ರಮೇಶ್, 35 ವರ್ಷಗಳು, ಸೊರಬ ಇವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮಗುವಿನ ಚಿಕಿತ್ಸೆಗೆಂದು ಬಂದವರು 2022 ರ ನವೆಂಬರ್ 19 ರಂದು ಕಾಣೆಯಾಗಿರುತ್ತಾರೆ. ಕಾಣೆಯಾದ ರಮೇಶ್ ಸುಮಾರು 5.3 ಇಂಚು ಎತ್ತರ, ಗೋಧಿ ಮೈಬಣ್ಣ, ಕೈಯಲ್ಲಿ ರೇಣುಕಮ್ಮ, ರಂಜಿತ ಎಂಬ ಹಚ್ಚೆ ಇರುತ್ತದೆ. ಬಿಳಿ ಶರ್ಟ್, ನೀಲಿ ಪ್ಯಾಂಟ್ ಧರಿಸಿರುತ್ತಾರೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಮಹಿಳೆ ನಾಪತ್ತೆ
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ದುರ್ಗಮ್ಮ, 50 ವರ್ಷ, ಚಿಗಳಿಕಟ್ಟೆ ಗ್ರಾಮ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಈಕೆಯು ನಗರದ ಮಾನಸಿಕ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, 2022 ರ ಡಿ.25 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಣೆಯಾಗಿರುತ್ತಾರೆ.
ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ
ಕಾಣೆಯಾದ ದುರ್ಗಮ್ಮ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಕಪ್ಪು ಮೈಬಣ್ಣ, ಕಪ್ಪುಬಿಳಿ ಮಿಶ್ರಿತ ಕೂದಲು, ಹಳದಿ ಮಿಶ್ರಿತ ಹಸಿರು ಬಾರ್ಡರ್ ಸೀರೆಯನ್ನು ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.