ಜೋಗ ಜಲಪಾತ ಸರ್ವೆಕಾರ್ಯ ಮುಕ್ತಾಯ! ಶೀಘ್ರದಲ್ಲಿ 2 ಕಾಮಗಾರಿ ಆರಂಭ!

ಹಂಚಿಕೊಳ್ಳಿ
WhatsApp Facebook X Telegram
MLA Gopalakrishna Beluru statement on Jog Falls Development

Jog Falls Ropeway and Cable Car / ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ತಾಲೂಕನ್ನು ರಾಜ್ಯದ ಅತ್ಯುತ್ತಮ ಹಾಗೂ ಮಾದರಿ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರವು ವಿಶೇಷ ಗಮನ ಹರಿಸಿದೆ. ಇದರ ಭಾಗವಾಗಿ, ಶಾಸಕರ ನಿರ್ದೇಶನದ ಮೇರೆಗೆ ವಿಶ್ವವಿಖ್ಯಾತ ಜೋಗ ಜಲಪಾತವನ್ನು (Jog Falls Ropeway and Cable Car)ಮತ್ತಷ್ಟು ಆಕರ್ಷಣೀಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಮಾಹಿತಿ ನೀಡಿದ್ದಾರೆ.

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಜೋಗಕ್ಕೆ ತಹಶೀಲ್ದಾರ್, ಡಾ. ಪ್ರತಿಭಾ ಆರ್​ ನಿನ್ನೆ ಅಂದರೆ ಜೂನ್​ 19 ರ ಶುಕ್ರವಾರದಂದು ಭೇಟಿ ನೀಡಿದ್ದರು. ಈ ವೇಳೆ ಉದ್ದೇಶಿತ ರೋಪ್ ವೇ ಹಾಗೂ ಕೇಬಲ್ ಕಾರು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ತಹಶೀಲ್ದಾರ್, ರೋಪ್ ವೇ ಮತ್ತು ಕೇಬಲ್ ಕಾರು ಯೋಜನೆಗೆ ಅಗತ್ಯವಿದ್ದ ಪ್ರಾಥಮಿಕ ಸರ್ವೆ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಅಂತಾ ತಿಳಿಸಿದರು.

ಕರ್ನಾಟಕ ರಾಜ್ಯದ 7 ಪ್ರಮುಖ ಅದ್ಭುತಗಳ ಪಟ್ಟಿಯಲ್ಲಿ ವಿಶ್ವದ ಗಮನ ಸೆಳೆದಿರುವ ಜೋಗ ಜಲಪಾತ ಅಗ್ರಸ್ಥಾನದಲ್ಲಿದೆ. ಈ ಪ್ರವಾಸಿತಾಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಹತ್ತಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಭಾಗವಾಗಿಯೇ ರೋಪ್ ವೇ ಹಾಗೂ ಕೇಬಲ್ ಕಾರು ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ ಸ್ಥಳೀಯ ಶಾಸಕರು ಈ ಯೋಜನೆ ಕುರಿತಂತೆ ನೀಡಿದ ಸೂಚನೆಗಳ ಅನ್ವಯ ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.

ಡಾ. ಪ್ರತಿಭಾ ಆರ್. ತಹಶೀಲ್ದಾರ್

ಸದ್ಯ ಜಲಪಾತದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ಅಡಚಣೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ. ಜೋಗ ಜಲಪಾತದ ವ್ಯಾಪ್ತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣಗೊಂಡ ಬಳಿಕ, ಮುಂದಿನ ದಿನಗಳಲ್ಲಿ ದೇಶ-ವಿದೇಶಗಳ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿದೆ ಎಂದು ತಹಶೀಲ್ದಾರ್ ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ನಡೆದ ಈ ಸರ್ವೆ ಕಾರ್ಯ ಹಾಗೂ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಹನುಮಂತಪ್ಪ, ಬೀರಪ್ಪ, ಮತ್ತು ಸಂದೀಪ್ ಅವರು ಉಪಸ್ಥಿತರಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor