ತ್ರಿಯಂಬಕಪುರ ಗ್ರಾ.ಪಂ.ಅಧ್ಯಕ್ಷರಾಗಿ ವಿಧಾತ ಅನಿಲ್ ಮರು ಆಯ್ಕೆ-ಉಪಾಧ್ಯಕ್ಷರಾಗಿ ಲಕ್ಷೀದೇವಿ

Vidhata Anil re-elected as Trimbakapura gram panchayat president, Lakshmi Devi as vice-presidentತ್ರಿಯಂಬಕಪುರ ಗ್ರಾ.ಪಂ.ಅಧ್ಯಕ್ಷರಾಗಿ ವಿಧಾತ ಅನಿಲ್ ಮರು ಆಯ್ಕೆ-ಉಪಾಧ್ಯಕ್ಷರಾಗಿ ಲಕ್ಷೀದೇವಿ

ತ್ರಿಯಂಬಕಪುರ ಗ್ರಾ.ಪಂ.ಅಧ್ಯಕ್ಷರಾಗಿ  ವಿಧಾತ ಅನಿಲ್ ಮರು ಆಯ್ಕೆ-ಉಪಾಧ್ಯಕ್ಷರಾಗಿ ಲಕ್ಷೀದೇವಿ

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS 

ತೀರ್ಥಹಳ್ಳಿ: ತ್ರಿಯಂಬಕಪುರ ಗ್ರಾಮಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ವಿಧಾತ ಅನಿಲ್ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದರೆ  ಉಪಾಧ್ಯಕ್ಷರಾಗಿ ಲಕ್ಷೀದೇವಿ ಆಯ್ಕೆಯಾಗಿದ್ದಾರೆ.ಆ.10 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಇರ್ವರು ಮಹಿಳಾ ಸದಸ್ಯರೂ ಸೇರಿದಂತೆ ಹಾಲಿ ಬಿಜೆಪಿ ಬೆಂಬಲಿತ 8 ಮಂದಿ ಸದಸ್ಯರುಗಳಿದ್ದೂ  ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ  ಪೈಪೋಟಿಯಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳಿಗೆ ಸೋಲಾಗಿದೆ

ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ಬಿಸಿಎಂ-ಎ (ಮಹಿಳೆ) ಮೀಸಲಾತಿ ನಿಗದಿಯಾಗಿತ್ತು.ಬಿಜೆಪಿ ಬೆಂಬಲಿತರಲ್ಲೇ  ಬಿಸಿಎಂ-ಎ ಮೂವರು ಮಹಿಳಾ ಸದಸ್ಯರಿದ್ದು  ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಅಧ್ಯಕ್ಷ ಸ್ಥಾನಕ್ಕಾಗಿ ವಿಧಾತ ಅನಿಲ್ ಮತ್ತು ಹುಲ್ಲತ್ತಿ ದಿನೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಲಕ್ಷೀದೇವಿ-ರೇಖಾ ಮಂಜುನಾಥ್ ನಡುವೆ ಚುನಾವಣೆ ನಡೆದು ತಲಾ 6 ಮತಗಳಿಂದ ವಿಧಾತ ಅನಿಲ್-ಲಕ್ಷ್ಮೀದೇವಿ ಜಯಗಳಿಸಿದ್ದು  5 ಮತಗಳನ್ನು ಪಡೆದು ಹುಲ್ಲತ್ತಿ ದಿನೇಶ್-ರೇಖಾ ಮಂಜುನಾಥ್ ಪರಾಭವಗೊಂಡಿದ್ದಾರೆ.

ಮರೆಯಾದ ಮಳೆ! ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದದ್ದು ಕೇವಲ ಸರಾಸರಿ 1.57 ಮಿಮಿ ಮಳೆ! ಡ್ಯಾಂಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ ಗೊತ್ತಾ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 11.00 ಮಿಮಿ ಮಳೆಯಾಗಿದ್ದು, ಸರಾಸರಿ 1.57 ಮಿಮಿ ಮಳೆ ದಾಖಲಾಗಿದೆ.  ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ  55.90 ಮಿಮಿ ಮಳೆ ದಾಖಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ

ಶಿವಮೊಗ್ಗ 0.10 ಮಿಮಿ., ಭದ್ರಾವತಿ 0.70 ಮಿಮಿ., ತೀರ್ಥಹಳ್ಳಿ 1.80 ಮಿಮಿ., ಸಾಗರ 1.70 ಮಿಮಿ., ಶಿಕಾರಿಪುರ 0.10 ಮಿಮಿ., ಸೊರಬ 0.40 ಮಿಮಿ. ಹಾಗೂ ಹೊಸನಗರ 6.20 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ

ಲಿಂಗನಮಕ್ಕಿ: 1819 (ಗರಿಷ್ಠ), 1790.70 (ಇಂದಿನ ಮಟ್ಟ), 7917.00 (ಒಳಹರಿವು), 6135.90 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1807.70.  

ಭದ್ರಾ: 186 (ಗರಿಷ್ಠ), 166.90 (ಇಂದಿನ ಮಟ್ಟ), 4118.00 (ಒಳಹರಿವು), 194.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 182.90.  

ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 8139.00 (ಒಳಹರಿವು), 8139.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 581.46 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 693 (ಒಳಹರಿವು), 596.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 586.80 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.30 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3440 (ಒಳಹರಿವು), 2834.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.96 (ಎಂಎಸ್‍ಎಲ್‍ಗಳಲ್ಲಿ). 

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 570.34 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 219.00 (ಒಳಹರಿವು), 1439.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.80 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 577.36 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 478.00 (ಒಳಹರಿವು), 1325.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.38 (ಎಂಎಸ್‍ಎಲ್‍ಗಳಲ್ಲಿ). 


ತೀರ್ಥಹಳ್ಳಿಯಲ್ಲಿ ತೋಟದಲ್ಲಿ ನಡೆಯುತ್ತಿದ್ದ ಗಾಂಜಾ ಕೃಷಿಗೆ ಪೊಲೀಸರು ನೀಡಿದ್ರು ಶಾಕ್!



ತೀರ್ಥಹಳ್ಳಿ ಪೊಲೀಸರು ಅಕ್ರಮವಾಗಿ ತೋಟದಲ್ಲಿಯೇ ಬೆಳದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿ ಕೇಸ್ ದಾಖಲಿಸಿದ್ಧಾರೆ. 

ಏನಿದು ಪ್ರಕರಣ?

 ನಿನ್ನೆ  ದಿನಾಂಕಃ 09-08-2023 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಂದೂರು ಕೋಲಿಗೆ ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ. 

ಮಾಹಿತಿಯನ್ನ ಆಧರಿಸಿ  ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ  ವಾಮನ ಸುತಾರರವ ನೇತೃತ್ವದಲ್ಲಿ  ಪೊಲೀಸ್ ನಿರೀಕ್ಷಕ ಅಶ್ವತ್ ಗೌಡ , ಎಸ್​ಐ ಗಾದಿ ಲಿಂಗಪ್ಪ ಗೌಡರ್ ಮತ್ತು ಸಿಬ್ಬಂಧಿ ದಾಳಿ ನಡೆಸಿದ್ದಾರೆ. 

ಈ ವೇಳೇ  ,ಅಂದಾಜು ಮೌಲ್ಯ 80,000/- ರೂ ಗಳ, 2 ಕೆಜಿ 164  ಗ್ರಾಂ ತೂಕದ ಹಸಿ ಗಾಂಜಾ ಗಿಡಗಳು ಪತ್ತೆಯಾಗಿದ್ದು ಅವುಗಳನ್ನ ಜಪ್ತಿ ಮಾಡಲಾಗಿದೆ.  

ಇನ್ನೂ  ಗಾಂಜಾ ಗಿಡ ಬೆಳಸಿದ ಆರೋಪಕ್ಕೆ ಸಂಬಂಧಿಸಿದಂತೆ   ಸುನಿಲ್ 34 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ಮತ್ತು ಕಾರ್ತಿಕ್ 29 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ರನ್ನ ಬಂದಿಸಲಾಗಿದೆ. ಈ ಸಂಬಂಧ ಐಪಿಸಿ 8(a), 20(a) (i) NDPS ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. 

ಇನ್ನಷ್ಟು ಸುದ್ದಿಗಳು



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು