ಬೈಕ್‌ ಸವಾರರೇ ಹುಷಾರ್!‌ ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ಮತ್ತೊಂದು ಬಿಗ್‌ ಫೈನ್‌ ಎಂಟ್ರಿ!

Beware of bikers! Another big fine entry by Shivamogga traffic police!

ಬೈಕ್‌ ಸವಾರರೇ ಹುಷಾರ್!‌ ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ಮತ್ತೊಂದು ಬಿಗ್‌ ಫೈನ್‌ ಎಂಟ್ರಿ!
Shivamogga traffic police

Shivamogga  Apr 4, 2024  ಚುನಾವಣೆ ನೀತಿ ಸಂಹಿತೆ, ಚುನಾವಣಾ ಜಾಗೃತಿ ಮತಪ್ರಚಾರ ಸೇರಿದಂತೆ ಎಲೆಕ್ಷನ್‌ ಡ್ಯೂಟಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಬ್ಯುಸಿಯಾಗಿವೆ. 



ಇದರ ನಡುವೆಯು ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಸೈಲೆನ್ಸರ್‌ ಆಲ್ಟರ್‌ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಕೇಸ್‌ ದಾಖಲಿಸಿ ಕೋರ್ಟ್‌ ಮೂಲಕ 8 ಸಾವಿರ ರೂಪಾಯಿ ದಂಡ ಹಾಕಿಸಿದೆ. 

ಕೆಎ14 EZ29*** ರ ದ್ವಿ ಚಕ್ರ ವಾಹನದ ಸವಾರರವರು  ತಮ್ಮ ಬೈಕ್ ನ್ನು Altration ಮಾಡಿಕೊಂಡು  ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡಿದ್ದರು. 

ಬೈಕ್‌ನ  ಕರ್ಕಶ ಶಬ್ದದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಟ್ರಾಫಿಕ್‌ ಪೊಲೀಸರು ಕೇಸ್‌ ದಾಖಲಿಸಿದ್ದರು. ಇದೀಗ ಈ ಸಂಬಂಧ  ನ್ಯಾಯಾಲಯವು  ದಿ;4/4/24ರಂದು ಒಟ್ಟು ₹- 8000/- ರೂ ದಂಡ ವಿಧಿಸಿದೆ ಎಂದು ಶಿವಮೊಗ್ಗ ಟ್ರಾಫಿಕ್‌ ಪೊಲೀಸರು  (https://twitter.com/Shimoggatraffic) ತಿಳಿಸಿದ್ದಾರೆ