ಸಾಗರ ಟೌನ್​ ಘಟನೆ/ ಪೊಲೀಸರ ಕ್ವಿಕ್ ಆ್ಯಕ್ಷನ್​/ ಹಾಲಿ ಶಾಸಕರು- ಮಾಜಿ ಶಾಸಕರು ಹೇಳಿದ್ದೇನು?

Sagar Town incident/ Quick Action of the Police/ What did the sitting MLAs and former MLAs say?

ಸಾಗರ ಟೌನ್​ ಘಟನೆ/ ಪೊಲೀಸರ ಕ್ವಿಕ್ ಆ್ಯಕ್ಷನ್​/ ಹಾಲಿ ಶಾಸಕರು- ಮಾಜಿ ಶಾಸಕರು ಹೇಳಿದ್ದೇನು?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೇಟೆಯಲ್ಲಿ ಇವತ್ತು ಬೆಳಗ್ಗೆ ನಡೆದ ಘಟನೆ ಸಂಬಂಧ ಜನಪ್ರತಿನಿಧಿಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪರವರು ಈ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಘಟನೆ ವಿವರ ಪಡೆದಿದ್ದಾರೆ.

ಆರೋಪಿ ಬಂಧನಕ್ಕೆ 3 ತಂಡ/ ಸ್ನೇಹಿತನೇ ಹಲ್ಲೆ ಮಾಡಲು ಕಾರಣವಾದ ಹಗೆತನವೇನು? / ಹಿಂದೂ ಸಂಘಟನೆಗಳು ಹೇಳಿದ್ದೇನು?

ಪೊಲೀಸರ ಜೊತೆ ಹರತಾಳು ಹಾಲಪ್ಪ ಸಭೆ

ಎಎಸ್​ಪಿ ರೋಹನ್​ ಜಗದೀಶ್ ಸೇರಿದಂತೆ ಸಾಗರ ವಿಭಾಗದ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಘಟನೆ ಸಂಬಂಧ ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಜನರಲ್ಲಿ ಭಯದ ವಾತಾವರಣ ಸೃಷ್ಠಿಸುವ ಕೃತ್ಯ ನೆಡೆಸುವವರನ್ನು ವಶಕ್ಕೆ ಪಡೆದು, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ / ಸಂಘಟನೆಗಳ ಪ್ರತಿಭಟನೆ

ಸುನೀಲ್ ಮನಗೆ ಶಾಸಕರ ಭೇಟಿ

ಇಷ್ಟೆ ಅಲ್ಲದೆ, ಸುನೀಲ್​ರ ಮನೆಗೆ ಭೇಟಿಕೊಟ್ಟು, ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ್ಧಾರೆ. 

ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಬೇಳೂರು ಆಗ್ರಹ

ಇತ್ತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಘಟನೆಯನ್ನು ಖಂಡಿಸಿದ್ದು, ಸಾಗರದಲ್ಲಿ ಇಂದು ಸುನಿಲ್ ಎಂಬ ಯುವಕನ ಮೇಲೆ  ಹಲ್ಲೆ ಮಾಡಲು ಪ್ರಯತ್ನಿಸಿದ ವೀಡಿಯೋ ನೋಡಿ ಆಶ್ಚರ್ಯ ಹಾಗೂ ಭಯವಾಯಿತು.ಇಂತಹ ಘಟನೆಗಳು ಸಾಗರದಲ್ಲಿ ನಡೆಯಬಾರದು‌.ಆರೋಪಿಗಳ ಮೇಲೆ ಪೋಲಿಸ್ ಇಲಾಖೆ ಸೂಕ್ತ ಕ್ರಮ ಜರುಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.  

ಭೂಪಾಳಂ ಮನೆಯಲ್ಲಿ ಅಗ್ನಿ ದುರಂತ/ ಘಟನೆಗೆ ಕಾರಣವೇನು? ಅಗ್ನಿಶಾಮಕ ದಳದ ವಿವರಣೆ ಏನು? ನಿಲರ್ಕ್ಷ್ಯವೆಂದರೆ ಸಂಸದ ರಾಘವೇಂದ್ರ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com