ಸಾಗರ ಮಾರಿಕಾಂಬೆ ಜಾತ್ರೆಗೆ ಮರ ಕಡಿಯುವ ಶಾಸ್ತ್ರ / ವಾಡಿಕೆ, ಸಂಪ್ರದಾಯ,ಆವಾಹನೆ , ಹಲಸಿನ ಮರ/ ಎಷ್ಟೆಲ್ಲಾ ವಿಧಿವಿಧಾನ? ಪೂರ್ತಿ ವರದಿ ಇಲ್ಲಿದೆ ಓದಿ

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಮಾರಿಕಾಂಬೆ ಜಾತ್ರೆಯ ಹಿನ್ನೆಲೆಯಲ್ಲಿ ಇವತ್ತು ಮರ ಕಡಿಯುವ ಶಾಸ್ತ್ರವನ್ನು ಕೈಗೊಳ್ಳಲಾಯ್ತು. ವಾಡಿಕೆ, ಸಂಪ್ರದಾಯಗಳ ಪ್ರಕಾರ ನಡೆದ ಶಾಸ್ತ್ರ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.

ಆಕ್ಸಿಡೆಂಟ್ ನ್ಯೂಸ್​ : ಕೊಲ್ಲೂರಿನಿಂದ ವಾಪಸ್​ ಆಗ್ತಿದ್ದ ವೇಳೆ, ಗವಟೂರು ಬಳಿ ರಸ್ತೆ ಬದಿಗೆ ಉರುಳಿದ ದಾವಣೆಗೆರೆ ಮೂಲದವರ ಕಾರು

Malenadu Today

ಮೊದಲು ಗಣಪತಿ ಪೂಜೆ, ಫಲಸಮರ್ಪಣೆಯನ್ನು ಮುಗಿಸಿ ದೇವಾಲಯದಿಂದ ಸಾಗರ ಮಾರಿಕಾಂಬೆ ದೇವಸ್ಥಾನದ ಗಂಡನ ಮನೆಯ ಅರ್ಚಕರು ಆದ  ರವಿ ಪೋತರಾಜರವರ ಮನೆಗೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಲಾಯ್ತು. ಅರ್ಚಕರಿಗೆ ವಾಡಿಕೆಯಂತೆ ವಸ್ತ್ರಗಳನ್ನು ನೀಡಲಾಯ್ತು. ಮನೆಯಿಂದ ಹೊರಡುತ್ತಲೇ ಅರ್ಚಕರು ದೇವಿಯ  ಆವಾಹನೆಗೊಳಗಾಗಿದ್ದರು. 

ಇದನ್ನು ಸಹ ಓದಿ : ಅಧಿಕಾರಿಗಳ ಜೊತೆ ಸಂಸದ ರಾಘವೇಂದ್ರರ ಮಿಟಿಂಗ್​/ ಶಿವಮೊಗ್ಗದ ರೈಲ್ವೆ ಓವರ್​​ ಬ್ರಿಡ್ಜ್​ ಕಾಮಗಾರಿ ಸೇರಿ ಮೂರು ಮುಖ್ಯ ವಿಚಾರಕ್ಕೆ ಕೊಟ್ಟರು ಸೂಚನೆ/ ವಿವರ ಇಲ್ಲಿದೆ

Malenadu Today

ಆನಂತರ, ಅವರನ್ನು ಮನೆಯಿಂದ ಶಾಸ್ತ್ರೋಸ್ತ್ರವಾಗಿ ದೇವಾಲಯಕ್ಕೆ ಕರೆತಲಾಯ್ತು. ಸಂಪ್ರದಾಯ ಬದ್ಧವಾಗಿ ನಡೆದ ಧಾರ್ಮಿಕ ಮೆರವಣಿಗೆ, ಮಾರ್ಗ ಮಧ್ಯೆ ಚಿಕ್ಕಮ್ಮನ ಮನೆಯಲ್ಲಿಯು ಪೂಜೆ ಸಲ್ಲಿಸಲಾಯ್ತು. ಅಲ್ಲಿಂದ ಮಾರಿಕಾಂಬ ದೇವಸ್ಥಾನಕ್ಕೆ ಬಂದ ಬಳಿಕ ಅಲ್ಲಿ ಮಂಗಳಾರತಿ ಮಾಡಿ ಆನಂತರ ಮರ ಕಡಿಯುವ ಶಾಸ್ತ್ರ ವಿದ್ಯುಕ್ತವಾಗಿ ಆರಂಭವಾಯ್ತು, ಶ್ರಿರಾಂಪುರ ಬಡಾವಣೆಗೆ ಬಂದ ಕಾಲ ಭೈರವೇಶ್ವರ ದೇವಸ್ಥಾನದ ಸಮೀಪ ಇರುವ ಹಲಸಿನ ಮರವನ್ನು ಗುರುತಿಸಿ ಚಾಟಿ ಬೀಸಿ ಚೆಕ್ಕೆ ತೆಗೆದರು. 

Malenadu Today

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಮರ ಗುರುತಿಸಿ ಚೆಕ್ಕೆ ತೆಗೆದ ಬಳಿಕ ಅರ್ಚಕರ ಮೈಮೇಲಿನ ದೇವಿಯ ಆವಾಹನೆ ಕಮ್ಮಿಯಾಯ್ತು, ಆನಂತರ ಪುನಃ ದೇವಾಲಯಕ್ಕೆ ಬಂದು, ವಿಶೇಷ ಪೂಜೆ ಸಲ್ಲಿಸಲಾಯ್ತು. ಸಾಮಾನ್ಯ ಅರ್ಚಕರು ಗುರುತಿಸಿದ ಮರದ ಚಕ್ಕೆಯನ್ನು ದೇವಿಯ ವಿಗ್ರಹದ ಜೊತೆಗೆ ಬಳಸಲಾಗುತ್ತದೆ. ಆನಂತರ ಜನವರಿ 31 ರಂದು ಮಾರಿಕಾಂಬೆ ಜಾತ್ರೆಯ ಅನ್ವಯ ಸಾರ್ ಹಾಕಲಾಗುತ್ತದೆ.

Malenadu Today

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಅಂಕೆ ಕಾರ್ಯಕ್ರಮ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದ ಬಳಿಕ, ಜಾತ್ರೆ ಮುಗಿಯುವರೆಗೂ ಈ ಭಾಗದಲ್ಲಿ ಮನೆಯಲ್ಲಿ ವಿಶೇಷ ಸಮಾರಂಭಗಳು ನಡೆಯುವುದಿಲ್ಲ. ಅಲ್ಲದೆ ಊರ ಹೊರಗಡೆ ಹೋದವರು, ಸಂಜೆಯೊಳಗಾಗಿ ಮನೆಗೆ ಬರುತ್ತಾರೆ. ಇನ್ನೂ ಫೆಬ್ರವರಿ ಏಳರಂದು ಜಾತ್ರೆ ಆರಂಭವಾಗಿ ಫೆಬ್ರವರಿ 15 ರವರೆಗು ಸಾಗರದ ಪ್ರಖ್ಯಾತ ಮಾರಿಕಾಂಬೆ ಜಾತ್ರೆ ನಡೆಯಲಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article