ತೀರ್ಥಹಳ್ಳಿಯಲ್ಲಿ ಕಾಮನ್​ ಮ್ಯಾನ್​ ಪೊಲೀಸ್! ದನಗಳ್ಳರನ್ನ ಹಿಡಿದ ಸಾರ್ವಜನಿಕರು!

Common man cop in Thirthahalli! The public caught the cattle smugglers!

ತೀರ್ಥಹಳ್ಳಿಯಲ್ಲಿ ಕಾಮನ್​ ಮ್ಯಾನ್​ ಪೊಲೀಸ್! ದನಗಳ್ಳರನ್ನ ಹಿಡಿದ ಸಾರ್ವಜನಿಕರು!
Common man cop in Thirthahalli! The public caught the cattle smugglers!

SHIVAMOGGA  |  Jan 24, 2024  |ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೆದ್ದೂರು ಸಮೀಪ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ  ವ್ಯಕ್ತಿಯೋರ್ವನನ್ನು ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ತೀರ್ಥಹಳ್ಳಿ ದನಗಳ್ಳತನ ವಿಪರೀತವಾಗಿ ನಡೆಯುತ್ತಿದೆ. ಇದರ ಬಗ್ಗೆ ಅಲ್ಲಿಯ ಪೊಲೀಸರು ಸಹ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಐಶರಾಮಿ ಕಾರುಗಳಲ್ಲಿ ಬಂದು ಜನರ ಎದುರೇ ದನಗಳನ್ನ ಎಳೆದುಕೊಂಡು ಹೋಗುವ ದೃಶ್ಯಗಳ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. 

ಈ ನಡುವೆ ತೀರ್ಥಹಳ್ಳಿಯ ಹೆದ್ದೂರಿನ ಸಮೀಪ ಹೊಸಳ್ಳಿಯಲ್ಲಿ ಬೆಳಗಿನ ಜಾವ ಹಸುಗಳನ್ನ ವ್ಯಕ್ತಿಯೊಬ್ಬ ಗೂಡ್ಸ್​ ವಾಹನದಲ್ಲಿ ಸಾಗಿಸಲು ಮುಂದಾಗಿದ್ದಾನೆ. ಹಸುಗಳ ಕೂಗು ಕೇಳಿದ ಜನರು ಅಲರ್ಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಅಲ್ಲದೆ ವಾಹನವವನ್ನು ಹಿಂಬಾಲಿಸಿ ತಡೆದು ಅದನ್ನ ಹಿಡಿದಿದ್ದಾರೆ. 

ಆ ಬಳಿಕ ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರಿಗೆ ವಾಹನ ಹಿಡಿದಿರುವುದಾಗಿ ವಿಷಯ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.