ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 20 Check Post ಗಳನ್ನು ಹಾಕಿ ವಾಹನಗಳ ತಪಾಸಣೆಯನ್ನು ಮಾಡಲಾಯಿತು

ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ
ಶಿವಮೊಗ್ಗ ಪೊಲೀಸರು ನಡೆಸಿದ ಡ್ರಿಂಕ್​ ಆ್ಯಂಡ್ ಡ್ರೈವ್ ಕಾರ್ಯಾಚರಣೆ

ನಿನ್ನೆ ರಾತ್ರಿ ಶಿವಮೊಗ್ಗ ಪೊಲೀಸರು ಇದ್ದಕ್ಕಿದ್ದಂತೆ ರೋಡಿಗಿಳಿದಿದ್ದರು, ಆಯಕಟ್ಟಿನ ಜಾಗದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಿಕೊಂಡು ಕೈ ಅಡ್ಡಹಾಕುತ್ತಿದ್ರು. ಇದಕ್ಕೆ ಕಾರಣವೂ ಇತ್ತು. ರಾತ್ರಿ ಕುಡಿದು, ವಾಹನ ಓಡಿಸ್ತಿದ್ದವರ ವಿರುದ್ಧ ಪೊಲೀಸ್​ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. 

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಈ ಸಂಬಂಧ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 20 ಚೆಕ್​ಪೋಸ್ಟ್​ಗಳನ್ನು( Check Post) ಹಾಕಿ, ಪೊಲೀಸ್ ಇಲಾಖೆಯ ವಿವಿಧ ಮಟ್ಟದ ಅಧಿಕಾರಿಗಳು, ಡ್ರಂಕ್​ ಆ್ಯಂಡ್ ಡ್ರೈವ್​ ತಪಾಸಣೆ ನಡೆಸಿದರು. ಈ ವೇಳೆ ಹಲವರು ಕುಡಿದು ಗಾಡಿ ಓಡಿಸ್ತಿರೋದು ಪತ್ತೆಯಾಗಿದೆ. ಅವರ ವಿರುದ್ಧ ಒಟ್ಟು 46 Drunk and Drive ಕೇಸ್​ಗಳನ್ನು ದರ್ಜ್​ ಮಾಡಿದ್ದಾರೆ. 

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಎಲ್ಲೆಲ್ಲಿ ಎಷ್ಟೆಷ್ಟು ಕೇಸ್​? 

  1. ಶಿವಮೊಗ್ಗ ವಿಭಾಗ -16, 
  2. ಭದ್ರಾವತಿ ಉಪ ವಿಭಾಗ - 03,
  3. ಸಾಗರ ಉಪ ವಿಭಾಗ - 06,
  4. ಶಿಕಾರಿಪುರ ವಿಭಾಗ - 05 
  5. ತೀರ್ಥಹಳ್ಳಿ ಉಪ ವಿಭಾಗ - 16

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link