ಶಿವಮೊಗ್ಗ | ಎಸ್‌ ಬಂಗಾರಪ್ಪರನ್ನ ನೆನಪಿಸಿದ ಬಿವೈ ರಾಘವೇಂದ್ರ | ದಾಖಲೆಯ ವಿಷಯ ಏನು ಗೊತ್ತಾ?

B.Y. Raghavendra has secured his fourth consecutive victory in the Shivamogga Lok Sabha constituency, equalling S. Bangarappa's record

ಶಿವಮೊಗ್ಗ | ಎಸ್‌ ಬಂಗಾರಪ್ಪರನ್ನ ನೆನಪಿಸಿದ ಬಿವೈ ರಾಘವೇಂದ್ರ | ದಾಖಲೆಯ ವಿಷಯ ಏನು ಗೊತ್ತಾ?
B.Y. Raghavendra ,S. Bangarappa record

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಶಿವಮೊಗ್ಗಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ನಾಲ್ಕನೇ ಬಾರಿ ಗೆಲುವು ಸಾಧಿಸುವ ಮೂಲಕ ಬಂಗಾರಪ್ಪ ಅವರ ದಾಖಲೆ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದ ಅತಿ ಹೆಚ್ಚು ಅಂತರದ ಗೆಲುವು ಸಾಧಿಸುವ ಮೂಲಕ ಹಿಂದಿನ ರೆಕಾರ್ಡ್ ಮುರಿದಿದ್ದಾರೆ.

ನಿನ್ನೆ ನಡೆದ ಮತ ಎಣಿಕೆ ಆರಂಭದಲ್ಲಿ ಗೀತಾ ಶಿವರಾಜ್‌ಕುಮಾರ್ ಒಂದೂವರ ಸಾವಿರ ಮತಗಳ ಅಂತರದ ಲೀಡ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಮೊದಲನೇ ಸುತ್ತಿನ ಮತ ಎಣಿಕೆ ಮುಗಿಯುವಷ್ಟರಲ್ಲಿ ಬಿ.ವೈ.ರಾಘವೇಂದ್ರ ಲೀಡ್ ಸಾಧಿಸಿದ್ದರು. ಅದಾದ ಬಳಿಕ ಯಾವುದೇ ಸುತ್ತಿನಲ್ಲೂ ಗೀತಾರಿಗೆ ಲೀಡ್‌ ಸಿಗಲಿಲ್ಲ. 

ಇನ್ನೂ ಬಿವೈ ರಾಘವೇಂದ್ರರವರು ಈ ಸಲ ಪ್ರಮುಖ ಸಾಧನೆಗಳನ್ನ ತಮ್ಮದೆ ಹೆಸರಿನಲ್ಲಿ ದಾಖಲಿಸಿದ್ದಾರೆ. 2009 ರಲ್ಲಿ ಅವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ 482,783 ಮತಗಳನ್ನು ಪಡೆದಿದ್ದು ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮತ ಪಡೆದಿದ್ದರು

ಆನಂತರ 2014 ರಲ್ಲಿ ಬಿಎಸ್‌ ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು, ಅದಾದ ಬಳಿಕ 2018 ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿವೈಆರ್‌ ಮತ್ತೆ ಸ್ಪರ್ಧಿಸಿ 543,306 ಮತಗಳನ್ನ ಪಡೆದಿದ್ದರು. ಆಗಲು ಸಲ ಅವರು 50.73 ಶೆಕಡಾವಾರು ಮತ ಪಡೆದಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದ್ದರೇ ಶೇಕಡಾವಾರು ಮತಗಳಲ್ಲಿ ತುಸು ಕಡಿಮೆಯಾಗಿತ್ತು. 

