SAGARA

ಕಾಳೆಮೆಣಸಿನ ರಾಣಿ ಸಿನಿಮಾ! ಸಾಗರಕ್ಕೆ ಬಂದ ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Rajendra Singh Babu / ಮಲೆನಾಡು ಟುಡೆ ಸುದ್ದಿ / ಸಾಗರ / ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು 54 ವರ್ಷಗಳ ಸುದೀರ್ಘ ಅಡಳಿತ ನಡೆಸಿದ ಕಾಳುಮೆಣಸಿನ ರಾಣಿ ಎಂಬ ಪ್ರಖ್ಯಾತಿ ಹೊಂದಿರುವ ಮಹಾಮಂಡಲಾದೀಶ್ವರಿ ಚನ್ನಬೈರಾದೇವಿ ವೈಭವದ ಚರಿತ್ರೆಯ ಸಿನಿಮಾ ನಿರ್ಮಿಸಲು ತಯಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಿನಿಮಾದ ನಿರ್ದೇಶಕ ಕನ್ನಡದ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಾಗರ ತಾಲ್ಲೂಕಿನ ಆವಿನಹಳ್ಳಿಯಲ್ಲಿನ ಬಡಗೋಡಿನಲ್ಲಿನ ರಾಣಿ ಚನ್ನಬೈರಾದೇವಿಯ ಸಮಾದಿ ಮತ್ತು ಸುತ್ತಲಿನ ವಿವಿಧ ಶಿಲಾಶಾಸನಗಳ ವೀಕ್ಷಿಸಿ ಚಲನಚಿತ್ರ ನಿರ್ಮಾಣಕ್ಕೆ ಬೇಕಿರುವ ಮಾಹಿತಿ ಪಡೆದುಕೊಂಡರು.

ಚನ್ನಬೈರಾದೇವಿ ಸಿನಿಮಾದ ಬಗ್ಗೆ ಮಾಹಿತಿ ಕಲೆಹಾಕಿದ ನಿರ್ದೇಶಕ

ಚನ್ನಬೈರಾದೇವಿಯ ಕುರಿತಾಗಿ ಸ್ಥಳಿಯ ನಿವಾಸಿಗಳೊಂದಿಗೆ ಸಮಾಲೋಚಿಸಿದ ಅವರು, ಕಲ್ಮಕ್ಕಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆವಿನಹಳ್ಳಿಯ ಕಲ್ಮಕ್ಕಿಯಲ್ಲಿನ ಅರಣ್ಯದಲ್ಲಿರುವ ಪುರಾತನ ಕೋಟೆ ಕೊತ್ತಲಗಳ ಕುರುಹುಗಳ ಪರಿಶಿಲಿಸಿ ಇತಿಹಾಸದ ಅವಲೋಕನ ನಡೆಸಿದರು. ವೀರಗಲ್ಲುಗಳು ಮತ್ತು ಲಿಪಿಗಳಿರುವ ಶಾಸನಗಳ ಅಧ್ಯಯನ ನಡೆಸುವ ಮೂಲಕ ಚನ್ನಬೈರಾದೇವಿಯ ಚರಿತ್ರೆಯ ಚಲನ ಚಿತ್ರ ನಿರ್ಮಿಸುವ ಬಗ್ಗೆ ಮಾತನಾಡಿದರು.

ಈ ವೇಳೆ ಮಹಾಮಂಡಲಾದೀಶ್ವರಿ ಚನ್ನಬೈರಾದೇವಿ ಆಡಳಿತಾವಧಿಯಲ್ಲಿ ಮಲೆನಾಡು ಮತ್ತು ಕರಾವಳಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ವ್ಯಾಪ್ತಿ ಕಾಸರಗೋಡಿನಿಂದ ಗೋವಾರಾಜ್ಯದವರೆಗೂ ಹಾಗೂ ಶಿವಮೊಗ್ಗ-ಚಿಕ್ಕಮಗಳೂರುನ್ನು ಒಳಗೊಂಡು ತನ್ನ ಆಡಳಿತ ನಡೆಸುತ್ತಿದ್ದ ದೇವಿ ಅಪಾರ ವ್ಯಾವಹಾರಿಕ ಜ್ಞಾನದಿಂದ ಕಾಳುಮೆಣಸನ್ನು ವಿದೇಶಕ್ಕೆ ರಪ್ತು ಮಾಡುವ ಮೂಲಕ ರಾಜ್ಯದ ಸಂಪತ್ತನ್ನು ಹೆಚ್ಚಿಸಿಕೊಂಡಿರುವ ಕೀರ್ತಿ ದೇಶ-ವಿದೇಶದಾದ್ಯಂತ ಮನೆಮಾತಾಗಿತ್ತು ಎಂಬ ಇತಿಹಾಸವನ್ನು ಮೆಲಕು ಹಾಕಿದರು.ಅವಿವಾಹಿತೆಯಾಗಿದ್ದ ರಾಣಿ ಮಹಾಮಂಡಲಾದೀಶ್ವರಿ ಚನ್ನಬೈರಾದೇವಿ ಗೇರುಸೊಪ್ಪ ಆಡಳಿತ ಕೇಂದ್ರವಾಗಿಟ್ಟುಕೊಂಡು ಭದ್ರತೆಯ ಉದ್ದೇಶದಿಂದ ಗೇರುಸೊಪ್ಪೆಗೆ ತಾಗಿಕೊಂಡಿರುವ ಸಾಗರ ತಾಲ್ಲೂಕಿನ ಕಾನೂರು ಬೆಟ್ಟದ ತುದಿಯಲ್ಲಿ ಕೋಟೆ ನಿರ್ಮಿಸಿಕೊಂಡ್ಡಿದ್ದಳು ಎಂಬ ಕುರುಹುಗಳು ಈಗಲು ಅಳಿದುಳಿದುಕೊಂಡಿದೆ ಎಂಬ ವಿಷಯವನ್ನು ನಿರ್ದೇಶಕರಿಗೆ ಇತಿಹಾಸಕಾರರು ತಿಳಿಸಿದರು.

ಜೈನ್ ಸಮುದಾಯದ ಶ್ರೀಗಳ ಆಶೀರ್ವಾದ

ಇನ್ನೂ ಜೈನ ಸಮುದಾಯದ ಪ್ರಸಿದ್ದ ರಾಣಿಯಾಗಿರುವ ಮಹಾಮಂಡಲಾದೀಶ್ವರಿ ಚನ್ನಬೈರಾದೇವಿಯ ಚರಿತ್ರೆ ಕುರಿತು ಚಲನ ಚಿತ್ರ ನಿರ್ಮಾಣಕ್ಕೆ ಜೈನ ಸಮುದಾಯದ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಹಾಗೂ ಸೋಂದಾ ಶ್ರೀಮಠದ ಜೈನ ಸ್ವಾಮಿಜಿಗಳನ್ನು ಮತ್ತು ಮೂಡಬಿದ್ರೆ ಜೈನ ಮಠದ ಶ್ರಿಗಳನ್ನು ಭೇಟಿ ಮಾಡಿ ಆಶಿರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಂಡಿರುವುದಾಗಿ ಚಲೊನ ಚಿತ್ರ ನಿರ್ಮಾಪಕರಾದ ರಾಜೇಂದ್ರಸಿಂಗ್ ಬಾಬು ಅವರು ಪ್ರತಿಕ್ರಿಯಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಸಲಹೆ ಸಹಕಾರವನ್ನು ಈ ಚಿತ್ರದ ವಿಚಾರವಾಗಿ ಪಡೆಯುತ್ತೇನೆ ಸ್ಥಳಿಯವಾಗಿ ಮಲೆನಾಡು ಮತ್ತು ಕರಾವಳಿಯ ಇತಿಹಾಸಗಳ ಶಿಲಾಶಾಸನಗಳ ಅಧ್ಯಯನದ ಮೂಲಕ ಐತಿಹಾಸಿಕ ಹಿನ್ನೆಲೆಯ ಆಡಳಿತ ಮತ್ತು ಪರಂಪರೆಯ ರಾಣಿ ಚನ್ನಬೈರಾದೇವಿಯ ಪುರಾಣ ಪ್ರಸಿದ್ದ ಇತಿಹಾಸವನ್ನು ಮರುಸೃಷ್ಠಿಸುವ ರೀತಿಯಲ್ಲಿ ಚಲನಚಿತ್ರ ಮೂಡಿಬರಲಿದೆ

ಡಾ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ,
Film on Pepper Queen Chennabhairadevi by Rajendra Singh Babu

ಈ ಸಂದರ್ಭದಲ್ಲಿ ಸಾಗರ ಜೈನ ಸಮುದಾಯದ ಅಧ್ಯಕ್ಷರಾದ ಎಸ್.ವಿ.ಹಿತಕರ ಜೈನ್,ಜೈನ ಸಮುದಾಯದ ಸಹಕಾರ್ಯದರ್ಶಿ ಜಿನದತ್ತ ಜೈನ್ ಕೊರಲಕೈ,ಸಮುದಾಯದ ನಿರ್ದೇಶಕರಾದ ನೀಲೇಂದ್ರ ಜೈನ್ ಬಡಗೋಡು,ಪ್ರಮುಖರುಗಳಾದ ಲೋಕರಾಜ್ ಆವಿನಹಳ್ಳಿ,ನೀಲಕುಮಾರ ದೀವರಹಾರ,ಲಿಂಗಾಯಿತ ಸಮುದಾಯದ ರಾಜೇಂದ್ರ ಆವಿನಹಳ್ಳಿ ಮೊದಲಾದವರು ಇದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