15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ! 25 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ ! ಏನಿದು ಪ್ರಕರಣ ವಿವರ ಇಲ್ಲಿದೆ

15-year-old girl sexually abused 25-year-old sentenced to 20 years in prison Here's what the case details are |shivamogga court

Shivamogga | Feb 2, 2024 |  15 ವರ್ಷದ ಬಾಲಕಿ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ  25 ವರ್ಷದ ಯುವಕನಿಗೆ ಶಿವಮೊಗ್ಗ ಕೋರ್ಟ್​ 20 ವರ್ಷ ಶಿಕ್ಷೆ ವಿಧಿಸಿದೆ. 

2022ನೇ ಸಾಲಿನಲ್ಲಿ ಹೊಸನಗರ ತಾಲ್ಲೂಕಿನ ವಾಸಿ 25 ವರ್ಷದ ಯುವಕನು 15  ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧನೊಂದ ಬಾಲಕಿಯು  ದೂರು ನೀಡಿದ್ದಳು ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಗಿರೀಶ್ ಬಿ.ಸಿ, ಪೊಲೀಸ್  ವೃತ್ತ ನಿರೀಕ್ಷಕರು, ಹೊಸನಗರ ವೃತ್ತ  ಚಾರ್ಜ್​ಶೀಟ್​ ಸಲ್ಲಿಸಿದ್ದರು. 

ಶಿವಮೊಗ್ಗದ FTSC-1  ನ್ಯಾಯಾಲಯ

ಪ್ರಕರಣದಲ್ಲಿ   ಶಿವಮೊಗ್ಗದ FTSC-1  ನ್ಯಾಯಲಯದಲ್ಲಿ  ಸರ್ಕಾರದ ಪರವಾಗಿ ಹರಿಪ್ರಸಾದ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಇದೀಗ, ಶಿವಮೊಗ್ಗದ FTSC-1  ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ  ಮುಗಿಸಿ ತೀರ್ಪು ನೀಡಿದೆ. ಇನ್ನೂ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಲತಾ ರವರು ದಿನಾಂಕಃ 31-01-2024 ರಂದು ಆರೋಪಿಗೆ  20 ವರ್ಷ ಕಠಿಣ ಕಾರಾಗೃಹ ಶಿಕ್ಷೆ  20 years in prison  ಮತ್ತು 50,000/-  ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 4 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.