ಜೈಲಿನಲ್ಲಿ ಭಾನುವಾರದ ಬಾಡೂಟಕ್ಕೆ ಪ್ರಶ್ನೆ ಏಕೆ? ಮುಖ್ಯ ಅಧೀಕ್ಷಕಿ ಡಾ.ಆರ್​. ಅನಿತಾ ಹೇಳಿದ್ದೇನು?

Shimoga Central Jail Chief Superintendent Dr. Anita Malenadu gave a response to TODAY team.ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಮಲೆನಾಡು ಟುಡೆ ತಂಡಕ್ಕೆ ಪ್ರತಿಕ್ರಿಯೆ ನೀಡಿದ್ಧಾರೆ

ಜೈಲಿನಲ್ಲಿ ಭಾನುವಾರದ ಬಾಡೂಟಕ್ಕೆ ಪ್ರಶ್ನೆ ಏಕೆ?  ಮುಖ್ಯ ಅಧೀಕ್ಷಕಿ ಡಾ.ಆರ್​. ಅನಿತಾ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 1, 2023 SHIVAMOGGA NEWS’ 

ಶಿವಮೊಗ್ಗ ಜೈಲಿನಲ್ಲಿ  ಇವತ್ತು ನಾನ್​ವೆಜ್​ ಊಟ ನೀಡುತ್ತಿರುವ ವಿಚಾರ ಪ್ರಶ್ನೆಗೆ ಗುರಿಯಾಗಿತ್ತು. ಇದರ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ನೀಡಬೇಕಿದ್ದ ನಾನ್ ವೆಜ್ ಊಟ ಭಾನುವಾರ ನೀಡಲಾಗಿದೆ . 

ಸಾಮಾನ್ಯ ಪ್ರಕ್ರಿಯೆಯಲ್ಲಿ ಜೈಲುವಾಸಿಗಳಿಗೆ ವಾರಕ್ಕೆ ಒಮ್ಮೆ ನಾನ್ ವೆಜ್ ಊಟವನ್ನು ನೀಡಲಾಗುತ್ತದೆ. ಚಿಕನ್ ಮತ್ತು ಬೋನ್ ಲೆಸ್ ಮಟನ್ ನ್ನು ಪ್ರಿಸನರ್ ಇಂಡೆಂಟ್ ನಲ್ಲಿ  ನೀಡಲಾಗುತ್ತದೆ. ಅಂತೆಯೇ ವಾರಕ್ಕೆ ಒಮ್ಮೆ ನೀಡುವ ಮಾಂಸಹಾರ ಊಟವನ್ನು ಜೈಲು ಅಧಿಕಾರಿಗಳು ಜೈಲುವಾಸಿಗಳ ಅನುಕೂಲಕ್ಕೆ ತಕ್ಕಂತೆ ದಿನವನ್ನ ನಿಗದಿ ಪಡಿಸಿಕೊಂಡು ಮಾಂಸದೂಟವನ್ನು ನೀಡುತ್ತಾರೆ 

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ  ಈ ಬಾರಿ ಶುಕ್ರವಾರ ನೀಡಬೇಕಿದ್ದ ಮಾಂಸಹಾರವನ್ನು ಭಾನುವಾರ ನೀಡುವಂತೆ ಜೈಲುಬಂಧಿಗಳು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಭಾನುವಾರಕ್ಕೆ ಮಾಂಸಹಾರ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯಾವುದೇ ವ್ಯಕ್ತಿಯ ಪ್ರಾಯೋಜಕತ್ವದಲ್ಲಿ ಮಾಂಸಹಾರ ಪೂರೈಕೆಯಾಗಿಲ್ಲ. ಸರ್ಕಾರದ ನಿಯಮದಂತೆ ಪ್ರಿಸಿನರ್ ಇಂಡೆಂಟ್ ನಲ್ಲಿ ಆಹಾರ ಪೂರೈಸಲಾಗಿದೆ ಎಂಬ ಮಾಹಿತಿಯನ್ನ ಅಧಿಕಾರಿಗಳು ನೀಡಿದ್ದಾರೆ. 

ಈ ಬಗ್ಗೆ ಮಲೆನಾಡು ಟುಡೆಗೆ ಪ್ರತಿಕ್ರಿಯೆ ನೀಡಿದ  ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಕೆಲವೊಂದು ಸಂದರ್ಭದಲ್ಲಿ ಪೂರೈಕೆಯಲ್ಲಿ ವ್ಯತ್ಯಾಸವಾಗುವ ಕಾರಣಕ್ಕೂ ಜೈಲಿನಲ್ಲಿ ಮಾಂಸಾಹಾರದ ನೀಡುವ ದಿನದಲ್ಲಿ ಬದಲಾವಣೆಯಾಗುತ್ತದೆ. ಇವತ್ತು ಭಾನುವಾರ ನೀಡಲಾಗುತ್ತಿರುವ ಬಾಡೂಟವೂ ಸಹ ಪ್ರಿಸನರ್ ಇಂಡೆಂಟ್​ನಲ್ಲಿಯೇ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ 


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!