ಶಿವಮೊಗ್ಗ ನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ರಾಜ್ಯ ಸರ್ಕಾರ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಸಂಬಂಧ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಪ್ರಕಟಣೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳನ್ನು ಚುನಾಯಿಸುವ ಕುರಿತು ದಿನಾಂಕ ನಿಗಿದಿ ಪಡಿಸಲಾಗಿದೆ
ಮಗುವಿನ ಚಿಕಿತ್ಸೆಗೆಂದು ಬಂದವರು ಕಾಣೆಯಾಗಿದ್ದಾರೆ/ ಇವರ ಸುಳಿವು ಸಿಕ್ಕರೆ ಮಾಹಿತಿ ನೀಡಿ
ಸರ್ಕಾರದ ಉಲ್ಲೇಖಿತ ಅಧಿಸೂಚನೆ ಪ್ರಕಾರ ರಾಜ್ಯದ ಮಹಾನಗರ ಪಾಲಿಕೆಗಳಿಗೆ 24 ನೇ ಅವಧಿಗೆ ಮಹಾಪೌರ ಹಾಗೂ ಉಪಮಹಾಪೌರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾದಂತೆ ದಿನಾಂಕ:28-10-2022 ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರರ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಗಿದೆ.
ತತ್ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ:07-01-2023 (ಶನಿವಾರ) ರಂದು ಮಧ್ಯಾಹ್ನ 12-00 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ, ಪರಿಷತ್ ಸಭಾಂಗಣದಲ್ಲಿ ಕಾರ್ಯಕಲಾಪಗಳನ್ನು ನಡೆಸುವುದಕ್ಕಾಗಿ ಸಭೆ ಕರೆಯಲಾಗಿದೆ.
ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ
ಚುನಾವಣೆ ಸಭೆಗೆ ಗೊತ್ತುಪಡಿಸಿದ ಸಮಯದ ಎರಡು (02) ಗಂಟೆ ಮುಂಚಿತವಾಗಿ (ಅಂದರೆ ದಿನಾಂಕ:07-01-2023ರಂದು ಬೆಳಗ್ಗೆ 9-00 ಗಂಟೆಯಿಂದ ಬೆಳಗ್ಗೆ 10-00 ಗಂಟೆಯ ಒಳಗಾಗಿ) ನಾಮನಿರ್ದೇಶನ ಪತ್ರ ಸಲ್ಲಿಸಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ವಿವರವನ್ನೊಳಗೊಂಡ ಸೂಚನೆಗಳು ಮತ್ತು ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976ರ ಕಲಂ lll), II(2)(ಎ) ಹಾಗೂ ಕರ್ನಾಟಕ ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 1979ರ ನಿಯಮ 74ರನ್ವಯ ಈ ಕೆಳಕಂಡ ಸ್ಥಾಯಿ ಸಮಿತಿಗಳ ಸದಸ್ಯರನ್ನು ಚುನಾಯಿಸಲು ಸೂಚಿಸಲಾಗಿದೆ.
ಯಾವೆಲ್ಲಾ ಸ್ಥಾಯಿ ಸಮಿತಿಗೆ ಚುನಾವಣೆ
- ಎ) ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ
- ಬಿ) ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಿ) ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ
- ಸಿ) ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ
- ಡಿ) ಲೆಕ್ಕಪತ್ರಗಳ ಸ್ಥಾಯಿ ಸಮಿತಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
