KARNATAKA NEWS/ ONLINE / Malenadu today/ Sep 18, 2023 SHIVAMOGGA NEWS
ಚಿನ್ನಾಭರಣ ಇದ್ದ ಬ್ಯಾಗ್ವೊಂದನ್ನ ಅದರ ಮಾಲೀಕರಿಗೆ ವಾಪಸ್ ಮಾಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ತೋರಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಚಂದ್ರಮಾವಿನಕೊಪ್ಪದಿಂದ ಪ್ರಯಾಣಿಕರೊಬ್ಬರು ಆಟೋ ಹತ್ತಿದ್ದರು. ಸೊರಬ ರಸ್ತೆಯಲ್ಲಿ ಸಿಗುವ ಬೈಪಾಸ್ ಬಳಿ ಅವರು ಇಳಿದಿದ್ದರು. ಈ ವೇಳೆ ತಮ್ಮ ಬ್ಯಾಗ್ನ್ನು ಆಟೋದಲ್ಲಿ ಬಿಟ್ಟಿದ್ದರು. ಅಲ್ಲಿಂದ ಆಟೋ ಮುಂದಕ್ಕೆ ಸಾಗಿತ್ತು. ಆನಂತರ ಆಟೋಸೀಟಿನ ಹಿಂದಿದ್ದ ಬ್ಯಾಗ್ ನೋಡಿದ ಚಾಲಕ, ಅದನ್ನು ಸೀದಾ ಸಾಗರ ಟೌನ್ ಸ್ಟೇಷನ್ಗೆ ತಂದಿದ್ದಾನೆ.
ಪೊಲೀಸರು ಬ್ಯಾಗ್ ಪಡೆದು ಅದರ ಮಾಲೀಕರನ್ನು ಕರೆಸಿಕೊಂಡು ಅವರಿಗೆ ವಾಪಸ್ ನೀಡಿದ್ದಾರೆ. ಈ ವೇಳೆ ಆಟೋಚಾಲಕನ ಪ್ರಾಮಾಣಿಕತೆ ಬ್ಯಾಗ್ನ ಮಾಲೀಕರು ಹಾಗೂ ಪೊಲೀಸರಿಂದಲೂ ಪ್ರಶಂಸೆಗೆ ಒಳಗಾಯ್ತು
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ
