ಹೆದ್ದಾರಿಯಲ್ಲಿ ವಾಹನ ತಡೆದ ಚಂದಾ ವಸೂಲಿ! ಯುವಕರಿಗೆ ಪೊಲೀಸರ ವಾರ್ನಿಂಗ್! ಮಗಳ ಗಲಾಟೆ, ತಾಯಿ ದೂರು! ಮನೆ ಜಪ್ತಿಗೆ ಬಂದವರ ಜೊತೆ ಕಿರಿಕ್!

Here is a brief report of the various events that took place in Shimoga, Bhadravatiಶಿವಮೊಗ್ಗ, ಭದ್ರಾವತಿಯಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವರದಿ ಇಲ್ಲಿದೆ

ಹೆದ್ದಾರಿಯಲ್ಲಿ ವಾಹನ ತಡೆದ ಚಂದಾ ವಸೂಲಿ! ಯುವಕರಿಗೆ ಪೊಲೀಸರ ವಾರ್ನಿಂಗ್! ಮಗಳ ಗಲಾಟೆ, ತಾಯಿ ದೂರು! ಮನೆ ಜಪ್ತಿಗೆ ಬಂದವರ ಜೊತೆ ಕಿರಿಕ್!

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಶಿವಮೊಗ್ಗ-ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಗಣೇಶೋತ್ಸವ ಜೋರಾಗಿ ನಡೆಯುತ್ತಿದೆ. ಈ ನಡುವೆ ಕೆಲವೊಂದು ಸಣ್ಣಪುಟ್ಟ ಘಟನೆಗಳು ಪೊಲೀಸರ ಮಧ್ಯಪ್ರವೇಶಕ್ಕೆ ಕಾರಣವಾಗಿದೆ. 

ಅದರಲ್ಲಿಯು ಗಣಪತಿ ಚಂದಾ ವಸೂಲಿ ಸಂಬಂಧ  ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು, ಗಣಪತಿ ಉತ್ಸವದ ಸಮಿತಿಯೊಂದರ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.  ಗಣಪತಿ ಸಮಿತಿಯ ಯುವಕರು ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ನಿಲ್ಲಿಸಿ ಅವರಿಗೆ ತೊಂದರೆ  ನೀಡುತ್ತಿದ್ದಿದ್ದು, ಪೊಲೀಸರ ಎಚ್ಚರಿಕೆಗೆ ಕಾರಣವಾಗಿದೆ. 112 ಪೊಲೀಸರಿಗೆ ವಾಹನ ಸವಾರರು ಕರೆ ಮಾಡಿ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹೆದ್ದಾರಿಯಲ್ಲಿ ವಾಹನ ತಡೆದ ಚಂದಾ ವಸೂಲಿ ಮಾಡಬಾರದು ಎಂದು ಎಚ್ಚರಿಸಿದ್ದಾರೆ. 

ಇನ್ನೊಂದೆಡೆ  ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಾಂತಮ್ಮ ಲೇಔಟ್ ನಲ್ಲಿ ಗಣಪತಿ ಕೂರಿಸುವ ವಿಚಾರಕ್ಕೆ ಯುವಕರ ನಡುವೆ ಕಿತ್ತಾಟ ನಡೆದ ಘಟನೆ ಬಗ್ಗೆ ತಡವಾಗಿ ವರದಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಆಗಿದ್ದಾರೆ. 



ಮನೆ ಜಪ್ತಿಗೆ ಬಂದ ಅಧಿಕಾರಿಗಳ ಜೊತೆ ಕಿರಿಕ್

ಇನ್ನೂ ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡಲು ಬಂದಿದ್ದ  ವೇಳೆ ಸಾಲಗಾರರು ಅಡ್ಡಿಪಡಿಸಿದ್ದಾರೆ. ಕೋರ್ಟ್ ಆದೇಶದಲ್ಲಿ ಮನೆ ಜಪ್ತಿ ಮಾಡಲು ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಅಡ್ಡಿಪಡಿಸಿದ್ದ ಕಾರಣಕ್ಕೆ ಪೊಲೀಸರನ್ನು ಅಧಿಕಾರಿಗಳು ಕರೆಸಿಕೊಂಡಿದ್ದಾರೆ. ಪೊಲೀಸರು ಸಾಲಗಾರಿನಿಗೆ ಎಚ್ಚರಿಕೆ ನೀಡಿ ವಾಪಸ್ ಆಗಿದ್ದಾರೆ.  

ಮನೆಯಲ್ಲಿ ಮಗಳ ಕಿರಿಕ್ ಪೊಲೀಸರಿಗೆ ದೂರು

ಭದ್ರಾವತಿ ತಾಲ್ಲೂಕಿನ ಭದ್ರಾವತಿ ಗ್ರಾಮಾಂತರ ಪೊಲೀಸ್  ಸ್ಟೇಷನ್​ ವ್ಯಾಪ್ತಿಯಲ್ಲಿ ಮಗಳು ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿದ್ದಾಳೆ. ಆ ಸಂಬಂಧ ಮನೆಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ಮಾಡಿದ ಮಹಿಳೆಗೆ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಅವರ ತಾಯಿಗೆ ಮತ್ತೆ ಗಲಾಟೆಯಾದರೇ ದೂರು ನೀಡುವಂತೆ ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು