SAGARA

ಪ್ರೇಮ ವೈಫಲ್ಯ , ಸಾಯಲು ಮನೆ ಬಿಟ್ಟು ಹೊರಟ ಯುವಕ! 112 ಎಂಟ್ರಿ ಮುಂದೆನಾಯ್ತು ಓದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Police Rescues Youth / ಮಲೆನಾಡು ಟುಡೆ ಸುದ್ದಿ / ಆನಂದಪುರ / ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ 112 ಪೊಲೀಸರು ಸಾಯಬೇಕು ಅಂತಾ ನಿರ್ಧಾರ ಮಾಡಿ ಹೊರಟಿದ್ದವನನ್ನು ಸಮಾಧಾನ ಪಡಿಸಿ ಪುನಃ ಆತನನ್ನು ಮನೆಗೆ ತಲುಪಿಸಿದೆ.

ತುರ್ತು ಸ್ಪಂದನಾ ವಾಹನ 112 ನ ಸಿಬ್ಬಂದಿ ಶಿವಮೊಗ್ಗದಲ್ಲಿ ಆಗಾಗ ದೊಡ್ಡ ದೊಡ್ಡ ಸಾಹಸವನ್ನೆ ಮಾಡುತ್ತಾರೆ. ಇದೀಗ ಆ ಸಾಲಿಗೆ ದಿನಾಂಕ 28-06-2026 ರಂದು ಆನಂದಪುರದಲ್ಲಿ ನಡದ ಘಟನೆ ಸೇರಿದೆ. ನಡೆದ ಘಟನೆಯನ್ನು ಗಮನಿಸುವುದಾದರೆ ವಿವರ ಹೀಗಿದೆ. ಘಟನೆ ನಡೆದ ದಿನ, ಇಲ್ಲಿನ ನಿವಾಸಿಯೊಬ್ಬರು ಆತಂಕದಿಂದ 112 ಗೆ ಕರೆ ಮಾಡಿ ತಮ್ಮ ಮನೆಯಲ್ಲಿ ಎದುರಾಗಿದ್ದ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದರು.

ಪ್ರೀತಿಸುತ್ತಿದ್ದ ಹುಡುಗಿಯ ಮನೆಯ ಕಡೆಯವರು, ಆಕೆಯನ್ನು ತಮ್ಮ ಮಗನಿಗೆ ಮದುವೆ ಮಾಡಲು ಒಪ್ಪಿಗೆ ನೀಡಿರಲಿಲ್ಲ. ಈ ಕಾರಣಕ್ಕೆ ಬೇಸತ್ತ ತಮ್ಮ ಮಗ ಜೀವನವನ್ನು ಕೊನೆಗಾಣಿಸಿಕೊಳ್ತಿನಿ, ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾ ಹೇಳಿ ಮನೆ ಬಿಟ್ಟುಹೋಗಿದ್ದಾನೆ. ಆತನನ್ನು ರಕ್ಷಿಸಿ ಎಂದು ಕರೆಮಾಡಿದವರು 112 ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾರೆ .

ವಿಷಯ ತಿಳಿದ 112 ಬೀಟ್ ಸಿಬ್ಬಂದಿ ಯುವಕನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆತ ಓಡಾಡುವ ಜಾಗದ ಬಗ್ಗೆ ತಿಳಿದುಕೊಂಡು, ಊರಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಈವೇಳೆ ಸಂತ್ರಸ್ತ ಯುವಕ ಸ್ಥಳವೊಂದರಲ್ಲಿ ಪತ್ತೆಯಾಗಿದ್ದು, ಆತನನ್ನ ತಡೆದ ಸಿಬ್ಬಂದಿ ಸ್ಥಳದಲ್ಲಿಯೇ ಕೌನ್ಸಿಲಿಂಗ್ ಮಾಡಿದ್ದಾರೆ. ಪ್ರೇಮ ವೈಫಲ್ಯವೇ ಜೀವನದ ಕೊನೆಯಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಅಂತಿಮವಾಗಿ ಆತನ ಮನವೊಲಿಸಿ, ಆತನನ್ನು ಪೋಷಕರ ಸುಪರ್ದಿಗೆ ವಹಿಸಿದ್ದಾರೆ.

ಶಿವಮೊಗ್ಗ ERV ಸಿಬ್ಬಂದಿಯ ಈ ಕೆಲಸ ನಿಜಕ್ಕೂ ಮೆಚ್ಚುವಂತದ್ದು, ಪ್ರತಿದಿನ ನೂರಕ್ಕೂ ಹೆಚ್ಚು ಕುಡಿತದ ಪ್ರಕರಣಗಳನ್ನ ಬಗೆಹರಿಸುವುದರ ಜೊತೆಜೊತೆಗೆ ಪೊಲೀಸರು ಹೊತ್ತಲ್ಲ ಹೊತ್ತಿನಲ್ಲಿಯು ಬಂದು ತಮಗೆ ಬಂದ ದೂರನ್ನ ಇತ್ಯರ್ಥ ಪಡಿಸದೇ ವಾಪಸ್ ಹೋಗಲಾರರು. ಇಂತಹ ಕಠಿಣ ಡ್ಯೂಟಿ ಹೊಂದಿರುವ ಸಿಬ್ಬಂದಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಗೌರವ ಸಿಗುತ್ತಿಲ್ಲ ಎಂಬುದಷ್ಟೆ ಬೇಸರ!

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