ಸಂತೋಷ್‌ ಲಾಡ್‌ ಹೇಳಿದ 105 ಪರ್ಸೆಂಟ್‌ ಇವಿಎಂ ಟ್ಯಾಂಪರಿಂಗ್‌ ಕಥೆ

105 percent EVM tampering story told by Santhosh Lad

ಸಂತೋಷ್‌ ಲಾಡ್‌ ಹೇಳಿದ 105 ಪರ್ಸೆಂಟ್‌ ಇವಿಎಂ ಟ್ಯಾಂಪರಿಂಗ್‌ ಕಥೆ
Santhosh Lad

SHIVAMOGGA | MALENADUTODAY NEWS | Apr 30, 2024    ‌ 

ದೇಶದಲ್ಲಿ ಇವಿಎಂ ಟ್ಯಾಂಪರಿಂಗ್ ಆಗದೆ ಹೋದರೆ ಖಂಡಿತ ಬಿಜೆಪಿ ಕಡಿಮೆ ಮಾರ್ಜಿನ್ ನಲ್ಲಿ ಸೋಲುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ,ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಸುಳ್ಳು ಹೇಳಿದ್ದಾರೆ. ಅವರ ಸುಳ್ಳುಗಳೇ ನಮ್ಮ ಗೆಲುವಿಗೆ ಸಹಕಾರಿಯಾಗಿರುತ್ತದೆ ಎಂದರು.  

 

ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ನಾವು ನೋಡಿಯೇ ಇಲ್ಲ. ಅವರು ಹಿಂದೂ-ಮುಸ್ಲಿಮ್‌ ವಿಷಯವನ್ನಿಟ್ಟುಕೊಂಡೇ ಮಾತನಾಡುತ್ತಿದ್ದಾರೆ. ತಾಳಿ ಬಗ್ಗೆ ಮಾತನಾಡುತ್ತಿದ್ದಾರೆ. ಇವೆಲ್ಲವೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಪ್ರಧಾನಮಂತ್ರಿಯಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಸಂತೋಷ್‌ ಲಾಡ್ ಪ್ರಶ್ನಿಸಿದ್ದಾರೆ. ‌ʼ

 

ಮೋದಿಯವರು ಇವಿಎಂ ಅನ್ನು ಟ್ಯಾಂಪರ್ ಮಾಡದೆ ಚುನಾವಣೆ ಮಾಡಲಿ. ಯಾಕೆಂದರೆ ಕೇರಳ ಮತ್ತು ತ್ರಿಪುರದಲ್ಲಿನ ಎರಡು ಘಟನೆಗಳು ಇವಿಎಂ ಬಗ್ಗೆ ಅನುಮಾನ ಮೂಡಿಸಿದೆ. ತ್ರಿಪುರದಲ್ಲಿ 105 ಪರ್ಸೆಂಟ್ ಓಟ್ ಆಗಿದೆ. ಹೀಗಾಗಲು ಹೇಗೆ ಸಾಧ್ಯ. ಸೋರ್ಸ್ ಹುಡುಕುವುದಲ್ಲಿ  ವಿಶ್ವಗುರು ಮಹಾ ನಿಸ್ಸಿಮರು ಎಂದು ಮೋದಿಯನ್ನು ಕುಟುಕಿದ ಸಂತೋಷ್ ಇವಿಎಂ ಮಿಷನ್ ಟ್ಯಾಂಪರ್ ಮಾಡದೆ ಹೋದರೆ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು. ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಇವಿಎಂ ಟ್ಯಾಂಪರ್ ಮಾಡದೆ ಹೋದರೆ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಸೋಲುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.,

 

ಇನ್ನು ಹಾಸನ ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರೀಯಿಸಿ ಮಾತನಾಡಿದ ಸಂತೋಷ್ ಲಾಡ್ ಪ್ರಕರಣವನ್ನು ಸರ್ಕಾರ ಎಸ್.ಐ.ಟಿ. ಗೆ ವಹಿಸಿದೆ . ಆ ಘಟನೆಗಳು ನಡೆಯಬಾರದಿತ್ತು ನಡೆದು ಹೋಗಿದೆ. ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ನಮ್ಮ ಸರ್ಕಾರ ಶಿಕ್ಷೆ ನೀಡಲಿದೆ .ನೊಂದ ಮಹಿಳೆಯರ‌ ವಿಡಿಯೋ, ಪೋಟೋಗಳು ವೈರಲ್ ಆಗಿವೆ. ಈ ಬೆಳವಣಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ಫಾರೀನ್ ಗೆ ಹೋಗುವ ಮುನ್ನ ರೆಡ್ ಕಾರ್ನರ್ ನೋಟೀಸ್ ಹೊರಡಿಸಬಹುದಿತ್ತು. ಏರ್ ಪೋರ್ಟ್ ನೋಡಿಕೊಳ್ಳುವ ಜವಬ್ದಾರಿ ಕೇಂದ್ರ ಸರ್ಕಾರದ್ದು. ಯಾಕೆ ಕೇಂದ್ರ ಬಿಜೆಪಿ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಉತ್ತರ ನೀಡುತ್ತಿಲ್ಲ. ಈ ಘಟನೆ ನಡೆದಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿದೆ. ಸೋಷಿಯಲ್ ಮಿಡಿಯಾದಲ್ಲಿ ಹೆಣ್ಣು ಮಕ್ಕಳ ವಿಡಿಯೋ ವೈರಲ್ ಮಾಡಬೇಡಿ ಎಂದು ಜನತೆಗೆ ಸಂತೋಷ್ ಲಾಡ್ ಮನವಿ ಮಾಡಿದ್ದಾರೆ

 

ವಿಜಯೇಂದ್ರರವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂತೋಷ್ ಲಾಡ್, ನಾಲಾಯಕ್ ಎಂದು ನನಗೆ ಅಂದ್ರೆ ಪರವಾಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯಗೂ ಹೀಗೂ ಹೇಳಿದ್ರು. ಅದು ನನಗೆ ಬೇಸರವಾಯ್ತು. ಅವರಿಗೆ ಪ್ರಶ್ನೆ ಅರಿಗಿಸಿಕೊಳ್ಳೋಕೆ ಆಗ್ತಿಲ್ಲ. ಹಾಗಾಗಿ ಅವರು ಹೀಗೆ ಮಾತಾನಾಡುತ್ತಿದ್ದಾರೆ. ಅವರು ಯುವ ನಾಯಕ ಇದ್ದಾರೆ ಈ ರೀತಿ ಮಾತಾನಾಡೋದು ಒಳ್ಳೆಯದು ಅಲ್ಲ ಎಂದಿದ್ದಾರೆ.