ಆರೋಪಿ ಬಂಧನಕ್ಕೆ 3 ತಂಡ/ ಸ್ನೇಹಿತನೇ ಹಲ್ಲೆ ಮಾಡಲು ಕಾರಣವಾದ ಹಗೆತನವೇನು? / ಹಿಂದೂ ಸಂಘಟನೆಗಳು ಹೇಳಿದ್ದೇನು?

What was the background to the incident of assault in Sagar Town? What was the reason for the incident? Here's the full details

ಆರೋಪಿ ಬಂಧನಕ್ಕೆ 3 ತಂಡ/  ಸ್ನೇಹಿತನೇ ಹಲ್ಲೆ ಮಾಡಲು ಕಾರಣವಾದ ಹಗೆತನವೇನು? / ಹಿಂದೂ ಸಂಘಟನೆಗಳು ಹೇಳಿದ್ದೇನು?

ಶಿವಮೊಗ್ಗ ಜಿಲ್ಲೆ ಸಾಗರ ಟೌನ್​ನಲ್ಲಿ ಇವತ್ತು ಬೆಳಗ್ಗೆ ನಡೆದ ಘಟನೆಯೊಂದು ಸಾಕಷ್ಟು ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ಟೌನ್​ ಸ್ಟೇಷನ್​ ಎದುರು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಯನ್ನು ತಕ್ಷಣವೇ ಹಿಡಿದು ಮಟ್ಟಹಾಕಬೇಕು. ಇಲ್ಲವೇ ಸಾಗರ ಪೇಟೆಯಲ್ಲಿ ಉಗ್ರ ಪ್ರತಿಭಟನೆ ನಡೆಸಿ ಬಂದ್ ನಡೆಸುವುದಾಗಿ ಎಚ್ಚರಿಸಿವೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ / ಸಂಘಟನೆಗಳ ಪ್ರತಿಭಟನೆ

ಇನ್ನೊಂದೆಡೆ ಪೊಲೀಸ್ ಇಲಾಖೆ ಘಟನೆ ಸಂಬಂಧ ಮೂರು ತಂಡಗಳನ್ನು ರಚಿಸಿದ್ದೇವೆ. ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಎನ್ನುತ್ತಿದೆ. ಅಲ್ಲದೆ ಇದೇ ಕಾರಣಕ್ಕೆ ಘಟನೆ ನಡೆದಿದೆ ಎಂಬುದರ ಬಗ್ಗೆ ಸದ್ಯದಲ್ಲಿಯೇ ವಿವರವನ್ನು ನೀಡುತ್ತೇವೆ ಎಂದಿದೆ. ಈ ಸಂಬಂಧ ಸ್ವತಃ ಎಸ್​ಪಿ ಮಿಥುನ್​ ಕುಮಾರ್ ಘಟನೆಯ ವಿವರವನ್ನು ಮಾಧ್ಯಮಗಳಿಗೆ ಸಂದೇಶದ ಮೂಲಕ ರವಾನಿಸಿದ್ದಾರೆ. 

ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು

ಈ ಮಧ್ಯೆ ಸಾಗರದಲ್ಲಿ ನಡೆದ ಘಟನೆಯಲ್ಲಿ ದಾಳಿಗೊಳಗಾದ ಹಾಗೂ ದಾಳಿ ಮಾಡಿದ ಇಬ್ಬರು ಸಹ ಸ್ನೇಹಿತರು ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ಸಹ ಉಪ್ಪಾರ ಕೇರಿ ನಿವಾಸಿಗಳಾಗಿದ್ದಾರೆ. ಇವರಿಬ್ಬರ ನಡುವೆ ಈ ಮೊದಲು ಸ್ನೇಹವಿತ್ತು ಎನ್ನಲಾಗುತ್ತಿದೆ. ಆದರೆ  ಹಿಜಾಬ್ ಗಲಾಟೆಯಿಂದ ಇಬ್ಬರ ನಡುವ ವೈಷಮ್ಯ ಉಂಟಾಗಿ ಸ್ನೇಹ ಮುರಿದು ಬಿದ್ದಿತ್ತು, ಇದೇ ಹಗೆತನ ಹಿನ್ನಲೆಯಲ್ಲಿ ಇವತ್ತು ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿವೆ. ಈ ನಿಟ್ಟಿನಲ್ಲಿ ಸಮೀರ್​ ಸುನೀಲ್​ಗೆ ಧಮ್ಕಿ ಕೂಡ ಹಾಕಿದ್ದ ಎಂದು, ಸಂಘಟನೆಗಳು ಆಕ್ರೋಶ ಹೊರಹಾಕಿವೆ. 

ಭೂಪಾಳಂ ಮನೆಯಲ್ಲಿ ಅಗ್ನಿ ದುರಂತ/ ಘಟನೆಗೆ ಕಾರಣವೇನು? ಅಗ್ನಿಶಾಮಕ ದಳದ ವಿವರಣೆ ಏನು? ನಿಲರ್ಕ್ಷ್ಯವೆಂದರೆ ಸಂಸದ ರಾಘವೇಂದ್ರ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com