Todays Arecanut Prices / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗುಟ್ಕಾ ಬ್ಯಾನ್ ವಾಪಸ್ ಸೂಚನೆ ನಡುವೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಅಡಿಕೆ ಧಾರಣೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ. ಹಸ ಅಡಿಕೆಯ ಗರಿಷ್ಠ ದರವು 97 ಸಾವಿರ ರೂಪಾಯಿಗಳ ಗಡಿಯಲ್ಲಿದೆ.
ಹಸ ಅಡಿಕೆ ಕನಿಷ್ಠ ದರವು 63,199 ರೂಪಾಯಿಗಳಾಗಿದ್ದರೆ, ಗರಿಷ್ಠ ದರ 97,799 ರೂಪಾಯಿಗಳಿಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಸಹ ಮಾರುಕಟ್ಟೆಯಲ್ಲಿ ಕನಿಷ್ಠ 50,099 ರೂಪಾಯಿಗಳಿಂದ ಗರಿಷ್ಠ 62,659 ರೂಪಾಯಿಗಳವರೆಗೆ ವಹಿವಾಟು ನಡೆಸಿದೆ.
ರಾಶಿ ಇಡಿ ಅಡಿಕೆಗೆ ಕನಿಷ್ಠ 47,419 ರೂಪಾಯಿ, ಗರಿಷ್ಠ ದರ 54,299 ರೂಪಾಯಿಗೆ ತಲುಪಿದೆ. ಈ ಅಡಿಕೆ ಮಾದರಿ ದರ 50,089 ರೂಪಾಯಿಗಳಷ್ಟಿತ್ತು. ಗೊರಬಲು ಅಡಿಕೆ ಧಾರಣೆ ಗಮನಿಸಿದಾಗ ಮಾರುಕಟ್ಟೆಯಲ್ಲಿ ಕನಿಷ್ಠ 19,005 ರೂಪಾಯಿ , ಗರಿಷ್ಠ 41,390 ರೂಪಾಯಿಗಳವರೆಗೆ ಮಾರಾಟವಾಗಿದೆ.
