ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆ | ಏನಾಯ್ತು ಶಿವಮೊಗ್ಗ ಕೋರ್ಟ್‌ನಲ್ಲಿ ವಿಚಾರಣೆ |

Photo usage of Prime Minister Narendra Modi | What happened in Shimoga Court, Narendra Modi, KS Eshwarappa, BJP News, Shimoga District BJP

ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆ | ಏನಾಯ್ತು ಶಿವಮೊಗ್ಗ ಕೋರ್ಟ್‌ನಲ್ಲಿ ವಿಚಾರಣೆ |
Shimoga Court, Narendra Modi, KS Eshwarappa, BJP News, Shimoga District BJP

 

SHIVAMOGGA | MALENADUTODAY NEWS | Apr 30, 2024    ‌ 

 

ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಕೆ ಸಂಬಂಧ ಕೆಎಸ್‌ ಈಶ್ವರಪ್ಪ ಕೇವಿಯಟ್‌ ಸಲ್ಲಿಸಿದ್ದರು, ಆನಂತರ ಬಿಜೆಪಿ ಪ್ರಧಾನಿಯವರ ಫೋಟೋ ಬಳಕೆಗೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಈ ವಿಚಾರ ಶಿವಮೊಗ್ಗ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಇದೀಗ ಲಭ್ಯ ಮಾಹಿತಿ ಪ್ರಕಾರ, ಮೋದಿ ಬಳಕೆ ವಿಚಾರಕ್ಕೆ ಸದ್ಯದಮಟ್ಟಿಗೆ ಇತ್ಯರ್ಥವಾಗುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ರಾಜ್ಯದ ಮಾಧ್ಯಮವೊಂದು ವರದಿ ಮಾಡಿದೆ.ಅದರ ಪ್ರಕಾರ,  ವಿಚಾರಣೆ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. 

 

ಅರ್ಜಿ ವಿಚಾರಣೆ ಮಾಡುತ್ತಿರುವ ಒಬ್ಬರು ನ್ಯಾಯಾಧೀಶರು ನಿವೃತ್ತರಾಗಿದ್ದಾರೆ. ಮತ್ತೊಬ್ಬರು ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಈ ನಡುವೆ ಬೇಸಿಗೆ ರಜೆ ಬಂದಿದೆ. ಹಾಗಾಗಿ ವಿಶೇಷ ಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಬೇಕಿದೆ. ಈ ಕಾರಣಗಳಿಂದ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಅಲ್ಲದೆ ಈಶ್ವರಪ್ಪನವರು ನರೇಂದ್ರ ಮೋದಿಯವರ ಫೋಟೋ ಬಳಸುವುದನ್ನ ತಪ್ಪಿಸಬೇಕು ಎನ್ನುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ.