KARNATAKA NEWS/ ONLINE / Malenadu today/ Aug 11, 2023 SHIVAMOGGA NEWS
ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದ ಶಿವಮೊಗ್ಗ ಕೋರ್ಟ್ ಆರೋಪಿಯೊಬ್ಬನಿಗೆ 5 ವರ್ಷ ಶಿಕ್ಷೆ ವಿಧಿಸಿದೆ.
ಪ್ರಕರಣದ ಪೂರ್ತಿ ವಿವರ
ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾದ ಆಸಿಫ್ @ ಸನಾಟ ಆಸಿಫ್ ನನ್ನ ಹುಡುಕಾಡುತ್ತಿದ್ದರು. ಈತ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ದಿನಾಂಕ:15/07/2018 ರಂದು ಬೆಳಗ್ಗೆ ಪೊಲೀಸ್ ಉಪ ನಿರೀಕ್ಷಕರ ಗಿರೀಶ್ ಮತ್ತವರ ತಂಡ ಈತನನ್ನ ಬೆಂಗಳೂರಿಗೆ ತೆರಳಿ ಅರೆಸ್ಟ್ ಮಾಡಿತ್ತು. ಅಲ್ಲಿಂದ ಶಿವಮೊಗ್ಗಕ್ಕೆ ಕರೆತರುವಾಗ ಆಸೀಪ್ ಪೊಲೀಸ್ ಟೀಂ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ.
ಕಬ್ಬಿಣದ ರಾಡ್ನಿಂದ ಹಲ್ಲೆ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾಳಿ ರಸ್ತೆ ಹೊಳಲೂರು ಗ್ರಾಮದ ಹೊಟ್ಟೆಗುಡ್ಡದ ಬಳಿ ಮೂತ್ರ ವಿಸರ್ಜನೆಗೆಂದು ವಾಹನದಿಂದ ಇಳಿದಿದ್ದ ಆಸೀಫ್, ಅಲ್ಲೆ ಸ್ಥಳದಲ್ಲಿ ಬಿದ್ದಿದ್ದ ಕಬ್ಬಿಣದ ರಾಡಿನಿಂದ ಪಿಎಸ್ಐ ಮತ್ತು ಸಿಬ್ಬಂದಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಐಪಿಸಿ 224, 332, 353, 504, 307 ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಅಲ್ಲದೆ ತನಿಖಾಧಿಕಾರಿಗಳಾದ ಸಿಪಿಐ ಮಂಜುನಾಥ್ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಹೊರಬಿತ್ತು ತೀರ್ಪು
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಸುರೇಶ್, ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದಿದ್ದು, ಆರೋಪಿ ಆಸಿಫ್ @ ಸನಾಟ ಆಸಿಫ್ 28 ವರ್ಷ, ವಾಸ ಟಿಪ್ಪುನಗರ ವಿರುದ್ದದ ಆರೋಪ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದಮಂಜುನಾಥ ನಾಯಕ್ ರವರು ದಿನಾಂಕ: 10-08-2023 ರಂದು ಆರೋಪಿಗೆ 05 ವರ್ಷ ಕಠಿಣ ಕಾರವಾಸ ಶಿಕ್ಷೆ ಮತ್ತು 15,000/- ರೂ ದಂಡ, ದಂಡ ಕಟ್ಟಲು ವಿಫಲನಾಲ್ಲಿ 06 ತಿಂಗಳು ಹೆಚ್ಚುವರಿ ಸಾಧಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.
ಇನ್ನೂ ಅಧಿಕೃತ! ಗೋಪಿ ಸರ್ಕಲ್ ಅಲ್ಲ! ಟಿ ಸೀನಪ್ಪ ವೃತ್ತ! ಏನಿದು ಸರ್ಕಲ್ ಸ್ಟೋರಿ ! 75 ವರ್ಷಗಳ ಹಿಂದೆ !
