ಗಣೇಶ ವಿಸರ್ಜನೆಯ ಸಮಯದಲ್ಲಿ, ಕೆರೆಯಲ್ಲಿ ಮುಳುಗಿ ರೈತ ಸಾವು! ಇಷ್ಟಕ್ಕೂ ನಡೆದಿದ್ದೇನು?

A farmer drowned in a lake near Anandpur, Sagar taluk, Shimoga districtಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪ ರೈತರೊಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ

ಗಣೇಶ ವಿಸರ್ಜನೆಯ ಸಮಯದಲ್ಲಿ,   ಕೆರೆಯಲ್ಲಿ ಮುಳುಗಿ ರೈತ ಸಾವು! ಇಷ್ಟಕ್ಕೂ ನಡೆದಿದ್ದೇನು?

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ   ಆನಂದಪುರದ ಜೇಡಿಸರದ ಬಳಿಯಲ್ಲಿ  ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ ಎಂಬ ಮಾಹಿತಿಯೊಂದು ನಿನ್ನೆ ಲಭ್ಯವಾಗಿತ್ತು. ಬಳಿಕ ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. 

ಸ್ಥಳಿಯು ನಿವಾಸಿ  ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು. ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದರು. ಆ ವೇಳೇ ಕೆರೆ ಆಳ ನೋಡಲು ಹೋದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿತ್ತು ಎಂದು ಹೇಳಲಾಗಿತ್ತು. 

ಆನಂತರ ಮೃತನ ಪುತ್ರ ಪೊಲೀಸರಿಗೆ ಹೇಳಿಕೆ ನೀಡಿದ್ದು, ಸತೀಶ್ ರವರು ಎಮ್ಮೆಯನ್ನು ಹುಡುಕಿಕೊಂಡು ಕೆರೆ  ಏರಿ ಮೇಲೆ ಹೋಗುತ್ತಿದ್ದಾಗ, ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಅವರನ್ನ ತಕ್ಷಣವೇ ನೀರಿನಿಂದ ಮೇಲಕ್ಕೆತ್ತಿ ಆನಂದಪುರ  ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯ್ತಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು