ಶಿವಮೊಗ್ಗದಲ್ಲಿ ಶಾರ್ಟ್​ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ

Fire breaks out at Bhoopalam's house on Kuvempu Road in Shivamogga due to short circuit Father dies while saving son's life

ಶಿವಮೊಗ್ಗದಲ್ಲಿ ಶಾರ್ಟ್​ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಬಂಗ್ಲೆಯಲ್ಲಿ ಇವತ್ತು ಬೆಳಗ್ಗಿನ ಜಾವವೇ ಬೆಂಕಿ ಕಾಣಿಸಿಕೊಂಡಿತ್ತು. ಭೂಪಾಳಂರವರ ಮನೆಯ ಮೇಲ್ಗಡೆಯಿರುವ ಕೊಠಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಇಡೀ ಕೊಠಡಿ ಬೆಂಕಿಯಲ್ಲಿ ಹೊತ್ತಿ ಉರಿದಿತ್ತು. 

ಜೀವ ತೆಗೆದ ಹೊಗೆ

BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್​ ಸರ್ಕಿಟ್​-ಬೆಂಕಿ/ ಶರತ್​ ಸಾವು, ಮಗು ಸ್ಥಿತಿ ಗಂಭೀರ

ಇನ್ನೂ ಈ ಘಟನೆಯಲ್ಲಿ ಶರತ್​ರವರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣವಾಗಿದ್ದು ಹೊಗೆ. ಹೌದು, ಮೇಲ್ಗಡೆಯಲ್ಲಿರುವ ಬೆಡ್​ ರೂಮ್​ನಲ್ಲಿ  ಶಾರ್ಟ್​ ಸರ್ಕ್ಯೂಟ್​ ಆಗಿ ಸ್ಟೆಬಲೈಸೆರ್​ಗೆ ಸ್ಫೋಟಗೊಂಡಿತ್ತು. ಇದರ ಬೆನ್ನಲ್ಲೆ, ಕೊಠಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಹೊಗೆಯು ಇಡೀ ಮನೆಯನ್ನ ಆವರಿಸಿದೆ. ಎಲ್ಲೆಡೆ ಹೊಗೆ ಆವರಿಸಿದ್ದರ ಹೊರತಾಗಿ ಶರತ್​ ತಮ್ಮ ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. 

ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು

ಮಗನ ಜೀವ ಉಳಿಸಿ ಪ್ರಾಣ ಬಿಟ್ಟ ತಂದೆ,

ಈ ವೇಳೆ ತಮ್ಮ ಮಗನನ್ನು ರಕ್ಷಿಸಿಲು ತೆರಳಿದ್ದ ಶರತ್​ಗೆ ದಟ್ಟವಾಗಿ ಆವರಿಸಿದ್ದ ಹೊಗೆ ಉಸಿರಾಟದ ಸಮಸ್ಯೆ ತಂದಿಟ್ಟಿದೆ. ಆದಾಗ್ಯು ತಮ್ಮ ಮಗನನ್ನು ರಕ್ಷಿಸಿಕೊಂಡು ಹೊರಬಂದ ಶರತ್​ ವಿಪರೀತ ಹೊಗೆ ಸೇವೆಯಿಂದಾಗಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಶಿವಮೊಗ್ಗದ ನಗರದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನಿಡಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. 

ಇದನ್ನು ಓದಿಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್​ಗೆ , ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

ಭೂಪಾಳಂ ಚಂದ್ರಶೇಖರ್​ರವರು ಶಿವಮೊಗ್ಗ ನಗರವಷ್ಟೆ ಅಲ್ಲದೆ ಜಿಲ್ಲೆಯಲ್ಲಿಯೇ ಪ್ರತಿಷ್ಟಿತ ಕುಟುಂಬವಾಗಿದೆ, ಇವರ ಕುಟುಂಬಸ್ಥರಾದ ಶರತ್​ ರವರ ನಿವಾಸ ಶಿವಮೊಗ್ಗ ಜಿಲ್ಲಾ ಪಂಚಾಯತ್ ಎದುರು ಇತ್ತು. ಈ ಮನೆಯನ್ನು ಸಾಕಷ್ಟು ರಕ್ಷಣಾತ್ಮಕವಾಗಿ ಕಟ್ಟಲಾಗಿದೆ. ಈ ನಡುವೆ ಶಾರ್ಟ್​ ಸರ್ಕ್ಯೂಟ್​ನಿಂದಾದ ಘಟನೆಯು ಸಾಕಷ್ಟು  ಅಚ್ಚರಿ ಮೂಡಿಸುತ್ತಿದೆ. 

ಭೂಪಾಳಂ ಮನೆಯಲ್ಲಿ ಅಗ್ನಿ ದುರಂತ/ ಘಟನೆಗೆ ಕಾರಣವೇನು? ಅಗ್ನಿಶಾಮಕ ದಳದ ವಿವರಣೆ ಏನು? ನಿಲರ್ಕ್ಷ್ಯವೆಂದರೆ ಸಂಸದ ರಾಘವೇಂದ್ರ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

FACEBOOK

TWITTER

INSTAGRAM

TELIGRAM