ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವವನ್ನ ಪ್ರತಿ ಸಲ ಜೋರಾಗಿ ಆಚರಿಸಲಾಗುತ್ತದೆ! ಅದಕ್ಕಾಗಿ ಅನುದಾನ ಕೊಡಿ ಅಂತಾ , ವಿಶೇಷ ಅನುದಾನ ಕೋರಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಸ್ತೂರಿರಂಗನ್ ವರದಿ ವಿರೋಧಿಸಿ ವಿಶೇಷ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ, ಶಾಸಕರು ಸಿಎಂರನ್ನ ಭೇಟಿಯಾಗಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ವಿಧಾನಸಭೆ ಅಧಿವೇಶನದ ನಡುವೆ ಸಮಯ ನೋಡಿ, ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕರು, ಶಿವಮೊಗ್ಗ ದಸರಾ ಮಹೋತ್ಸವದ ಆಯೋಜನೆಗೆ ಅಗತ್ಯವಿರುವ ವಿಶೇಷ ಅನುದಾನವನ್ನ ಒದಗಿಸುವಂತೆ ಕೋರಿದರು. ಅಲ್ಲದೆ ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಅಂತಾ ಎಸ್.ಎನ್. ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
