ಗ್ಯಾಸ್​ ಸಿಲಿಂಡರ್ ಕೊಡದಿದ್ದಕ್ಕೆ , ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ! ಏನಿದು ಘಟನೆ ವಿವರ ಇಲ್ಲಿದೆ!

One-year jail term for dragging woman for not giving gas cylinder Here's what the incident is all about!

ಗ್ಯಾಸ್​  ಸಿಲಿಂಡರ್ ಕೊಡದಿದ್ದಕ್ಕೆ ,  ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ! ಏನಿದು ಘಟನೆ ವಿವರ ಇಲ್ಲಿದೆ!

 MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ , 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದೆ. ಗ್ಯಾಸ್ ಸಿಲಿಂಡರ್ ಕೊಡದಿದ್ದಕ್ಕೆ , ಸಿಟ್ಟಾಗಿ ಮಹಿಳೆಯನ್ನು ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಒಂದು ವರ್ಷ ಶಿಕ್ಷೆ ನೀಡಲಾಗಿದೆ. 

READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಟಿಪ್ಪು ನಗರದ ನಿವಾಸಿ ಅಶ್ರಫ್​ ಎಂಬಾತ,  ಮಹಿಳೆಯೊಬ್ಬರ ಬಳಿ ಗ್ಯಾಸ್ ಸಿಲಿಂಡರ್​ ಕೇಳಿದ್ದ.ಆದರೆ ಆಕೆ ಅದನ್ನು ಕೊಡುವುದಿಲ್ಲ ಎಂದಿದ್ಧಾಳೆ. ಇದೇ ಕಾರಣಕ್ಕೆ ಸಿಟ್ಟಾಗಿ,  02-06-2017 ರಂದು ಆಕೆಯ ಜೊತೆ ಜಗಳ ತೆಗೆದು ಕೈ ಹಿಡಿದು ಎಳೆದಾಡಿದ್ದ. ಈ ಸಂಬಂಧ  ಐಪಿಸಿ 448, 323, 354(B) ಐಪಿಸಿ ಮತ್ತು ಕಲಂ 3 (1) (w) (1), 3 (2) (va) ಎಸ್.ಸಿ & ಎಸ್,ಟಿ (ಪಿಎ) ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. ಮೇಲಾಗಿ ಕೇಸ್​ ಸಂಬಂಧ ಚಾರ್ಜ್​ ಶೀಟ್​ ಸಲ್ಲಿಕೆಯಾಗಿತ್ತು. ಆನಂತರ ಕೇಸ್​ನ ವಿಚಾರಣೆ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭವಾಗಿತ್ತು.  ಈ ಕೇಸ್​ನಲ್ಲಿ ಸರ್ಕಾರಿ ಅಭಿಯೋಜಕಿ ಪುಷ್ಪರವರು ವಾದ ಮಂಡಿಸಿದ್ದರು. ಅಂತಿಮವಾಗಿ ವಿಚಾರಣೆ ಮುಗಿದು ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!