ಇನ್ನೂ 2019 ರಲ್ಲಿ ನಡೆದ ಚುನಾವಣೆಯಲ್ಲಿ 729,872 ಮತ ಪಡೆದಿದ್ದ ರಾಘವೇಂದ್ರ ಶೇಕಡಾ ವಾರು56.86 ರಷ್ಟು ಮತಪಡೆದು ತಮ್ಮ ಗ್ರಾಫ್‌ ಏರಿಸಿಕೊಂಡಿದ್ದರು. ಇನ್ನೂ ಈ ಸಲ ಅಂದರೆ 2024 ರ ಚುನಾವಣೆಯಲ್ಲಿ 7,78,721 ಮತಗಳನ್ನ ಪಡೆದು ನಾಲ್ಕನೇ ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಈ ಸಲ ರಾಘವೇಂದ್ರರವರು ತಮ್ಮ ಮತಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು 15 ವರ್ಷದಲ್ಲಿ ಅವರಿಗೆ ಬಿದ್ದ ಮತಗಳ ಪ್ರಮಾಣ ಎರಡುವರೆ ಲಕ್ಷಕ್ಕಿಂತಲೂ ಹೆಚ್ಚಾಗಿದೆ. 

ನಾಲ್ಕನೆ ಬಾರಿಗೆ ಆಯ್ಕೆಯಾಗುವ  ಮೂಲಕ ಶಿವಮೊಗ್ಗದಲ್ಲಿ ಅತಿಹೆಚ್ಚು ಭಾರೀ ಸಂಸದರಾದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ.  ಶಿವಮೊಗ್ಗದಲ್ಲಿ ಟಿವಿ ಚಂದ್ರಶೇಖರ್‌ ಎರಡು ಸಲ ಎಂಪಿಯಾಗಿದ್ದರು. ಆ ಬಳಿಕ  ಮಾಜಿ ಸಿಎಂ ಬಂಗಾರಪ್ಪ  1996, 1999, 2004, ಬಂಗಾರಪ್ಪ ಅವರು 2005 ಸಂಸದರಾಗಿದ್ದರು. ಈ ಮೂಲಕ ಅವರು ನಾಲ್ಕು ಸಲ ಸಂಸದರಾಗಿ ಆಯ್ಕೆಯಾದ ಸಾಧನೆ ಮಾಡಿದ್ರು. ಇನ್ನೂ  2009ರಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಎಸ್‌ ಬಂಗಾರಪ್ಪ ಬಳಿಕ ಸೋಲು ಕಂಡಿದ್ದರು. 2009ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಬಿ.ವೈ.ರಾಘವೇಂದ್ರ, 2018ರ ಉಪ ಚುನಾವಣೆ, 2019 ಜನರಲ್‌ ಎಲೆಕ್ಷನ್‌ ನಲ್ಲಿ ಗೆದ್ದಿದ್ದರು. ಇದೀಗ ಅಂದರೆ, 2024ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಂಗಾರಪ್ಪರವರ ಸಾಲಿನಲ್ಲಿ ಸೇರಿದ್ದಾರೆ. ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್‌ ಹೀಗೆ ಸಾರೆಕೊಪ್ಪ ಬಂಗಾರಪ್ಪರವರು ಹಾಗೂ ಅವರ ಮಕ್ಕಳನ್ನ ಸೋಲಿಸಿದ ದಾಖಲೆಯುನ್ನು ಸಹ ಬಿವೈ ರಾಘವೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. 

B.Y. Raghavendra has secured his fourth consecutive victory in the Shivamogga Lok Sabha constituency, equalling S. Bangarappa's record. He also broke the previous record for the largest victory margin. Initially, Geetha Shivarajkumar led by a thousand votes, but B.Y. Raghavendra overtook her in the first round and maintained his lead thereafter. B.Y. Raghavendra has consistently increased his vote share over the years, from 50% in 2009 to 56.86% in 2019, and now, in 2024, he secured 7,78,721 votes. This victory places him alongside S. Bangarappa as the only individuals to have been elected four times from Shivamogga. B.Y. Raghavendra's win also marks his repeated success against members of the Bangarappa family, including S. Bangarappa, Madhu Bangarappa, and Geetha Shivarajkumar.