ಮಗುವಿನ ಚಿಕಿತ್ಸೆಗೆಂದು ಬಂದವರು ಕಾಣೆಯಾಗಿದ್ದಾರೆ/ ಇವರ ಸುಳಿವು ಸಿಕ್ಕರೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram

ರಮೇಶ್, 35 ವರ್ಷಗಳು, ಸೊರಬ ಇವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮಗುವಿನ ಚಿಕಿತ್ಸೆಗೆಂದು ಬಂದವರು 2022 ರ ನವೆಂಬರ್ 19 ರಂದು ಕಾಣೆಯಾಗಿರುತ್ತಾರೆ. ಕಾಣೆಯಾದ ರಮೇಶ್ ಸುಮಾರು 5.3 ಇಂಚು ಎತ್ತರ, ಗೋಧಿ ಮೈಬಣ್ಣ, ಕೈಯಲ್ಲಿ ರೇಣುಕಮ್ಮ, ರಂಜಿತ ಎಂಬ ಹಚ್ಚೆ ಇರುತ್ತದೆ. ಬಿಳಿ ಶರ್ಟ್, ನೀಲಿ ಪ್ಯಾಂಟ್ ಧರಿಸಿರುತ್ತಾರೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ, ಕ್ಷೇತ್ರಗಳು ಫಿಕ್ಸ್​/ ಎಷ್ಟು ಕ್ಷೇತ್ರಗಳಿವೆ, ಯಾವ್ಯಾವ ಊರುಗಳು ವ್ಯಾಪ್ತಿಯಲ್ಲಿ ಬರುತ್ತವೆ? ಕಂಪ್ಲೀಟ್​ ವಿವರ ಇಲ್ಲಿದೆ ಓದಿ

ಮಹಿಳೆ ನಾಪತ್ತೆ

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ದುರ್ಗಮ್ಮ, 50 ವರ್ಷ, ಚಿಗಳಿಕಟ್ಟೆ ಗ್ರಾಮ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಈಕೆಯು ನಗರದ ಮಾನಸಿಕ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, 2022 ರ ಡಿ.25 ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಣೆಯಾಗಿರುತ್ತಾರೆ.
ಕಾಣೆಯಾದ ದುರ್ಗಮ್ಮ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಕಪ್ಪು ಮೈಬಣ್ಣ, ಕಪ್ಪುಬಿಳಿ ಮಿಶ್ರಿತ ಕೂದಲು, ಹಳದಿ ಮಿಶ್ರಿತ ಹಸಿರು ಬಾರ್ಡರ್ ಸೀರೆಯನ್ನು ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor