ಶಿವಮೊಗ್ಗ ಕೋರ್ಟ್‌ ಸಮೀಪ ಮೊದಲನೇ ಪತ್ನಿಯಿಂದ ಪತಿಯ ಮೇಲೆ ಹಲ್ಲೆ | ಎಫ್‌ಐಆರ್‌ ದಾಖಲು

A man from Shivamogga, who had divorced his first wife and remarried, was assaulted by his first wife near the Shivamogga Court. FIR has been registered regarding the assault at the Jayanagar Police Station.

ಶಿವಮೊಗ್ಗ ಕೋರ್ಟ್‌ ಸಮೀಪ ಮೊದಲನೇ ಪತ್ನಿಯಿಂದ ಪತಿಯ ಮೇಲೆ ಹಲ್ಲೆ | ಎಫ್‌ಐಆರ್‌ ದಾಖಲು
Jayanagar Police Station

SHIVAMOGGA | MALENADUTODAY NEWS | May 31, 2024  ಮಲೆನಾಡು ಟುಡೆ

ಶಿವಮೊಗ್ಗ ಕೋರ್ಟ್‌ ಸಮೀಪ ಕೋರ್ಟ್‌ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಅವರ ಪತ್ನಿಯೇ ಹಲ್ಲೆ ಮಾಡಿದ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಶಿವಮೊಗ್ಗ ನಗರದ ಅಜಾಧ್‌ ನಗರ ನಿವಾಸಿಯೊಬ್ಬರು ತಮ್ಮ ಮೊದಲ ಪತ್ನಿಯಿಂದ ವಿಚ್ಚೇಧನ ಪಡೆದಿದ್ದರು. ಆನಂತರ ಎರಡನೇ ಮದುವೆಯಾಗಿದ್ದರು. ಈ ವಿಚಾರದಲ್ಲಿ ಮೊದಲನೇ ಪತ್ನಿ ಹಾಗೂ ನಿವಾಸಿಯ ನಡುವೆ ವ್ಯಾಜ್ಯ ನಡೆದಿತ್ತು. ಇದೇ ವಿಚಾರದಲ್ಲಿ ಈ ಹಿಂದೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಇನ್ನೂ ಕಳೆದ 28 ರಂದು ಕ್ರಿಮಿನಲ್‌ ಅಫೀಲ್‌ ವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ನಿವಾಸಿ ಕೋರ್ಟ್‌ಗೆ ಹೋಗಿ ವಾಪಸ್‌ ಬರುವ ಸಂದರ್ಭದಲ್ಲಿ ಅವರ ಮೇಲೆ ಅವರ ಮೊದಲ ಪತ್ನಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಸಹ ದಾಖಲಾಗಿದೆ. 