KARNATAKA NEWS/ ONLINE / Malenadu today/ Aug 13, 2023 SHIVAMOGGA NEWS
ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯ ಬಗ್ಗೆ ಮಲೆನಾಡು ಟುಡೆ, ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!? ಎಂಬ ಹೆಸರಿನಡಿಯಲ್ಲಿ ಸುದ್ದಿ ಮಾಡಿತ್ತು. ಇದೀಗ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆಯು ಪ್ರಕಟಣೆಯನ್ನು ಹೊರಡಿಸಿದೆ. ಪ್ರಕಟಣೆಯಲ್ಲಿ ಏನಿದೆ? ದಾಳಿ ವೇಳೆ ಸಿಕ್ಕ ವಸ್ತುಗಳು ಯಾವ್ಯಾವು? ಎಂಬ ವರದಿ ಇಲ್ಲಿದೆ.
ಪೊಲೀಸ್ ಪ್ರಕಟಣೆಯ ವಿವರ
ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಮಾನ್ಯ ಪೋಲಿಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಮತ್ತು ಅಶ್ವತ್ ಗೌಡ ಪೋಲಿಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಾಗರ್ ಅತ್ತರವಾಲ ಪೊಲೀಸ್ ಉಪನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ, ನವೀನ್ ಕುಮಾರ್ ಮಠಪತಿ ಪೊಲೀಸ್ ಉಪನಿರೀಕ್ಷಕರು ಮಾಳೂರು ಪೊಲೀಸ್ ಠಾಣೆ, ರಂಗನಾಥ ಅಂತರಗಟ್ಟಿ ಪೋಲಿಸ್ ಉಪನಿರೀಕ್ಷಕರು ಆಗುಂಬೆ ಪೊಲೀಸ್ ಠಾಣೆ, ಪ್ರವೀಣ್, ಪೊಲೀಸ್ ಉಪ ನಿರೀಕ್ಷಕರು, ರಿಪ್ಪನ್ ಪೇಟೆ ಪೊಲೀಸ್ ಠಾಣೆ ಹಾಗೂ 50 ಜನ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡ ದಿನಾಂಕ : 12-08-2023 ರಂದು ವಿಹಂಗಮ ರೆಸಾರ್ಟ್ ಮೇಲೆ ದಾಳಿ ನಡೆಸಿದೆ .
ದಾಳಿ ವೇಳೆ ಪತ್ತೆಯಾದ ಅಕ್ರಮ ವಸ್ತುಗಳು
1) ಅಂದಾಜು ಮೌಲ್ಯ 1,00,000/- ರೂಗಳ ಒಂದು ಡಬಲ್ ಬ್ಯಾರಲ್ ಬಂದೂಕು
2) ಅಂದಾಜು ಮೌಲ್ಯ 25,000 /- ರೂಗಳ 310 ಜೀವಂತ ಗುಂಡುಗಳು
3) ಒಂದು ಕತ್ತಿ ಮತ್ತು ಒಂದು ಚಾಕು
4) ಮೂರು ಕಾಡು ಕೋಣದ ಕೊಂಬಿನ ಟ್ರೊಫಿ,
5) ಆರು ಜಿಂಕೆ ಕೊಂಬಿನ ಟ್ರೊಫಿ,
6) ಒಂದು ಸಿಸಿ ಟಿವಿ ಡಿವಿ ಆರ್
7) ಅಂದಾಜು ಮೌಲ್ಯ 7,650/- ರೂ ಗಳ ಒಟ್ಟು 51 ಬಿಯರ್ ಟಿನ್ ಗಳು,
8) ಅಂದಾಜು ಮೌಲ್ಯ 1,00,000/- ರೂ ಗಳ ಮದ್ಯ ತುಂಬಿದ ಬಾಟಲ್ ಗಳು
9) ಅಂದಾಜು ಮೌಲ್ಯ 750/- ರೂ ಗಳ ಒಟ್ಟು 6 Breezer ಬಾಟಲ್ ಮತ್ತು
10) 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
GOOD NEWS / ಕೊಡಚಾದ್ರಿ ಪ್ರವಾಸಕ್ಕೆ ಇನ್ನಿಲ್ಲ ನಿರ್ಬಂಧ! ಆದರೆ ಇದೊಂದಕ್ಕಿಲ್ಲ ಅವಕಾಶ!
ಶಿವಮೊಗ್ಗ ಜಿಲ್ಲೆ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ಕೊಡಚಾದ್ರಿ (Kodachadri)ಬೆಟ್ಟ. ಈ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಲಾಗಿತ್ತು. ವೀಕೆಂಡ್ ಪ್ರವಾಸಿಗರಿಗೆ ಶಾಕ್! ಕೊಡಚಾದ್ರಿಗೆ ಹೋಗಲು ಇಲ್ಲ ಅವಕಾಶ! ಪ್ರವೇಶ ನಿಷೇಧ! ಎಂಬ ಶೀರ್ಷಿಕೆಯಡಿಯಲ್ಲಿ ಈ ಬಗ್ಗೆ ಮಲೆನಾಡು ಟುಡೆ ವರದಿಯನ್ನ ಮಾಡಿತ್ತ. ಇದೀಗ 13 ದಿನಗಳ ನಿಷೇಧದ ಬಳಿಕ ಕೊಡಚಾದ್ರಿ ಪ್ರವೇಶಕ್ಕೆ ಮತ್ತೆ ಅನುಕೂಲ ಮಾಡಿಕೊಡಲಾಗಿದೆ.
ಆದೇಶ ವಾಪಸ್
ಕೊಡಚಾದ್ರಿಗೆ ಪ್ರವೇಶ ನಿರಾಕರಿಸಿ ವನ್ಯಜೀವಿ ವಿಭಾಗ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗವು ಜುಲೈ 30ರಿಂದ ಕೊಡಚಾದ್ರಿ ಗೆ ಪ್ರವೇಶ ನಿರ್ಬಂಧ ಹೇರಿತ್ತು. ಇದು ವಿರೋಧಕ್ಕೂ ಕಾರಣವಾಗಿತ್ತು. ಪ್ರವಾಸಿಗರು ಹಾಗೂ ಭಕ್ತರ ಆಗಮನದಿಂದಲೇ ಬದುಕುತ್ತಿರುವ ಕುಟುಂಬಗಳು ನಿಷೇಧವನ್ನು ವಿರೋಧಿಸಿದ್ದವು. ಇದೀಗ ಷರತ್ತು ಸಡಿಸಲಿದ್ದು, ಪ್ರವಾಸಿಗರು ಹಾಗೂ ಭಕ್ತರು ವಾಹನಗಳಲ್ಲಿ ತೆರಳಬಹುದಾಗಿದೆ.
ಇದನ್ನು ಸಹ ಓದಿ : ತೀರ್ಥಹಳ್ಳಿ ವಿಹಂಗಮಧಾಮದ ಮೇಲೆ ಪೊಲೀಸ್ ರೇಡ್! ದೇಶಿ,ವಿದೇಶಿ ಮದ್ಯ, ಕೋವಿ, ಕೊಂಬು ಸೇರಿದಂತೆ ವಿವಿಧ ವಸ್ತುಗಳು ಜಪ್ತಿ! ಏನಿದು ಪ್ರಕರಣ!?
ಚಾರಣಕ್ಕಿಲ್ಲ ಅವಕಾಶ
ಸದ್ಯ ದೊರಕಿರುವ ಮಾಹಿತಿ ಪ್ರಕಾರ, ಚಾರಣ ಮಾಡಲು ಅನುಮತಿ ನೀಡಲಾಗಿಲ್ಲ. ಕೊಡಚಾದ್ರಿ ಬೆಟ್ಟ ಕಡಿದಾದ ದಾರಿಯನ್ನ ಹೊಂದಿದ್ದು, ಯಾವುದಾದರು ಅಪಾಯ ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಚಾರಣಕ್ಕೆ ಅವಕಾಶ ನೀಡಲಾಗಿಲ್ಲ.
