ಪತ್ನಿ ಜೊತೆ ಜಗಳ, ಡಿಡಿಟಿ ಪೌಡರ್ ತಿಂದ ಗಂಡ, ಸಾಗರದಲ್ಲಿ ಇಂತಹದ್ದೊಂದು ಕಳ್ಳತನ, ಅಧಿಕಾರಿ ಮೇಲೆ ಹಲ್ಲೆಗೆ ಯತ್ನ?
Details of events that took place in Shimoga, Sagar taluk ಶಿವಮೊಗ್ಗ, ಸಾಗರ ತಾಲ್ಲೂಕಿನಲ್ಲಿ ನಡೆದ ಘಟನೆಗಳ ವಿವರ

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS
SHIVAMOGGA | ಪತ್ನಿಯ ಜೊತೆಗೆ ಜಗಳವಾಡಿ ಗಂಡನೊಬ್ಬ ಡಿಡಿಟಿ ಪೌಡರ್ ತಿಂದ ಘಟನೆ ದೊಡ್ಡಪೇಟೆ ಪೊಲೀಸ್ ಸ್ಠೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ಹೆಂಡತಿ ಜಗಳದ ಬಗ್ಗೆ ಕರೆ ಬಂದ ಬೆನ್ನಲ್ಲೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪತಿರಾಯ ಡಿಡಿಟಿ ಪೌಡರ್ ತಿಂದಿರುವುದು ಗೊತ್ತಾಗಿದೆ. ತಕ್ಷಣವೇ ಆತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ.
READ : BHADRAVATI | ಕಾರು ಲಾರಿ ಡಿಕ್ಕಿ | ಅತ್ತಿಗೆ -ಮೈದುನನ ಕದನ | ಅನುಮಾನಸ್ಪದ ವ್ಯಕ್ತಿ @Top news
ಸಾಗರದಲ್ಲಿ ಕಳ್ಳತನ ಪ್ರಕರಣ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಮನೆಯೊಂದರಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಆರಂಭವಾಗಿದೆ
ಅಧಿಕಾರಿ ಮೇಲೆ ಹಲ್ಲೆಗೆ ಯತ್ನ!?
ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಆನಂದಪುರ ಹೋಬಳಿಯ ಜಂಬಾನಿಯಲ್ಲಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆಗಿರುವ ಅವಿನಾಶ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಕಲ್ಲು ಕ್ವಾರೆ ಉಪಯೋಗಿಸುತ್ತಿದ್ದ ಯಂತ್ರೋಪಕರಣ ಹಾನಿ ಮಾಡಿರುವ ಆರೋಪದ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ದೂರಲಾಗಿದೆ