ಲೋಕಸಭಾ ಚುನಾವಣೆ 2024 | ಶಿವಮೊಗ್ಗದಲ್ಲಿ ದಾರಿತಪ್ಪುತ್ತಿದೆ ಮಾತು! ಬಸ್​ಸ್ಟ್ಯಾಂಡ್ ರಾಘು ಎಂದಿದ್ದಕ್ಕೆ ಗುದ್ದಲಿ ಗೋಪಾಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ

Lok Sabha Election 2024 | Talk in Shimoga! The BJP district president called Gudali Gopala for bus stand Raghu word

ಲೋಕಸಭಾ ಚುನಾವಣೆ 2024 |  ಶಿವಮೊಗ್ಗದಲ್ಲಿ ದಾರಿತಪ್ಪುತ್ತಿದೆ  ಮಾತು! ಬಸ್​ಸ್ಟ್ಯಾಂಡ್ ರಾಘು ಎಂದಿದ್ದಕ್ಕೆ ಗುದ್ದಲಿ ಗೋಪಾಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ
Gudali Gopala, bus stand Raghu

shivamogga Mar 21, 2024 ಶಿವಮೊಗ್ಗದಲ್ಲಿ ಪ್ರಚಾರ ಆರಂಭಿಸಿದ ಗೀತಾ ಶಿವರಾಜ್ ಕುಮಾರ್ ಹಾಗೂ ಮಧು ಬಂಗಾರಪ್ಪ ನಿನ್ನೆ ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು. ಈ ವೇಳೆ ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಚಿವರ ಈ ಮಾತಿಗೆ ಇದೀಗ ಬಿಜೆಪಿ ಕೌಂಟರ್​ ಕೊಟ್ಟಿದೆ. 

ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್​  ಮಧು ಬಂಗರಾಪ್ಪನವರು ಕೀಳು ಅಭಿರುಚಿಯ ಭಾಷೆಗಳನ್ನು ಬಳಸುತ್ತಾರೆ ಅವರು ಬಳಸುವ ಬಾಷೆಯ ಮೇಲೆ ಅವರು ಹಿಡಿತ ಇಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.   

ನಿನ್ನೆ ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಹಡ್ಬಿಟ್ಟಿ ಎಂಬ ಎಂಬ ಕೀಳು ಅಭಿರುಚಿ ಹೊಂದಿದ ಭಾಷೆಗಳನ್ನೆಲ್ಲಾ ಬಳಸಲಾಗಿದೆ.. ಅವರು ಸಚಿವರಾಗಿ ಅಂತಹ ಭಾಷೆಗಳನ್ನು ಬಳಸುವುದು ಸರಿಯಲ್ಲ ಇಂತಹ ಪದಗಳನ್ನು ಬಳಸುವುದು ಅವರು ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ ಇದು ನಮ್ಮ ಎಚ್ಚರಿಕೆ ಎಂದರು. 

ನಂತರ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಮಾತನಾಡಿ ಇಂದು ರಾಜ್ಯದಲ್ಲಿ ಬರಗಾಲ ಇಡೀ ರಾಜ್ಯವನ್ನು ಆವರಿಸಿದೆ, 222  ಕ್ಷೇತ್ರದಲ್ಲಿ ಇಂದು ಬರ ತಾಂಡವವಾಡುತ್ತಿದ್ದು ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿದೆ. ಮಲೆನಾಡಲ್ಲಿ ಕಾಡಿನಲ್ಲಿ ಹೊಂಡ ತೋಡಿ ಟ್ಯಾಂಕರ್ ಮೂಲಕ ನೀರನ್ನು ತುಂಬಿಸಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಆದರೆ ಸಿದ್ದರಾಮಯ್ಯ ಅವರು ರಾಜಕಾರಣವನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಜನರ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ. ಜಿಲ್ಲಾ ಉಸ್ತುವಾರಿಯಾದ ಮಧು ಬಂಗಾರಪ್ಪ ಜಿಲ್ಲೆಯ ಬರದ ನಿರ್ವಹಣೆಯಲ್ಲಿ  ಸಂಪೂರ್ಣ ವಿಫಲವಾಗಿದ್ದಾರೆ ಎಂದರು,  

ಇದೇ ವೇಳೇ ಬೇಳೂರು ಗೋಪಾಲಕೃಷ್ಣರವರನ್ನ ಗುದ್ದಲಿ ಗೋಪಾಲ ಎಂದು ಕರೆಯುತ್ತಿದ್ದರು ಎಂದ ಟಿಡಿ ಮೇಘರಾಜ್​ ಸಂಸದ ರಾಘವೇಂದ್ರರವರನ್ನ ಬಸ್​ ಸ್ಟ್ಯಾಂಡ್​ ರಾಘು ಎಂದು ಕರೆದಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ.  ಬೇಳೂರು ಗೋಪಾಲಕೃಷ್ಣ ಅವರು ಸಂಸದ ರಾಘವೇಂದ್ರ ಅವರನ್ನು ಬಸ್​ ಸ್ಟ್ಯಾಂಡ್  ರಾಘು ಎಂದು ಕರೆದಿದ್ದಾರೆ. ಹೌದು ಅವರು ಬಸ್​ ಸ್ಟ್ಯಾಂಡ್  ರಾಘು ವಿಮಾನ ನಿಲ್ದಾಣ ರಾಘು ಅಭಿವೃದ್ಧಿಯ ರಾಘು ಎನಿವಾಗ ಎಂದು ಸವಾಲು ಹಾಕಿದರು.  ಕಾಂಗ್ರೆಸ್‌ನವರು ಈಗ ಅಭಿವದ್ಧಿಯ ಬಗ್ಗೆ ಟೀಕೆ ಮಾಡ್ತಾ ಇದ್ದಾರೆ. ನಾವು ನಮ್ಮ ಅಭಿವೃದ್ಧಿಗಳನ್ನು ಪ್ರಿಂಟ್ ಹಾಕಿ ಇಟ್ಟಿದ್ದೇವೆ. ಆದರಲ್ಲಿ ಒಂದು ಸುಳ್ಳಿದ್ದರು ನಾವು ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ದ. ಆದರೆ ನೀವು ಏನು ಅಭಿವೃದ್ಧಿ ಮಾಡಿದ್ದೀರ ಎಂಬುದನ್ನು ತೋರಿಸಿ ಇದು ಮಾಧ್ಯಮದ ಮುಂದೆ ಬಹಿರಂಗ ಚರ್ಚೆ ಆಗಲಿ ಚರ್ಚೆಗೆ ನಾವು ಸಿದ್ಧವಿದ್ದೇವೆ. ಇದು ಬಿಜೆಪಿ ನಿಮಗೆ ನೀಡುತ್ತಿರುವ ಪಂಥಾಹ್ವಾನ ಎಂದರು.