ಜೀಪ್ ಮಾಲೀಕರಿಗೆ ಸಂತಸ
ಕೊಡಚಾದ್ರಿಯ ತಪ್ಪಲಿನಲ್ಲಿ ಬೆಟ್ಟಕ್ಕೆ ಕರೆದೊಯ್ಯಲು ನಿಟ್ಟೂರು, ಕೊಲ್ಲೂರು, ಕಟ್ಟಿನಹೊಳೆ, ಸಂಪೆಕಟ್ಟೆ ಸುತ್ತಮುತ್ತ 180 ಕ್ಕೂ ಹೆಚ್ಚುಜೀಪ್ಗಳು ನಿತ್ಯ ಓಡಾಡುತ್ತವೆ. ವನ್ನಜೀವಿ ವಿಭಾಗದ ನಿಯಮ ಸಡಿಲಿಕೆಯಿಂದ ಈ ಜೀಪ್ ಮಾಲೀಕರು ಹಾಗೂ ಚಾಲಕರಿಗೆ ಸಾಕಷ್ಟು ಅನುಕೂಲವಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ರೋಗಿಯನ್ನ ಬಿಟ್ಟು ಶಿಕಾರಿಪುರಕ್ಕೆ ಹೋಗುವಾಗ ನಡೀತು ದುರಂತ! ಕ್ಯಾಂಟರ್‌ಗೆ ಆ್ಯಂಬುಲೆನ್ಸ್ ಡಿಕ್ಕಿ! ನರ್ಸ್ ವಿಶ್ವನಾಥ್ ಸಾವು!
ಶಿಕಾರಿಪುರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು, ರೋಗಿಯೊಬ್ಬರನ್ನ ಶಿವಮೊಗ್ಗ ಆಸ್ಪತ್ರೆಗೆ ಬಿಟ್ಟು ಆ್ಯಂಬುಲೆನ್ಸ್ನಲ್ಲಿ ವಾಪಸ್ ಆಗುವಾಗ ಸಂಭವಿಸಿದ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?
ನ್ಯಾಮತಿ ತಾಲ್ಲೂಕಿನ ಶಿಕಾರಿಪುರ-ಸವಳಂಗ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಕ್ಯಾಂಟರ್‌ಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಸ್ಟಾಫ್ ನರ್ಸ್ ವಿಶ್ವನಾಥ ಮನಗೊಳಿ (30) ಅವರು ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ
ತೀವ್ರ ಗಂಭೀರ ಸ್ವರೂಪದಲ್ಲಿದ್ದ ರೋಗಿಯನ್ನು ಶಿಕಾರಿಪುರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಶ್ವನಾಥ್ ಆ್ಯಂಬುಲೆನ್ಸ್ನಲ್ಲಿ ಕರೆತಂದಿದ್ದರು. ಆನಂತರ ವಾಪಸ್ ಶಿಕಾರಿಪುರಕ್ಕೆ ಸವಳಂಗ ರಸ್ತೆಯ ಮೂಲಕ ಹೋಗುವಾಗ, ಹೊಸಜೋಗ ಬಳಿ ಈ ಅಪಘಾತ ಸಂಭವಿಸಿದೆ.
ಎಲ್ಲಿಯುವರು ವಿಶ್ವನಾಥ್ ?
ಜಮಖಂಡಿ: ಪಟ್ಟಣದ ಸಿದ್ದ ರಾಮೇಶ್ವರ ಬಡಾವಣೆ ವಾಸಿ ವಿಶ್ವನಾಥ್ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶುಶೂಪಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು.
ಇನ್ನಿಬ್ಬರಿಗೆ ಗಾಯ
ಘಟನೆಯಲ್ಲಿ ಕ್ಯಾಂಟರ್ ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ಆ್ಯಂಬುಲೆನ್ಸ್ನಲ್ಲಿದ್ದ ವಿಶ್ವನಾಥ ಮನಗೊಳಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಆ್ಯಂಬುಲೆನ್ಸ್ ಮತ್ತು ಕ್ಯಾಂಟರ್ ಲಾರಿ ಚಾಲಕರಿಗೆ ಗಾಯಗಳಾಗಿದ್ದು, ಇಬ್ಬರಿಗೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು
ಭದ್ರಾವತಿ ಶಾಸಕರಿಗೆ ಹೊಸ ಜವಾಬ್ದಾರಿ! ಮಿಸ್ ಆಯ್ತಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!?
ಶಿವಮೊಗ್ಗ ನಗರ ಶಾಸಕರಿಂದ ಉದ್ಘಾಟನೆಗೊಂಡ TS ಸರ್ಕಲ್! ಇಲ್ಲಿರೋ ವಿಶೇಷ ಏನು ಗೊತ್ತಾ?
