wild elephant chasing | ಬೆನ್ನಟ್ಟಿಕೊಂಡು ಬಂದ ಕಾಡಾನೆ! ಕೆಳಕ್ಕೆ ಬಿದ್ದವನ ಅದೃಷ್ಟ ಚೆನ್ನಾಗಿತ್ತು! ವಿಡಿಯೋ ನೋಡಿ

Shivamogga | Feb 2, 2024 | wild elephant chasing  ಅಭಯಾರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಓಡಾಟ ಸರ್ವೆಸಹಜ. ಆ ಕಾರಣಕ್ಕೆ ಅಭಯಾರಣ್ಯಗಳಲ್ಲಿ ವಾಹನ ಸವಾರರು ತಮ್ಮ ವಾಹನ ಬಿಟ್ಟು ಕೆಳಕ್ಕೆ ಇಳಿಯಬಾರದು ಎಂದು ಹೇಳುತ್ತಾರೆ. ಅದರಲ್ಲಿಯು ಪ್ರಾಣಿಗಳು ಎದುರಾದಾಗ ವಾಹನದಲ್ಲಿಯೇ ಕುಳಿತು, ಅವುಗಳಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂದು ಸಲಹೆಗಳನ್ನು ನೀಡಲಾಗುತ್ತದೆ. ಇದರ ಹೊರತಾಗಿಯು ವಾಹನಗಳಿಂದ ಇಳಿದು ಪ್ರಾಣಿಗಳ ಸಹವಾಸಕ್ಕೆ ಹೋದರೇ ಏನಾಗುತ್ತದೆ ಎಂಬುದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ. 

ಬಂಡಿಪುರ-ವಯನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಯೊಂದು ಇಬ್ಬರನ್ನ ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಈ ದೃಶ್ಯದಲ್ಲಿ ಕಾಡಾನೆಯನ್ನ ನೋಡಿ ಬೆನ್ನು ತಿರುಗಿಸಿ ಓಡುವ ವ್ಯಕ್ತಿಯೊಬ್ಬರು ಅಲ್ಲಿಯೇ ಎಡವಿ ಬೀಳುತ್ತಾರೆ. ಅದೃಷ್ಟಕ್ಕೆ ಅವರ ಮೇಲೆ ಪ್ರಹಾರ ಮಾಡಿದರೂ ಆನೆಯು ಅವರಿಗೆ ಹೆಚ್ಚು ಪೆಟ್ಟುಕೊಡುವುದಿಲ್ಲ. ತುಳಿಯಲು ಬರುವ ಆನೆ ಅವರನ್ನ ಕಾಲಿನಿಂದ ದೂಡುತ್ತದೆ.

ಅಷ್ಟರಲ್ಲಿಯೇ ಅಲ್ಲಿಗೆ ಇನ್ನೊಂದು ವಾಹನ ಬರುವುದರಿಂದ ಆನೆ ಗಮನ ಆಕಡೆಗೆ ಸೆಳೆಯಲ್ಪಟ್ಟಿದೆ. ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ಬಿಟ್ಟು ಆನೆಯು ಎದುರಿಗೆ ಬಂದ ಇನ್ನೊಂದು ವಾಹನದ ಬೆನ್ನಟ್ಟುತ್ತದೆ. ಸದ್ಯ ಈ ದೃಶ್ಯ ವೈರಲ್ ಆಗಿದ್ದು ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಇನ್ನೂ ಪತ್ರಿಕಾ ವರದಿ ಪ್ರಕಾರ, ಅರಣ್ಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ ಗಮನಿಸಿರುವ ಅವರು, ಘಟನೆಯ ಬಗ್ಗೆ ಕೆಲವರು  ವಯನಾಡು ಅರಣ್ಯದ ಮುತಂಗ ಪ್ರದೇಶದಲ್ಲಿ ನಡೆದಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮದ್ದೂರು ವಲಯದಲ್ಲಿ ನಡೆಯುತ್ತಿದೆ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  


Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು