ಭೂಪಾಳಂ ಮನೆಯಲ್ಲಿ ಅಗ್ನಿ ದುರಂತ/ ಘಟನೆಗೆ ಕಾರಣವೇನು? ಅಗ್ನಿಶಾಮಕ ದಳದ ವಿವರಣೆ ಏನು? ನಿಲರ್ಕ್ಷ್ಯವೆಂದರೆ ಸಂಸದ ರಾಘವೇಂದ್ರ ?

What was the reason for the fire at Bhupalam house? What is the description of the fire brigade? Mp Raghavendra?

ಇವತ್ತು ಬೆಳಗ್ಗೆ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ (Kuvempu Road Shivamogga) ಭೂಪಾಳಂರವರ ನಿವಾಸದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಶರತ್​ರವರು ಸಾವನ್ನಪ್ಪಿದ್ದಾರೆ.  ಅವರ ಮನೆಯ ಆವರಣದಲ್ಲಿ ದುಃಖ ಮಡುಗಟ್ಟಿದೆ.

BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್ ಸರ್ಕಿಟ್-ಬೆಂಕಿ/ ಶರತ್ ಸಾವು, ಮಗು ಸ್ಥಿತಿ ಗಂಭೀರ

ಶರತ್​ರವರ ಪಾರ್ಥಿವ ಶರೀರವನ್ನು ಅವರ ಮನೆಗೆ ತರಲಾಗಿದ್ದು, ಅಂತಿಮ ವಿಧಿವಿಧಾನಗಳು ಆರಂಭಗೊಂಡಿದೆ. ಈ ನಡುವೆ ಶರತ್​ರವರ ಮನೆಗೆ ಗಣ್ಯರು ಹಾಗೂ ಕುಟುಂಬಸ್ಥರು ಮತ್ತು ಬಂಧು ಬಳಗ ಆಗಮಿಸುತ್ತಿದೆ. 

ಶಿವಮೊಗ್ಗದಲ್ಲಿ ಶಾರ್ಟ್​ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ

ಇನ್ನೂ ಘಟನಾ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರರವರು ಭೇಟಿಕೊಟ್ಟು, ಕುಟುಂಬಕ್ಕೆ ಸಾಂತ್ವನ ಹೇಳಿದ್ಧಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ? ಅಗ್ನಿಶಾಮಕ ದಳ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಿತ್ತೇನೋ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಘಟನೆಯೊಂದು ನಮಗೆ ಪಾಠವಾಗಿದೆ.

BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್​ ಸರ್ಕಿಟ್​-ಬೆಂಕಿ/ ಶರತ್​ ಸಾವು, ಮಗು ಸ್ಥಿತಿ ಗಂಭೀರ

ಸರ್ಕಾರದ ವ್ಯವಸ್ಥೆಯು ಇನ್ನೂ ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬೇಕ? ಅದಕ್ಕಾಗಿ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇನೆ! ಅಲ್ಲದೆ ಮನೆ ಕಟ್ಟುವಾಗ, ಅಗ್ನಿಶಾಮಕ ಸಾಮಾಗ್ರಿಗಳನ್ನು ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಈ ವಿದ್ಯುತ್ ವ್ಯವಸ್ಥೆ ಪಂಬ್ಲಿಂಗ್ ವ್ಯವಸ್ಥೆಗಳನ್ನು ಆಗಾಗ ಪರಿಶೀಲಿಸುತ್ತಿರಬೇಕು. 

ಈ ನಿಟ್ಟಿನಲ್ಲಿ ಅಗ್ನಿಶಾಮಕ ದಳ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಏನೆಲ್ಲಾ ಸರಿಪಡಿಸಬೇಕು ಎಂಬುದರ ಬಗ್ಗೆ ಗಮನಹರಿಸುತ್ತೇನೆ ಎಂದಿದ್ದಾರೆ. ಮನೆಯಲ್ಲಿಯೇ ಪೂಜೆ ಪುನಸ್ಕಾರ ಮಾಡುವಾಗ, ಹೊಗೆಯನ್ನು ಕುಡಿಯಲು ಆಗದೇ ಒದ್ದಾಡುತ್ತೇವೆ. ಇಲ್ಲಿ ಶರತ್ ಹೊಗೆಯಿಂದಲೇ ಸಾವನ್ನಪ್ಪಿದ್ದಾರೆ. ಅಂತಹ ಘಟನೆಯನ್ನು ಸಮಯದ ಮಿತಿಯೊಳಗೆ ಹೇಗೆ ನಿಬಾಯಿಸಬೇಕು ಎಂಬುದರ ಅಗತ್ಯವಿದೆ ಎಂದಿದ್ಧಾರೆ. 

ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು

ನಡೆದಿದ್ದೇನು? 

ಇನ್ನೂ ಸಂಸದರು ಹಾಗೂ ಬಂಧುಬಳಗ ಹೇಳುವ ಪ್ರಕಾರ, ಬೆಂಕಿಹೊತ್ತಿಕೊಳ್ಳುತ್ತಲೇ ಭೂಪಾಳಂ ನಿವಾಸದಲ್ಲಿ ಭರ್ತಿ ಹೊಗೆ ಆವರಿಸಿದೆ. ಈ ವೇಳೆ ಅವಘಡದ ಬಗ್ಗೆ ಗೊತ್ತಾಗಿ ಶರತ್​ ಹಾಗೂ ಅವರ ಪತ್ನಿ ಮಗು ರೂಮಿನಿಂದ ಹೊರಕ್ಕೆ ಬಂದಿದ್ದಾರೆ. ಮೇಲಾಗಿ ಫೈರ್​ ಇಂಜಿನ್​ಗೂ ಕೂಡ ಅವರೆ ಕರೆ ಮಾಡಿದ್ಧರಂತೆ. ಇನ್ನೊಂದು ಮಗು ಕಾಣುತ್ತಿಲ್ಲವೆಂದು ಮತ್ತೆ ರೂಮಿಗೆ ಹೋದಾಗ ಆವರಿಸಿದ್ದ ಹೊಗೆ, ಶರತ್​ರನ್ನು ಬಲಿ ಪಡೆದಿದೆ. 

ಇದನ್ನು ಓದಿ :  ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋಶಿವಣ್ಣನ ಟಗರು ಡ್ಯಾನ್ಸ್​ಗೆ ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

FACEBOOK

TWITTER

INSTAGRAM

TELIGRAM

ಅಗ್ನಿಶಾಮಕದಳದ ಅಭಿಪ್ರಾಯವೇನು? 

ಇನ್ನೂ ಘಟನಾಸ್ಥಳಕ್ಕೆ ಅಗ್ನಿಶಾಮಕ ದಳ ಕರೆಬಂದ ಎರಡು ನಿಮಿಷದಲ್ಲಿ ರೀಚ್ ಆಗಿದೆ. ಕುವೆಂಪು ರಸ್ತೆಯಿಂದ ಹತ್ತಿರದಲ್ಲಿಯೇ ಇದೆ ಅಗ್ನಿಶಾಮಕ ಕಚೇರಿ. ಕರೆ ಬರುತ್ತಲೇ ಒಟ್ಟು ಮೂರು ವಾಹನ ಕಚೇರಿಯಿಂದ ಟರ್ನ್​ ಔಟ್ ಆಗಿದೆ. ಬ್ಲೋವರ್​ ಸೇರಿದಂತೆ ಅವಶ್ಯಕ ಸಾಮಗ್ರಿಗಳ ಜೊತೆಗೆ ಸಿಬ್ಬಂದಿ ಬಂದು ಕಾರ್ಯಾಚರಣೆ ಆರಂಭಿಸಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಈ ನಡುವೆ ಸಿಬ್ಬಂದಿ ಕಾರ್ಯಾಚರಣೆಗೆ ಮನೆಯಲ್ಲಿದ್ದ ರಕ್ಷಣಾ ವ್ಯವಸ್ಥೆಯು ಅಡ್ಡಿಯಾಗಿದೆ. ಏಕೆಂದರೆ, ಮನೆಗೆ ಇದ್ದಿದ್ದು ಒಂದೇ ಎಂಟ್ರಿ. ಅದು ಮೇನ್​ ಡೋರ್ ಆಗಿತ್ತು. ಅಲ್ಲಿಂದ ಒಳಕ್ಕೆ ಹೋದ ಅಗ್ನಿಶಾಮಕ ಸಿಬ್ಬಂದಿ ಶರತ್​ರ ಪತ್ನಿ ಹಾಗೂ ಮಗುವನ್ನ ರಕ್ಷಿಸಿದ್ದಾರೆ. ಅಲ್ಲದೆ ಮೇಲಿಂದ ಶರತ್​ರವರನ್ನು ಸಪ ಲಿಫ್ಟ್ ಮಾಡಿ ಕರೆದುಕೊಂಡು ಬಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶರತ್ ಸಾವನ್ನಪ್ಪಿದ್ದಾರೆ. 

FACEBOOK

TWITTER

INSTAGRAM

TELIGRAM

ಇನ್ನೂ ಅಗ್ನಿಶಾಮಕ ಸಿಬ್ಬಂದಿ ಮನೆಯೊಳಗೆ ಆವರಿಸಿದ್ದ ಹೊಗೆಯನ್ನು ಕ್ಲೀಯರ್ ಮಾಡಲು ಪ್ರಯತ್ನಿಸಿದ್ಧಾರೆ. ಇದಕ್ಕಾಗಿ ಮನೆಯ ಟೆರಸ್​ಗೆ ಇರುವ ಡೋರ್​ನ್ನ ಓಪನ್​ ಮಾಡಲು ಶರತ್ ಕೂಡ ಮುಂದಾಗಿದ್ದರಂತೆ. ಆದರೆ ಅದರ ಕೀ ಸಿಗದೇ ಹೊಗೆ ಹೊರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇನ್ನೂ ಅಗ್ನಿಶಾಮಕ ಸಿಬ್ಬಂದಿ ಕಟರ್​ ಮೂಲಕ ಡೋರ್ ಓಪನ್​ ಮಾಡಿ ಹೊಗೆ ಕ್ಲೀಯರ್ ಆಗುವಂತೆ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಆಗುವ ಹೊತ್ತಿಗೆ ದುರಂತ ಸಂಭವಿಸಿತ್ತು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com