BREAKING NEWS / ವಕ್ಕೋಡಿ ಕ್ರಾಸ್​ನಲ್ಲಿ ಶಾಲೆ ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಬಸ್​ ಅಪಘಾತ/

ವಕ್ಕೋಡಿ ಎಂಬಲ್ಲಿ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಅಂತಾ ಕರೆತಂದಿದ್ದ ಬಸ್​ವೊಂದು ಪಲ್ಟಿಯಾಗಿದೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 18 ಹೆಚ್ಚು ಮಕ್ಕಳಿಗೆ ಪೆಟ್ಟಾಗಿದೆ. ಅಲ್ಲದೆ ಶಿಕ್ಷರಿಗೂ ಗಾಯಗಳಾಗಿವೆ.

BREAKING NEWS / ವಕ್ಕೋಡಿ ಕ್ರಾಸ್​ನಲ್ಲಿ ಶಾಲೆ ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಬಸ್​ ಅಪಘಾತ/

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪದ ವಕ್ಕೋಡಿ ಎಂಬಲ್ಲಿ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಅಂತಾ ಕರೆತಂದಿದ್ದ ಬಸ್​ವೊಂದು ಪಲ್ಟಿಯಾಗಿದೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 18  ಹೆಚ್ಚು ಮಕ್ಕಳಿಗೆ ಪೆಟ್ಟಾಗಿದೆ. ಅಲ್ಲದೆ ಶಿಕ್ಷರಿಗೂ ಗಾಯಗಳಾಗಿವೆ. 

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ

ಅವರನ್ನು ಸಾಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದ ಮಕ್ಕಳಿಗೆ ಬ್ಯಾಕೋಡು ಬಿಎಸಿಎಂ ಹಾಸ್ಟೆಲ್​ನಲ್ಲಿ ತಾತ್ಕಾಲಿಕ ವಾಸ್ತವ್ಯ ಕಲ್ಪಿಸಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಧರ್ಮಾಪುರದ ಸರ್ಕಾರಿ ಪ್ರೌಢ ಶಾಲಾ ಮಕ್ಕಳು ಎಂದು ತಿಳಿದುಬಂದಿದೆ. ಬಸ್​ನಲ್ಲಿ 60 ಮಕ್ಕಳಿದ್ದರು ಎನ್ನಲಾಗುತ್ತಿದೆ. 

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಇನ್ನೂ ತುಮರಿಯಿಂದ 9 ಕಿಲೋಮೀಟರ್ ದೂರದಲ್ಲಿರುವ ವಕ್ಕೋಡಿ ಕ್ರಾಸ್​ ಅಪಾಯಕಾರಿ ಕ್ರಾಸ್ ಆಗಿದ್ದು, ಈ ಹಿಂದೆಯು ಇಲ್ಲಿಯೇ ಕ್ರೂಸರ್, ಕಾರು ಆಕ್ಸಿಡೆಂಟ್ ಸಂಭವಿಸಿತ್ತು.ಸಿಗಂದೂರಿಗೆ ಬರುತ್ತಿದ್ದ ಬಸ್​, ಸ್ಪೀಡ್​ ಆಗಿ ಬಂದಿದ್ದರಿಂದಲೂ, ರಸ್ತೆ ಕಿರಿದಾಗಿರುವ ಕಾರಣದಿಂದಲೂ ಆಕ್ಸಿಡೆಂಟ್ ಸಂಭವಿಸಿರಬಹುದು ಎನ್ನಲಾಗುತ್ತಿದೆ. 

ಇದನ್ನು ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link