ಥಟ್‌ ಅಂತಾ ಶ್ರೀಮಂತರಾಗಲು ಅಡಿಕೆ ಮೂಟೆ ಕದ್ದ ಯುವಕರ ಗುಂಪು | 20 ಕಡೆ ಕದ್ದವರು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

A gang of five young men from Haraguvali village in Shikaripura taluk have been arrested for stealing areca nuts from over 20 locations in the Sagar, Sorab region. The gang, aged between 20 and 24, stole areca nuts worth lakhs of rupees, using Tata Ace and Mahindra pickup vehicles.  

ಥಟ್‌ ಅಂತಾ ಶ್ರೀಮಂತರಾಗಲು ಅಡಿಕೆ ಮೂಟೆ ಕದ್ದ ಯುವಕರ ಗುಂಪು | 20 ಕಡೆ ಕದ್ದವರು ಸಿಕ್ಕಿಬಿದ್ದಿದ್ದೇಗೆ  ಗೊತ್ತಾ?
Haraguvali village in Shikaripura taluk ,arecanuts theft, sagara rural police station, Tata Ace , Mahindra pickup ,Sagar, Sorab region

SHIVAMOGGA | MALENADUTODAY NEWS | May 31, 2024  ಮಲೆನಾಡು ಟುಡೆ

ಕಷ್ಟಪಟ್ಟು ರಿಸ್ಕ್‌ ತಗೊಂಡು ದರೋಡೆ ಮಾಡಬೇಕು. ಎಷ್ಟೆಲ್ಲಾ ಕಷ್ಟಪಟ್ಟು ಕದ್ರೂ...ಅದನ್ನು ಮೂರು ಕಾಸಿಗೆ ಮಾರಬೇಕು. ಹೆವಿ ರಿಸ್ಕ್ ಲೋ ಇನ್ ಕಮ್. ಸಿಕ್ ಬಿದ್ರೆ ಪೊಲೀಸರಿಂದ ಕೇಸ್ ಮೇಲೆ ಕೇಸು. ಇಷ್ಟೆಲ್ಲಾ ರಿಸ್ಕ್ ಯಾಕೆ ಅಂತಾ. ಮೊದಲ ಬಾರಿಗೆ ಅಡಿಕೆ ಮೇಲೆ ಕಣ್ಣು ನೆಟ್ಟ ಶೋಕಿಲಾಲ ಹುಡುಗರು ಎಷ್ಟು ಮನೆಗಳಲ್ಲಿ ಕಳ್ಳತನ ಮಾಡಿದ್ರು ಗೊತ್ತಾ? ಕಳ್ಳತನ ಮಾಡಲು ಅವರು ರೂಪಿಸುತ್ತಿದ್ದ ಸ್ಕೆಚ್ ಹೇಗಿತ್ತು ಗೊತ್ತಾ? ರೋಚಕ ಕಳ್ಳತನದ ಕೇಸ್‌ನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

ಚಿನ್ನ ಕದಿಯೋಕ್ಕಿಂತ ಅಡಕೆ ಕದ್ದರೇನೆ ಲಾಭ

ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಅಡಿಕೆಯನ್ನು ತೋಟದ ಮನೆಯಲ್ಲಿ ತುಂಬಿಟ್ಟು ಅದು ಕಳುವಾಗದಂತೆ  ಕಾಪಾಡಿಕೊಳ್ಳುವುದು ಬೆಳಗಾರರಿಗೆ ದುಸ್ತರ ಸಂಗತಿಯಾಗಿದೆ. ಇದಕ್ಕೆ ಕಾರಣ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ನಡೆದ ಸರಣಿ ಅಡಿಕೆ ಕಳ್ಳತನ ಪ್ರಕರಣ. ರಾತ್ರಿಯಾದರೆ ವಾಹನಗಳಲ್ಲಿ ಬರುವ ಕಳ್ಳರು ತೋಟದ ಮನೆಗಳಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಡಿಕೆಯನ್ನು ಕದ್ದು ಸಾಗಿಸುತ್ತಿದ್ದರು. ಈ ವರ್ಷ ಒಂದು ಜಾತಿ ಕಾಸು ಆಯ್ತು ಎನ್ನುವಷ್ಟರಲ್ಲಿ ಅಡಿಕೆ ಮೂಟೆಗಳು ಮಾಯವಾಗಿದ್ದ ಕಂಡ ಬೆಳೆಗಾರ ತಲೆಮೇಲೆ ಕೈ ಹೊತ್ತು ವರ್ಷದ ಕೂಳು ಹೋಯ್ತಲ್ಲ ಅಂತದ್ದುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. 

ಕಳೆದುಕೊಂಡರವರದ್ದು ಒಂದು ಸಮಸ್ಯೆಯಾದರೆ, ತಮ್ಮ ಮನೆ ಅಡಿಕೆ ಎಲ್ಲಿ ಹೋಗುತ್ತೋ ಅಂತಾ ಜಾಗೃತೆ ಮಾಡಲು ಬೆಳೆಗಾರರು ನಿದ್ರೆ ಬಿಟ್ಟು ಜಾಗರಣೆ ಮಾಡುತ್ತಿದ್ದರು. ಸಾಗರ, ಸೊರಬ ಭಾಗದಲ್ಲಿ ಒಂದರೆಡು ತಿಂಗಳಿನಿಂದ ಈ ಸಮಸ್ಯೆ ಪೀಕ್‌ಗೆ ಹೋಗಿತ್ತಷ್ಟೆ ಅಲ್ಲದೆ ಪೊಲೀಸರ ವಿರುದ್ಧ ಪ್ರತಿಭಟನೆಗಳು ಸಹ ನಡೆದಿದ್ದವು.ಈ ನಡುವೆ ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಡಿಕೆ ಕಳ್ಳತನ ಪ್ರಕರಣಗಳ ಬೆನ್ನಟ್ಟಿದ್ದ  ಸಾಗರ ಡಿವೈಎಸ್ಪಿ ಗೋಪಾಲ್ ನಾಯಕ್ ನೇತ್ಪತ್ವದ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಮಹಾಬಲೇಶ್ವರ ರವರ ಟೀಂ ಇತ್ತೀಚೆಗೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. 

ಸಾಗರ ಪೊಲೀಸರ ಬೇಟೆ

ಹೌದು ಸವಾಲಾಗಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ತಾರು ಕಡೆ 20 ಕ್ಕೂ ಹೆಚ್ಚು ಅಡಿಕೆ ಮೂಟೆ ಕದ್ದಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಕ್‌ರಾಜ್‌, ಹನುಮಂತಪ್ಪ, ರಾಕೇಶ್‌, ಅಭಿಷೇಕ್‌, ಶಿವಕುಮಾರ್‌ ಬಂಧಿತ ಆರೋಪಿಗಳಾಗಿದ್ದು, ಎಲ್ಲರೂ ಶಿಕಾರಿಪುರ ತಾಲೂಕಿನ ಸಂಡಾ ಪೋಸ್ಟ್ ನ ಹರಗುವಳ್ಳಿ ಗ್ರಾಮದವರೇ ಆಗಿದ್ದಾರೆ. ವಿಶೇಷ ಅಂದರೆ ಬಂಧಿತರೆಲ್ಲರೂ 20 ರಿಂದ 24 ವಯಸ್ಸಿನ ಆಸುಪಾಸಿನವರಾಗಿದ್ದಾರೆ.. ಬಂಧಿತರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆ ಹಾಗು ವಾಹನ ಸೇರಿದಂತೆ ಹದಿನೈದು ಲಕ್ಷಕ್ಕೂ ಅಧಿಕ ಮಾಲನ್ನು ವಶಕ್ಕೆ ಪಡೆಯಲಾಗಿದೆ.  ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌, ಸೊರಬ ಠಾಣೆಗಳ ಒಟ್ಟು 8 ಪ್ರಕರಣಗಳಲ್ಲಿ  ಆರೋಪಿಗಳು ಭಾಗಿಯಾಗಿದ್ದರು. 

ವಿಶೇಷ ಅಂದರೆ, ಈ ಗ್ಯಾಂಗ್‌ನ ಕಳ್ಳತನದ ಸ್ಟೈಲ್‌ ಹಾಗೂ ಸಿಕ್ಕಿಬಿದ್ದ ರೀತಿ ಮತ್ತು ಇವರ ಮೋಟೋ ವಿಭಿನ್ನವಾಗಿದೆ. ಕಳ್ಳತನ ಮಾಡಿದ ಆರೋಪಿಗಳು ಈ ಹಿಂದೆ ಯಾವುದೇ ಕ್ರೈಂ ಹಿಸ್ಟರಿ  ಹೊಂದಿಲ್ಲ. ಮನೆಯಲ್ಲಿ ಬಡತನವಿತ್ತು, ಹಣವಂತರಾಗಿ ಬಡತನವನ್ನು ಮೆಟ್ಟಿ ನಿಲ್ಲಬೇಕು, ಈ ಕಾಲದಲ್ಲಿ ನಿಯತ್ತಾಗಿ ದುಡಿದ್ರೆ ಸಾಯೋತನಕ ಶ್ರೀಮಂತರಾಗಲ್ಲ. ಥಟ್‌ ಅಂತಾ ಸಿರಿವಂತರಾಗೋ ಅಡಿಕೆ ಕದಿಯಬೇಕು ಎಂದು ತೀರ್ಮಾನಿಸಿದ್ರು. 

ಕಳ್ಳತನಕ್ಕೆ ಹೈಟೆಕ್‌ ಸ್ಕೆಚ್‌

ದುಬಾರಿ ಅಡಿಕೆ ಕದ್ರೆ ರಿಸ್ಕ್‌ ಸಹ ಕಡಿಮೆ ಎಂದುಕೊಂಡ ಆರೋಪಿಗಳು ತಮ್ಮ ಬಳಿ ಇದ್ದ ಟಾಟಾ ಏಸ್ ಹಾಗು ಮಹಿಂದ್ರಾ ಪಿಕ್ ಅಪ್ ವಾಹನವನ್ನು ಬಳಸಿಕೊಂಡರು ಹಗಲು ಹೊತ್ತು ಹಳ್ಳಿಯ ಮೇಲೆ ಹೋಗುತ್ತಿದ್ದ ಇವರು ಅಡಿಕೆ ತೋಟದ ಮನೆಗಳ ಮೇಲೆ ಹಾಗು ಅಡಿಕೆ ಗೋದಾಮು ದಾಸ್ತಾನು ಮಾಡುವವರ ಮೇಲೆ ಕಣ್ಣು ನೆಡುತ್ತಿದ್ದರು. ಮನೆಯಲ್ಲಿ ನಾಯಿ ಇದೆಯಾ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತಿದ್ದರು. ವೆಹಿಕಲ್ ಸುಗಮ ಸಂಚಾರಕ್ಕೆ ಪೂರಕ ರಸ್ತೆಗಳನ್ನುಹುಡುಕುತ್ತಿದ್ದರು. ವಾಹನ ಹೇಗೆ ಬರಬೇಕು. ಹೋಗಬೇಕು. ರಿವರ್ಸ್ ತೆಗೆದುಕೊಳ್ಳಲು ಅವಕಾಶ ಇದೆಯಾ. ಕಳ್ಳತನ ನಂತರ ಹೇಗೆ ಪಾರಾಗಬೇಕು, ಅಡ್ಡ ರಸ್ತೆಗಳಿವೆಯಾ ಆ ದಾರಿಯಲ್ಲಿ ಸಾಗಿದರೆ ಸಿಸಿ ಕ್ಯಾಮರಗಳು ಇದೆಯಾ ಹೇಗೆ ರಾತ್ರಿ ಹೊತ್ತು ಲೈಟಿಲ್ಲದೆ ಗಾಡಿ ಎಲ್ಲಿ ನಿಲ್ಲಿಸಬಹುದು ಅಡಿಕೆ ಕದ್ದ ನಂತರ ಸಾಗಿಸುವ ಸಮಯ ಸಂದರ್ಭ ಹೀಗೆ ಎಲ್ಲವನ್ನು ಅವಲೋಕಿಸುವ ಆರೋಪಿಗಳು ನಂತರ ಸ್ಕೆಚ್ ರೆಡಿ ಮಾಡುತ್ತಿದ್ದರು.

ಕೂಲಿಗೆ ಬರುತ್ತಿದ್ದ ಕಳ್ಳರು

ಯಾರಿಗೂ ಅನುಮಾನ ಬಾರದ ರೀತಿ ಕೂಲಿಯಾಳುಗಳನ್ನು ತೆರೆದ ವಾಹನದಲ್ಲಿ ಸಾಗಿಸುವ ರೀತಿಯಲ್ಲಿ ತಮ್ಮವರನ್ನು ಕರೆದುಕೊಂಡು ಹಗಲು ಹೊತ್ತಿನಲ್ಲಿಯೇ ಹಳ್ಳಿ ಸುತ್ತು ಹಾಕುತ್ತಿದ್ದರು. ಊರಿನಲ್ಲಿ ಯಾರ ತೋಟ ಚೆನ್ನಾಗಿದೆ ಅವರ ಬಳಿ ಕೆಲಸಕ್ಕೆ ಸೇರಿಕೊಳ್ಳುವುದು. ನಂತರ ಸುತ್ತಮುತ್ತಲ ಪರಿಸರವನ್ನು ಅವಲೋಕಿಸಿದ ನಂತರ ಮುಂದೊಂದು ದಿನ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರು. ಹಗಲು ಹೊತ್ತು ತೋಟದ ಕೂಲಿಯಾಳುಗಳಂತೆ ನಟಿಸುತ್ತಿದ್ದ ಆರೋಪಿಗಳು ಯಾರ ಮನೆಗಳಲ್ಲಿ ಅಡಿಕೆ ಮೂಟೆಗಳನ್ನು ಮನೆ ಹೊರಗೆ ಸ್ಟಾಕ್ ಇಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು.

