ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ವರ್ಗಾವಣೆ: ನೂತನ ಸಿಇಒ ಆಗಿ ರಿಶಿ ಆನಂದ್‌ ಅಧಿಕಾರ ಸ್ವೀಕಾರ 

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ವರ್ಗಾವಣೆ ನೂತನ ಸಿಇಒ ಆಗಿ ರಿಶಿ ಆನಂದ್_ ಅಧಿಕಾರ ಸ್ವೀಕಾರ
ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ವರ್ಗಾವಣೆ ನೂತನ ಸಿಇಒ ಆಗಿ ರಿಶಿ ಆನಂದ್_ ಅಧಿಕಾರ ಸ್ವೀಕಾರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಅವರನ್ನು ರಾಜ್ಯ ಸರ್ಕಾರ  ವರ್ಗಾವಣೆಗೊಳಿಸಿದ್ದು, ಅವರ ಜಾಗಕ್ಕೆ  ರಿಶಿ ಆನಂದ್ ಅವರನ್ನು ನೂತನ ಸಿಇಒ ಆಗಿ ನಿಯೋಜಿಸಲಾಗಿದೆ. 

2020ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎನ್. ಹೇಮಂತ್ ಅವರಿಗೆ ಹುಬ್ಬಳ್ಳಿಯ ಹೆಸ್ಕಾಂಗೆ ವರ್ಗಾಯಿಸಿದ್ದು, ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇವರು 2024ರ ಜುಲೈನಿಂದ ಶಿವಮೊಗ್ಗ ಜಿ.ಪಂ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದರು. 

ಜಿಲ್ಲೆಯ ನೂತನ ಸಿಇಒ ಆಗಿ ಆಯ್ಕೆಯಾಗಿರುವ ರಿಶಿ ಆನಂದ್ ಅವರು ಜಾರ್ಖಂಡ್ ಮೂಲದವರಾಗಿದ್ದು, 2020ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ವಿಜಯಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಶೀಘ್ರದಲ್ಲೇ ಶಿವಮೊಗ್ಗ ಜಿ.ಪಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor