ಇನ್ನೂ ಅಧಿಕೃತ! ಗೋಪಿ ಸರ್ಕಲ್ ಅಲ್ಲ! ಟಿ ಸೀನಪ್ಪ ವೃತ್ತ! ಏನಿದು ಸರ್ಕಲ್​ ಸ್ಟೋರಿ ! 75 ವರ್ಷಗಳ ಹಿಂದೆ !

The real name of Gopi Circle in Shivamogga is T. Seenappa Shetty Circle. Today A Stone Board In His Name Is Being Installedಶಿವಮೊಗ್ಗದ ಗೋಪಿ ಸರ್ಕಲ್​ನ ನಿಜವಾದ ಹೆಸರು ಟಿ.ಸೀನಪ್ಪ ಶೆಟ್ಟಿ ವೃತ್ತ. ಇವತ್ತು ಅವರ ಹೆಸರಿನ ಕಲ್ಲಿನ ಬೋರ್ಡ್​ ಸ್ಥಾಪನೆ ಮಾಡಲಾಗುತ್ತಿದೆ

ಇನ್ನೂ ಅಧಿಕೃತ! ಗೋಪಿ ಸರ್ಕಲ್ ಅಲ್ಲ! ಟಿ ಸೀನಪ್ಪ ವೃತ್ತ! ಏನಿದು ಸರ್ಕಲ್​ ಸ್ಟೋರಿ  ! 75 ವರ್ಷಗಳ ಹಿಂದೆ !

KARNATAKA NEWS/ ONLINE / Malenadu today/ Aug 11, 2023 SHIVAMOGGA NEWS 

ಶಿವಮೊಗ್ಗ ಸಿಟಿಯಲ್ಲಿ ಅಮೀರ್ ಅಹಮದ್ ವೃತ್ತ ಬಿಟ್ಟರೇ ಅತಿಹೆಚ್ಚು ಸುದ್ದಿಯಅಗುವ ಸರ್ಕಲ್​ ಎಂದರೇ ಅದು ಗೋಪಿ ಸರ್ಕಲ್​. ಈ ಸರ್ಕಲ್​ನ ನಿಜವಾದ ಹೆಸರು ಟಿ. ಸೀನಪ್ಪ ಶೆಟ್ಟಿ ವೃತ್ತ. ಇವತ್ತು ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂಬ ನಾಮಫಲಕವನ್ನು ವಿಶೇಷವಾಗಿ  ಅನಾವರಣಗೊಳಿಸಲಾಗುತ್ತಿದೆ.  ಈ ಬಗ್ಗೆ  ಸೀನಪ್ಪ ಶೆಟ್ಟಿ ಕುಟುಂಬದ ಹಿರಿಯ ಸದಸ್ಯರೂ, ಶ್ರೀನಿಧಿ 20 ಸಂಸ್ಥೆಯ ಪಾಲುದಾರ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ತಿಳಿಸಿದ್ದಾರೆ.  

ಸರ್ಕಲ್​ನ ಇತಿಹಾಸ

ಗೋಪಿ ವೃತ್ತದಲ್ಲಿ ಗೋಪಿ ಹೋಟೆಲ್​ ಇದ್ದಿದ್ದರಿಂದ ಅಂದಿನಿಂದ ಗೋಪಿ ಸರ್ಕಲ್​ ಎಂದೆ ಕರೆಯಲಾಗುತ್ತದೆ. ಅದಕ್ಕೂ ಮೊದಲೇ ಈ ಸರ್ಕಲ್​ಗೆ ಟಿ ಸೀನಪ್ಪ ಶೆಟ್ಟಿ ಎಂಬ ಹೆಸರನ್ನ ಇಡಲಾಗಿತ್ತು.1958ರಲ್ಲಿಯೇ ಅಂದಿನ ಪುರಸಭೆ ಅನುಮತಿಯೊಂದಿಗೆ ಟಿ. ಸೀನಪ್ಪ ಶೆಟ್ಟಿ ವೃತ್ತವನ್ನು ಸ್ಥಾಪಿಸಿ ನಾಮಕರಣ ಮಾಡಲಾಗಿತ್ತು. ಅಂದಿನ ಕಾಲಕ್ಕೆ  ಸುಮಾರು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಸೀನಪ್ಪ ಶೆಟ್ಟರು ಈ ವೃತ್ತ ನಿರ್ಮಿಸಿದ್ದರ.  ಸುಮಾರು 20 ಸಾವಿರ ರು. ವೆಚ್ಚದಲ್ಲಿ  ಕಾರಂಜಿ ನಿರ್ಮಿಸಲಾಗಿತ್ತು.   

ಕಾಲ ಬದಲಾದಂತೆ ಗೋಪಿ ಸರ್ಕಲ್​ನ ರೂಪವೂ ಸಹ ಬದಲಾಗುತ್ತಾ ಬಂತು, ಸರ್ಕಾರಿ ದಾಖಲೆಗಳಲ್ಲಿ ಟಿ ಸೀನಪ್ಪ ಸರ್ಕಲ್ ಎಂದಿದ್ದರೂ ವಾಡಿಕೆಯ ಮಾತುಗಳಲ್ಲಿ ಗೋಪಿ ಸರ್ಕಲ್​ ಆಗಿ ವೃತ್ತದ ಹೆಸರು ಬದಲಾಗಿತ್ತು. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ 'ಸೀನಪ್ಪ ಶೆಟ್ಟಿ ವೃತ್ತ' ಎಂದು ಕಲ್ಲಿನಲ್ಲಿ ಕೆತ್ತನೆ ಮಾಡಿಸಿ ವೃತ್ತದಲ್ಲಿ ಅಳವಡಿಸಲಾಗಿದ್ದು, ಇವತ್ತು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಉದ್ಘಾಟಿಸಲಿದ್ದಾರೆ  

ಇನ್ನಷ್ಟು ಸುದ್ದಿಗಳು

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು