KARNATAKA NEWS/ ONLINE / Malenadu today/ Sep 1, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸ ಸೇತುವೆ ಪಕ್ಕದ ಪೊದೆಯೊಂದರಲ್ಲಿ ಪುಟ್ಟ ಹೆಣ್ಣುಮಗುವೊಂದು ಪತ್ತೆಯಾಗಿದೆ. ಯಾರೋ ಮಗುವನ್ನು ಪೊದೆಯಲ್ಲಿ ಬಿಟ್ಟು ಹೊರಟುಹೋಗಿದ್ದಾರೆ. ಸ್ಥಳೀಯರು ಮಗುವನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುಮಾರು 5 ರಿಂದ 6 ತಿಂಗಳ ಸೀಳುತುಟಿ ಹೊಂದಿರುವ ಹೆಣ್ಣು ಮಗುವನ್ನು ಡಿಸಿಪಿಯು ಘಟಕ ಮತ್ತು ಭದ್ರಾವತಿ ಹಳೆನಗರ ಪೊಲೀಸ್ ಠಾಣಾಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದಾಖಲಿಸಿದ್ಧಾರೆ.
ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ, ದೂ.ಸಂ: 08182-295511 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್