ಶಿವಮೊಗ್ಗ ಸಿಟಿಯಲ್ಲಿ ಅಮೀರ್ ಅಹಮದ್ ವೃತ್ತ ಬಿಟ್ಟರೇ ಅತಿಹೆಚ್ಚು ಸುದ್ದಿಯಅಗುವ ಸರ್ಕಲ್ ಎಂದರೇ ಅದು ಗೋಪಿ ಸರ್ಕಲ್. ಈ ಸರ್ಕಲ್ನ ನಿಜವಾದ ಹೆಸರು ಟಿ. ಸೀನಪ್ಪ ಶೆಟ್ಟಿ ವೃತ್ತ. ಇವತ್ತು ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂಬ ನಾಮಫಲಕವನ್ನು ವಿಶೇಷವಾಗಿ ಅನಾವರಣಗೊಳಿಸಲಾಗುತ್ತಿದೆ. ಈ ಬಗ್ಗೆ ಸೀನಪ್ಪ ಶೆಟ್ಟಿ ಕುಟುಂಬದ ಹಿರಿಯ ಸದಸ್ಯರೂ, ಶ್ರೀನಿಧಿ 20 ಸಂಸ್ಥೆಯ ಪಾಲುದಾರ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ತಿಳಿಸಿದ್ದಾರೆ.
ಸರ್ಕಲ್ನ ಇತಿಹಾಸ
ಗೋಪಿ ವೃತ್ತದಲ್ಲಿ ಗೋಪಿ ಹೋಟೆಲ್ ಇದ್ದಿದ್ದರಿಂದ ಅಂದಿನಿಂದ ಗೋಪಿ ಸರ್ಕಲ್ ಎಂದೆ ಕರೆಯಲಾಗುತ್ತದೆ. ಅದಕ್ಕೂ ಮೊದಲೇ ಈ ಸರ್ಕಲ್ಗೆ ಟಿ ಸೀನಪ್ಪ ಶೆಟ್ಟಿ ಎಂಬ ಹೆಸರನ್ನ ಇಡಲಾಗಿತ್ತು.1958ರಲ್ಲಿಯೇ ಅಂದಿನ ಪುರಸಭೆ ಅನುಮತಿಯೊಂದಿಗೆ ಟಿ. ಸೀನಪ್ಪ ಶೆಟ್ಟಿ ವೃತ್ತವನ್ನು ಸ್ಥಾಪಿಸಿ ನಾಮಕರಣ ಮಾಡಲಾಗಿತ್ತು. ಅಂದಿನ ಕಾಲಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಸೀನಪ್ಪ ಶೆಟ್ಟರು ಈ ವೃತ್ತ ನಿರ್ಮಿಸಿದ್ದರ. ಸುಮಾರು 20 ಸಾವಿರ ರು. ವೆಚ್ಚದಲ್ಲಿ ಕಾರಂಜಿ ನಿರ್ಮಿಸಲಾಗಿತ್ತು.
ಕಾಲ ಬದಲಾದಂತೆ ಗೋಪಿ ಸರ್ಕಲ್ನ ರೂಪವೂ ಸಹ ಬದಲಾಗುತ್ತಾ ಬಂತು, ಸರ್ಕಾರಿ ದಾಖಲೆಗಳಲ್ಲಿ ಟಿ ಸೀನಪ್ಪ ಸರ್ಕಲ್ ಎಂದಿದ್ದರೂ ವಾಡಿಕೆಯ ಮಾತುಗಳಲ್ಲಿ ಗೋಪಿ ಸರ್ಕಲ್ ಆಗಿ ವೃತ್ತದ ಹೆಸರು ಬದಲಾಗಿತ್ತು. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ‘ಸೀನಪ್ಪ ಶೆಟ್ಟಿ ವೃತ್ತ’ ಎಂದು ಕಲ್ಲಿನಲ್ಲಿ ಕೆತ್ತನೆ ಮಾಡಿಸಿ ವೃತ್ತದಲ್ಲಿ ಅಳವಡಿಸಲಾಗಿದ್ದು, ಇವತ್ತು ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಉದ್ಘಾಟಿಸಲಿದ್ದಾರೆ
ಇನ್ನಷ್ಟು ಸುದ್ದಿಗಳು
