ಕೇಬಲ್ ತಂತಿ ಬಿಗಿದು ಕೊಲೆಗೆ ಯತ್ನ! ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸೇರಿ 2 ಮಹಿಳೆ, 2 ಪುರುಷರ ವಿರುದ್ಧ ಕೇಸ್​

Attempted murder by tying a cable wire! Case registered against 2 women, 2 men, including former taluk panchayat member Sagar Rural Police Station Case

Shivamogga |  Jan 30, 2024 |  ಹಳೇ ದ್ವೇಷದ ಹಿನ್ನೆಲೆ ತಾಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲ್ಯಾವಿಗೆರೆ ವಾಸಿ ಮನುಕುಮಾರ್‌ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಬಂಧ ಕೇಸ್ ದಾಖಲಾಗಿದೆ. 

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​

ಘಟನೆಗೆ ಸಂಬಂಧಪಟ್ಟಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸೇರಿದಂತೆ ನಾಲ್ವರ ವಿರುದ್ಧ ಸಾಗರ ಗ್ರಾಮಾಂತರ ಠಾಣೆ ಯಲ್ಲಿ ದೂರು ದಾಖಲಾಗಿದೆ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್‌ ಲ್ಯಾವಿಗೆರೆ ಪುತ್ರ ರಾಗಿರುವ ಮನುಕುಮಾರ್‌ ಭಾನುವಾರ ತೋಟಕ್ಕೆ ಹೋಗಿದ್ದರು.

ಈ ಸಂದರ್ಭದಲ್ಲಿ ಏಕಾಏಕಿ ನಾಲ್ವರು ದೊಣ್ಣೆ, ಕೇಬಲ್ ತಂತಿ, ಪೈಪ್ ಇನ್ನಿತರ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತಮ್ಮ ಗಂಟಲಿಗೆ ಕೇಬಲ್ ತಂತಿ ಬಿಗಿದು, ಕೊಲ್ಲುವ ಪ್ರಯತ್ನ ನಡೆಸಿದ್ದರು ಎಂದು ಮನುಕುಮಾರ್ ದೂರಿದ್ದಾರೆ. ತೋಟದಲ್ಲಿ ಗಾಯಗೊಂಡು ಬಿದ್ದಿದ್ದ ಮನುಕುಮಾರ್‌ಅವರನ್ನು ರಾತ್ರಿ 8.30ರ ಸುಮಾರಿಗೆ ಗ್ರಾಮಸ್ಥರು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ತಮ್ಮ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಮನುಕುಮಾ‌ರ್ ತಾಪಂ ಮಾಜಿ ಸದಸ್ಯೆ ಸೇರಿದಂತೆ ಇಬ್ಬರು ಮಹಿಳೆಯರು ಹಾಗೂ ಪುರುಷರ ವಿರುದ್ಧ ಕೇಸ್ ದಾಖಲಿಸಿದ್ದಾರೆ.