ಗೆಲುವಿನ ನಗುವಿನಲ್ಲಿ ಬಿವೈ ರಾಘವೇಂದ್ರ ಸುದ್ದಿಗೋಷ್ಟಿ | ಏನಂದ್ರು ಸಂಸದರು? ವಿವರ ಇಲ್ಲಿದೆ ಓದಿ

BY Raghavendra news conference in victory smile What are MPs? Read the details here

ಗೆಲುವಿನ ನಗುವಿನಲ್ಲಿ ಬಿವೈ ರಾಘವೇಂದ್ರ ಸುದ್ದಿಗೋಷ್ಟಿ | ಏನಂದ್ರು ಸಂಸದರು? ವಿವರ ಇಲ್ಲಿದೆ ಓದಿ
BY Raghavendra news

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಬಿವೈ ರಾಘವೇಂದ್ರ ಇವತ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎನ್‌ಡಿಎ ಮೈತ್ರಿ ಕೂಟ 293 ಸ್ಥಾನಗೆದ್ದು ಸಾಧನೆ ಮಾಡಿದೆ. ಸ್ವಾತಂತ್ರ ನಂತರ ಕಾಂಗ್ರೆಸ್ಸೇತರ ಪಕ್ಷವಾಗಿ ಮೂರನೇ ಬಾರಿಗೆ NDA ಅಧಿಕಾರಕ್ಕೆ ಬರುತ್ತಿದೆ ಎಂದರು. 

ರಾಜ್ಯದಲ್ಲಿ ಡಬಲ್ ಡಿಜಿಟ್ ದಾಟುತ್ತೇವೆ ಅಂತ ಸಿಎಂ,ಡಿಸಿಎಂ ಹೇಳುತ್ತಿದ್ದರು. ರಾಜ್ಯದಲ್ಲಿ ಎನ್ಡಿಎ 19 ಸ್ಥಾನ ಗೆದ್ದಿದೆ ಕಾಂಗ್ರೆಸ್ ಗೆ ರಾಜ್ಯದಲ್ಲಿ ಮುಖಭಂಗವಾಗಿದೆ ಎಂದ BYR ಶಿವಮೊಗ್ಗ ಕ್ಷೇತ್ರದ ಮತದಾರರು ತಮಗೆ ಬೆಂಬಲ ಸೂಚಿಸಿದ್ದಾರೆ ನನ್ನ ಗೆಲುವನ್ನು ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಸಮರ್ಪನೆ ಮಾಡುತ್ತೇನೆ ಎಂದರು. 

ಪರಿಸರ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದ ಅವರು ಮಲೆನಾಡಿನ ಸಂಸ್ಕೃತಿ,ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ, ಜನರ ಪ್ರೀತಿಯನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದರು

ವಿರೋಧ ಪಕ್ಷಗಳಿಂದ ಅಪಪ್ರಚಾರಗಳು ಆಯ್ತು, ಮತದಾನದ ಮೂಲಕ ಜನ ಅಪಪ್ರಚಾರಗಳಿಗೆ ಉತ್ತರ ಕೊಟ್ಟಿದ್ದಾರೆ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ,  ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.  ಸಂಘಪರಿವಾರದ ಪ್ರಮುಖರು ಆಶೀರ್ವಾದ ಮಾಡಿದ್ದಾರೆ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಕೆಲಸ ಮಾಡುತ್ತೇನೆ, ಜಿಲ್ಲಾಮಂತ್ರಿಗಳ ಕ್ಷೇತ್ರದಲ್ಲಿ ಹೆಚ್ಚಿನ ಮತ ನೀಡಿದ್ದಾರೆ ನನಗೆ ಚುನಾವಣಾ ಪ್ರತಿನಿಧಿಯಾಗಿ ಕೆಲಸ ಮಾಡಿದ ಸಂತೃಪ್ತಿ ಇದೆ ಎಂದರು. 

BY Raghavendra, who was elected for the fourth time in the Shimoga Lok Sabha constituency, held a press conference today.