ಸಣ್ಣ ಹಿಡುವಳಿದಾರರ ಮನೆಯಲ್ಲಿಯೇ ಹೆಚ್ಚು ಕಳ್ಳತನ

ಹೇಳಿಕೇಳಿ ಇದು ಮದುವೆ ಶುಭಕಾರ್ಯಗಳ ಸಮಯ. ಮನೆಯಲ್ಲಿರುವ ಅಡಿಕೆಯನ್ನು ಮಾರಿಯೆ ಗಡ್ಜು ಮಾಡಬೇಕಾದ ಅನಿವಾರ್ಯತೆ ರೈತರದ್ದಾಗಿರುತ್ತದೆ. ಬಂಗಾರದ ಬೆಲೆ 75 ಸಾವಿರ ಗಡಿ ದಾಟಿರುವಾಗ ಮಗಳ ಮದುವೆ ಮಾಡಿಸುವ ತಂದೆ ಎರಡು ಕ್ವಿಂಟಾಲ್ ಅಡಿಕೆಯನ್ನಾದರೂ ಮಾರಬೇಕಾಗುತ್ತದೆ. ಅಡಿಕೆ ಮೂಟೆಗಳೇ ಬಡ ರೈತರ ಪಾಲಿನ ದಾರಿದೀಪವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ಮೂರು ಅಡಿಕೆ ಮೂಟೆಗಳನ್ನು ಕಳ್ಳರು ಕದ್ದಾಗ ಆ ನೊಂದ ಕುಟುಂಬ ಆರ್ಥಿಕವಾಗಿ ದುರ್ಬಲವಾಗುತ್ತದೆ. ಬದುಕುವ ಆಸೆಯನ್ನೇ ಕಳೆದುಕೊಳ್ಳುತ್ತದೆ. ಸೋ ಕಾಲ್ಡ್‌ ಕಳ್ಳ ಯುವಕರ ಗ್ಯಾಂಗ್‌ ಇಂತಹವರ ಮನೆಯಲ್ಲಿ ಅಡಿಕೆ ಕದ್ದು, ಅವರುಗಳಿಗೆ ಆರ್ಥಿಕವಾಗಿಯು ಏಟು ಕೊಡುತ್ತಿತ್ತು. ಹೀಗಾಗಿ ಈ ಪ್ರಕರಣಗಳನ್ನ ಸಾಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. 

ಸಿಸಿ ಕ್ಯಾಮರಾ ಸುಳಿವು

ಬೆಳಗಾರರ ಆರ್ಥಿಕತೆಗೆ ಏಟು ಕೊಟ್ಟ ಆರೋಪಿಗಳನ್ನ ಬೆನ್ನಟ್ಟಿ ಹೊರಟಿದ್ದ ಪೊಲೀಸರಿಗೆ ಸಿಕ್ಕಿದ್ದು ಸಿಸಿ ಕ್ಯಾಮರಾಗಳ ಸುಳಿವು,  ಕಳ್ಳತನ ನಡೆದ ಸ್ಥಳದ ಸುತ್ತಮುತ್ತ ಹಾಗೂ ಅಲ್ಲಿನ ದಾರಿ ತಲುಪುವ ಊರುಗಳ ಸುತ್ತಮುತ್ತಲಿನ ಕ್ಯಾಮರಾಗಳನ್ನ ವೀಕ್ಷಿಸಿದ ಪೊಲೀಸರು ನಿರಂತರ ಪ್ರಯತ್ನದಲ್ಲಿ ಒಂದು ಅನುಮಾನಸ್ಪದ ತೀರ್ಮಾನಕ್ಕೆ ಬಂದಿದ್ದರು. ಇವರೆ ಇರಬಹುದಾ ಅಂಥಾ ಕೆಲವು ವಾಹನಗಳಿದ್ದವರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಸಂಶಯದ ಬಂದಮೇಲೆ ಪೊಲೀಸರು ಬಿಡುವುದುಂಟೆ. ಜಿಟಿ ನಾಯ್ಕ್‌  ಟೀಂ ಶಂಕಿತರನ್ನ ತಮ್ಮದೆ ಶೈಲಿಯಲ್ಲಿ ಕರೆಸಿ ವಿಚಾರಿಸಿದೆ. ಪರಿಣಾಮ ಆರೋಪಿಗಳು ಅಂದರ್‌  ಆಗಿದ್ದಾರೆ. 

A gang of five young men from Haraguvali village in Shikaripura taluk have been arrested for stealing areca nuts from over 20 locations in the Sagar, Sorab region. The gang, aged between 20 and 24, stole areca nuts worth lakhs of rupees, using Tata Ace and Mahindra pickup vehicles.