಾಗಿಯ ಆಸ್ಪತ್ರೆಗೆ ಬರುತ್ತಿದ್ದಂತೆ ಗಾಯಾಳುಗಳನ್ನು ಅಲ್ಲಿದ್ದ ಜನರೇ ತುರ್ತುಚಿಕಿತ್ಸೆಗೆ ಕರೆದುಕೊಂಡು ಹೋದರು. 

ಸಾಗರ ಆಸ್ಪತ್ರೆಯಲ್ಲಿ ನೆರವಿಗೆ ಸಿದ್ಧವಾಗಿದ್ದ ನಿಂತಿದ್ದ ಸಾಗರೀಕರು

ಡಾ. ರಾಜನಂದಿನಿ ಬಂದರು, ನೆರವಾದರು

ಅಷ್ಟರಲ್ಲಿ ಸ್ಥಳಕ್ಕೆ ಗ್ಲೌಸ್ ಹಾಗೂ ಸೆತೋಸ್ಕೋಪ್​ ಹಿಡಿದುಕೊಂಡು ಡಾ.ರಾಜನಂದಿನಿ ಬಂದಿದ್ರು. ರಾಜಕಾರಣಿಗಳು ಸ್ಥಳಕ್ಕೆ ಭೇಟಿಕೊಟ್ಟು ಸಾಂತ್ವನ ಹೇಳುವುದು ಸಹಜ ಸಂಗತಿ. ಆದರೆ ಡಾ.ರಾಜನಂದಿನಿ ತುರ್ತು ಚಿಕಿತ್ಸೆ ವಿಭಾಗಕ್ಕೆ ಹೋದವರೆ ಒಬ್ಬೊಬ್ಬರನ್ನು ಪರೀಕ್ಷಿಸ ತೊಡಗಿದರು. ತಮ್ಮ ವೈದ್ಯಕೀಯ ಜೀವನದ ಅನುಭವದ ಜೊತೆಗೆ ಅಲ್ಲಿದ್ದ ವೈದ್ಯರಿಗೆ ಖುದ್ದು ನೆರವಾದರು. ಮಕ್ಕಳಿಗೆ ದೈರ್ಯ ತುಂಬಿದ ಅವರು, ಶಿಕ್ಷಕಿಯರನ್ನ ಸಮಾಧಾನ ಪಡಿಸಿದರು. 

ಡಾ.ರಾಜನಂದಿನಿ

ಇದನ್ನು ಸಹ ಓದಿ : ಮುಂದಿನ ಸಲ ಕುಮಾರಸ್ವಾಮಿಯೇ ಸಿಎಂ?/ಶಿವಮೊಗ್ಗದ ಈ ದೇವಾಲಯದಲ್ಲಿ ಸಿಕ್ಕಿತು ಹೂವಿನ ಪ್ರಸಾದ? ಏನಿದು ವಿಶೇಷ ಇಲ್ಲಿದೆ ನೋಡಿ

ಇದನ್ನು ಸಹ ಓದಿ : ಭದ್ರಾವತಿ ವಿಐಎಸ್​ಎಲ್​ ಗಾಗಿ ಕೇಂದ್ರ ಸರ್ಕಾರದ ಮುಂದೆ ಡಿಮ್ಯಾಂಡ್ ಇಟ್ಟ ಸಂಸದ​ ಬಿ.ವೈ. ರಾಘವೇಂದ್ರ​

ಊಟ, ನೀರು, ಮಮತೆ ಮತ್ತು ವಾತ್ಸಲ್ಯ

ಒಂದು ಸಂದರ್ಭಕ್ಕೆ ಅಗತ್ಯವಾದುದು ತನ್ನಿಂದ ತಾನೆ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಆ ಘಟನೆಯು ಸಾಕ್ಷಿಯಾಗಿತ್ತು.  ಸಾಗರ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗ್ತಿದೆ ಗೊತ್ತಾಗುತ್ತಿದ್ದಂತೆ  ಸಾಗರದ ಜನರು, ಮಕ್ಕಳು ಎಂಥಾರು ತಿಂದಾವೋ ಇಲ್ವೋ ಗೊತ್ತಾಗ್ಲಾ ಅನ್ನುತ್ತಾ,  ನೀರು, ಬ್ರೆಡ್ಡು, ಊಟ ಹಿಡ್ಕೊಂಡು ಆಸ್ಪತ್ರೆ ಬಂದರು, ಕೆಲವರು ಮಕ್ಕಳಿಗೆ ಅಮ್ಮನಂತೆ ಉಪಚರಿಸಿ ಊಟ ಮಾಡಿಸಿದರು. 

ಹಸಿದ ಮಕ್ಕಳಿಗೆ ಊಟದ ವ್ಯವಸ್ಥೆ

ಇನ್ನೂ ಇತ್ತ ಸಾಗರ ಶಾಸಕ ಹರತಾಳು ಹಾಲಪ್ಪರವರು ಬಸ್ಸು ಹಾಗೂ ಟೆಂಪೋ ಟ್ರಾವೆಲರ್​ನ ವ್ಯವಸ್ಥೆ ಕಲ್ಪಿಸಿ, ಮಕ್ಕಳು ತಮ್ಮ ಊರಿಗೆ ಸುರಕ್ಷಿತವಾಗಿ ಹೋಗಲು ಅವಕಾಶ ಕಲ್ಪಿಸಿದ್ರು. ಹೀಗೆ ತುರ್ತಾಗಿ ನೀನು ತಾನು, ಅವನು ಇವನು ಯಾವ ಹಮ್ಮುಬಿಮ್ಮು ಇಲ್ಲದೆ ಪ್ರತಿಯೊಬ್ಬರು ಪ್ರವಾಸಕ್ಕೆ ಬಂದ ಮಕ್ಕಳ ಜೀವ ಉಳಿಸುವ ಕೆಲಸಕ್ಕೆ ಕೈ ಜೋಡಿಸಿದ್ದರು. 

ಮಕ್ಕಳಿಗೆ ಊಟದ ವ್ಯವಸ್ಥೆ

ಇದನ್ನು ಸಹ ಓದಿ :ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ

ಸಾಗರಿಕರ ಈ ಸೇವೆಯನ್ನು ನೋಡಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೊಗ್ಗದ ಜನತೆಗೆ ಧನ್ಯವಾದ ತಿಳಿಸಿದ್ದರು. ಒಟ್ಟಾರೆ, ಇಡೀ ಘಟನೆ ಹಲವು ಕೈಗಳ ಮಾನವೀಯತೆಗೆ ಸಾಕ್ಷಿಯಾಗಿ ನಿಂತಿತ್ತು. ಮಲೆನಾಡಿನ ಮನಗಳ ನಿಷ್ಕಲ್ಮಶ ಹೃದಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೆಕಿಲ್ಲವೇನೋ? 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link