ಸುದ್ದಿಯ ಸ್ಥಳ: Shivamogga district, Karnataka
Doddapete Police in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದೊಡ್ಡಪೇಟೆ ಭಾಗದಲ್ಲಿ ಗಾಂಜಾ ಅಷ್ಟೆ ಅಲ್ಲಾ ಮಾದಕ ಟಾಬ್ಲೇಟ್ಗಳು ಸಿಗುತ್ತಿವೆ ಅನ್ನೋ ಆರೋಪ ಇತ್ತು. ಆದರೆ ಖಚಿತವಾಗಿರಲಿಲ್ಲ. ಇದೀಗ ಪೊಲಿಸರ ಆಪರೇಷನ್ವೊಂದರಲ್ಲಿ ದೊಡ್ಡಪೇಟೆಯಲ್ಲಿ ಮಾದಕ ಲೋಕ ಎಲ್ಲೆ ಮೀರಿದೆ ಅನ್ನೋದು ಗೊತ್ತಾಗಿದೆ. ನಿನ್ನೆ ದಿನ ಅಂದರೆ 29 ಜೂನ್ರಂದು ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಣ್ಣಾನಗರದಲ್ಲಿ ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಸಿಕ್ಕಿದೆ.
ದಿನಾಂಕ 28-06-2026 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಾಗೂ ಮಾಲನ್ನು ಜಪ್ತು ಮಾಡಿದ್ದಾರೆ. ತುಂಗಾ ಚಾನಲ್ ಏರಿಯಾದ ಬಳಿ 100 ಅಡಿ ರಸ್ತೆಯಿಂದ ಅಣ್ಣಾನಗರದ ಕಡೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಆರೋಪಿಯೊಬ್ಬ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ವಿಷಯ ಪೊಲೀಸರಿಗೆ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತಮ್ಮ ಸಿಬ್ಬಂದಿ ಜೊತೆ ರೇಡ್ ಮಾಡಿದ್ದಾರೆ. ದಾಳಿ ವೇಳೆ ಆರೋಪಿ ಶಾಹೀದ್ ಖಾನ್ ನನ್ನ ಅರೆಸ್ಟ್ ಮಾಡಿದ್ದು, ಆತನ ಬಳಿಯಿಂದ 1,52,000 ರೂಪಾಯಿಗಳ ಮೌಲ್ಯದ 15.21 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಯಲ್ಲಿ 40,000 ರೂಪಾಯಿ ಮೌಲ್ಯದ ಮೋಟಾರ್ ಬೈಕನ್ನು ವಶಕ್ಕೆ ಪಡೆದು ಅಮಾನತುಪಡಿಸಿಕೊಂಡಿದ್ದಾರೆ. ಈ ವಿಚಾರವಾಗಿ ಎನ್ಡಿಪಿಎಸ್ ಕಾಯ್ದೆ (NDPS ACT), 1985 ರ ಅಡಿಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ಪೊಲೀಸ್ ಇಲಾಖೆ ವಾಟ್ಸಾಪ್ ಮಾಧ್ಯಮ ಗ್ರೂಪ್ ಮೂಲಕ ಪ್ರಕರಣದ ವಿವರವನ್ನು ಹಂಚಿಕೊಂಡಿದೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
