ಶಿವಮೊಗ್ಗ ಪೊಲೀಸರಿಂದ ಬುಲ್ಡೋಜರ್ ಅಸ್ತ್ರ ಪ್ರಯೋಗ! ವಿಶೇಷವೇನು ಗೊತ್ತಾ?

Half helmets were destroyed by Shivamogga police using a bulldozer

ಶಿವಮೊಗ್ಗ ಪೊಲೀಸರಿಂದ ಬುಲ್ಡೋಜರ್ ಅಸ್ತ್ರ ಪ್ರಯೋಗ! ವಿಶೇಷವೇನು ಗೊತ್ತಾ?
Half helmets were destroyed by Shivamogga police using a bulldozer

Shivamogga | Feb 2, 2024 | ಶಿವಮೊಗ್ಗ  ನಗರದಲ್ಲಿ ನಿನ್ನೆ ಶಿವಮೊಗ್ಗ ಪೊಲೀಸರು ಬುಲ್ಡೋಜರ್ ತರಿಸಿದ್ರು. ಅಲ್ಲದೆ ಶಿವಮೊಗ್ಗ ಸಿಟಿಯ ಹೃದಯಭಾಗದಲ್ಲಿ ರಾಶಿಗಟ್ಲೇ ಹಾಫ್ ಹೆಲ್ಮೆಟ್ ಸುರಿದು ಅದರ ಮೇಲೆ ಬುಲ್ಡೋಜರ್ ಹತ್ತಿಸಿದ್ರು.ಇಲ್ಲಿವರೆಗೂ ವಶಪಡಿಸಿಕೊಂಡಿದ್ದ ಹಾಫ್ ಹೆಲ್ಲೆಟ್‌ಗಳು ಹಾಗೂ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ನಿನ್ನೆ ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ರೋಡ್ ರೋಲರ್ ಹತ್ತಿಸಿ, ನಾಶಪಡಿಸಿದರು. ಇದು ಸಹ ಜನಜಾಗೃತಿಯ ಒಂದು ಭಾಗ ಎಂದು ಪೊಲೀಸ್ ಇಲಾಖೆ ಹೇಳಿದೆ. 

ಸುಮಾರು 3 ಸಾವಿರ ಹಾಫ್ ಹೆಲೈಟ್ ಗಳು, 70 ಸೈಲೆನ್ಸರ್‌ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಗೋಪಿ ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಂಚಾರ ಠಾಣೆ ಇನ್‌ಸ್ಪೆಕ್ಟ‌ರ್ ಸಂತೋಷ್‌ ಕುಮಾರ್ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ - ಇದ್ದರು. ಕಾರ್ಯಾಚರಣೆ ವೀಕ್ಷಿಸಲು - ಗೋಪಿ ಸರ್ಕಲ್‌ನಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು. 

ಹಾಫ್ ಹೆಲ್ಲೆಟ್‌ಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಸಾವಿರಾರು ಹಾಫ್ ಹೆಲ್ಲೆಟ್ ಗಳನ್ನು ದ್ವಿಚಕ್ರ ವಾಹನ ಸವಾರರಿಂದ ವಶಕ್ಕೆ ಪಡೆದು ನಾಶಪಡಿಸಿದ್ದರು. ಇನ್ನು ಹಾಫ್ ಹೆಲೈಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆಯೂ ದಾಳಿ ನಡೆದಿತ್ತು.